ಆ್ಯಪ್ನಗರ

ರಕ್ತ ಸಂಬಂಧ: ತಾಯಿ ಮಗುವಿನ ಪ್ರಾಣ ಉಳಿಸಿದ CRPF ಯೋಧ

ಗುಲ್ಶಾನ್‌ ನಿವಾಸಿಯಾಗಿರುವ ಪರಿವಾರ ಸಿಆರ್‌ಪಿಎಫ್ ಸಹಾಯವಾಣಿ CRPF Madadgar ಬಳಿ ಸಹಾಯ ಯಾಚಿಸಿದ್ದರು.

Times Now 22 Apr 2019, 5:33 pm
ಹೊಸದಿಲ್ಲಿ: ಗಡಿ ಕಾಯುವ ಮೂಲಕ ಜನ್ಮಭೂಮಿಯ ಸೇವೆ ಮಾಡುವ ಸೈನಿಕನೊಬ್ಬ, ರಕ್ತದಾನ ಮಾಡುವ ಮೂಲಕ ನವಜಾತ ಶಿಶು ಮತ್ತು ತಾಯಿಯ ಜೀವ ಉಳಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಒಳಗಾಗಿದ್ದಾರೆ.
Vijaya Karnataka Web crpf_jawan_kahsmir_child


ಗುಲ್ಶಾನ್‌ ನಿವಾಸಿಯಾಗಿರುವ ಪರಿವಾರ ಸಿಆರ್‌ಪಿಎಫ್ ಸಹಾಯವಾಣಿ CRPF Madadgar ಬಳಿ ಸಹಾಯ ಯಾಚಿಸಿದ್ದರು.

ಮಗುವಿಗೆ ಜನ್ಮ ನೀಡಿದ 25 ವರ್ಷದ ತಾಯಿಗೆ ರಕ್ತಸ್ರಾವವಾಗಿ ಆಕೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದಳು. ಆ ಸಂದರ್ಭದಲ್ಲಿ ಸಹಾಯಕ್ಕೆ ಬಂದ 53ನೇ ಬಟಾಲಿಯನ್ ಯೋಧ ಗೋಹಿಲ್ ಶೈಲೇಶ್ ತಮ್ಮ ರಕ್ತದಾನ ಮಾಡಿ ತಾಯಿ ಮಗುವಿಗೆ ಪುನರ್ಜನ್ಮ ನೀಡಿದ್ದಾರೆ.


ಸಿಆರ್‌ಪಿಎಫ್ ಅಧಿಕೃತ ಟ್ವಿಟರ್‌ನಲ್ಲಿ ಈ ಬಗ್ಗೆ 'ರಕ್ತ ಸಂಬಂಧ' ಎಂಬ ಶೀರ್ಷಿಕೆಯಡಿಯಲ್ಲಿ ಟ್ವೀಟ್ ಮಾಡಲಾಗಿದ್ದು ಫೋಟೋ ಸಮೇತ ಯೋಧನ ಮಹಾತ್ಕಾರ್ಯದ ಬಗ್ಗೆ ಬರೆಯಲಾಗಿದೆ.


ಯೋಧ ಮತ್ತು ನವಜಾತ ಶಿಶುವಿರುವ ಫೋಟೋದಡಿಯಲ್ಲಿ , ''ರಕ್ತ ನೀಡುವ ಮೂಲಕ ಮಗು ಮತ್ತು ತಾಯಿಯನ್ನು ಕಾಪಾಡಿದ, ಜೀವನಪೂರ್ತಿ ಇರುವ ಸಂಬಂಧವಿದು'' ಎಂದು ಬರೆಯಲಾಗಿದೆ.


ಈ ಟ್ವೀಟ್‌ ವೈರಲ್ ಆಗಿದ್ದು, ಟ್ವೀಟಿಗರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.


ಕಾಶ್ಮೀರಿ ನಿವಾಸಿಗಳಿಗೆ ಆರೋಗ್ಯ ಸಂಬಂಧಿ ತೊಡಕು ಎದುರಾದರೆ ತಕ್ಷಣ ಸಹಾಯಕ್ಕೆ ಧಾವಿಸಲು ಸಿಆರ್‌ಪಿಎಫ್ ಸಹಾಯವಾಣಿ CRPF Madadgarನ್ನು 16 ಜೂನ್ , 2017ರಲ್ಲಿ ಆರಂಭಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ