ಆ್ಯಪ್ನಗರ

ಹಾಲು ಕುಡಿದು ರಮ್ಜಾನ್‌ನ ರೋಜಾ ಆಚರಣೆ

ಇದೇ ಮೊದಲ ಬಾರಿಗೆ ಹಸುವಿನ ಹಾಲು ಕುಡಿದು ಉಪವಾಸ ಅಂತ್ಯಗೊಳಿಸಲು ಮುಂದಾದ ಮುಸ್ಲಿಮರು.

Indiatimes 31 May 2017, 9:34 pm
ಭೋಪಾಲ್‌: ಗೋವುಗಳ ರಕ್ಷಣೆಯ ಸಂದೇಶ ರವಾನಿಸಲು ರಮ್ಜಾನ್ ಹಬ್ಬದ ಉಪವಾಸ ವ್ರತ ರೋಜಾ ಅಂತ್ಯಕ್ಕೆ ಶುಕ್ರವಾರ ಗೋವಿನ ಹಾಲು ನೀಡುವುದಾಗಿ ಉತ್ತರ ಪ್ರದೇಶದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಸ್ಲಿಂ ಘಟಕ ತಿಳಿಸಿದೆ. ಜತೆಗೆ ಗೋವಿನ ಹಾಲಿನಿಂದ ತಯಾರಿಸಿದ ಇತರ ತಿನಿಸುಗಳನ್ನು ಪೂರೈಸಲಿದೆ.
Vijaya Karnataka Web cow milk for breaking fast
ಹಾಲು ಕುಡಿದು ರಮ್ಜಾನ್‌ನ ರೋಜಾ ಆಚರಣೆ


ಇದೇ ಮೊದಲ ಬಾರಿಗೆ ಗೋವಿನ ಹಾಲು ಸೇವಿಸುವ ಮೂಲಕ ರೋಜಾ ಅಂತ್ಯಗೊಳ್ಳುತ್ತಿದೆ ಎಂದು ಉತ್ತರಖಂಡ ಮತ್ತು ಉತ್ತರಪ್ರದೇಶದ ಮುಸ್ಲಿಂ ರಾಷ್ಟ್ರೀಯ ಮಂಚ್‌ (ಎಂಆರ್‌ಎಂ) ವಕ್ತಾರ ಮಹಿರಾಜ್ ಧ್ವಜ್ ಸಿಂಗ್ ತಿಳಿಸಿದ್ದಾರೆ.

ಹಸುವಿನ ಹಾಲು ಆರೋಗ್ಯಕ್ಕೆ ಉತ್ತಮ ಎಂದು ಮುಸ್ಲಿಂ ತಜ್ಞರು ಒಪ್ಪಿಕೊಂಡಿದ್ದಾರೆ. ಚಿಕಿತ್ಸೆಗೆ ತುಪ್ಪವನ್ನು ಬಳಕೆ ಮಾಡುತ್ತಾರೆ. ಅನೇಕ ಆಯುರ್ವೇದ ಔಷಧಗಳನ್ನು ತಯಾರಿಸಲು ತುಪ್ಪ ಪ್ರಮುಖವಾದದ್ದು. ಎಲ್ಲ ಪ್ರಾಣಿ, ಪಕ್ಷಿ, ಮರಗಿಡಗಳು ಅಲ್ಲಾಹುವಿನ ಕೃಪೆಯಿಂದ ಅಸ್ತಿತ್ವದಲ್ಲಿವೆ. ಅವುಗಳನ್ನು ಹಿಂಸಿಸುವುದರಿಂದ ಅಲ್ಲಾಹುವಿನ ಅವಕೃಪೆಗೆ ಒಳಗಾಗುತ್ತೇವೆ. ರೋಜಾ ಅಂತ್ಯದ ಪವಿತ್ರ ದಿನದಂದು ಗೋವುಗಳ ರಕ್ಷಣೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಮಹಿರಾಜ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ