ಆ್ಯಪ್ನಗರ

ಸಿಟಿ ಸ್ಕ್ಯಾ‌ನ್‌ ಅಪಾಯಕಾರಿಯಲ್ಲ, ಸಮಜಾಯಿಷಿ ನೀಡಿದ ಐಆರ್‌ಎಐ

ಈಗ ಅತ್ಯಾಧುನಿಕ ತಂತ್ರಜ್ಞಾನಗಳು ಬಂದಿವೆ. ಈ ಕಡಿಮೆ ತೀವ್ರತೆಯ ಅಲ್ಟ್ರಾ ಕಿರಣಗಳನ್ನು ಬಳಸಲಾಗುತ್ತದೆ. ಏಮ್ಸ್‌ ನಿರ್ದೇಶಕ ಗುಲೇರಿಯಾ ಹೇಳಿದ ಸ್ಥಿತಿ 30-40 ವರ್ಷದ ಹಿಂದೆ ಇತ್ತು ಈಗಿಲ್ಲ ಎಂದು ಭಾರತೀಯ ರೇಡಿಯಾಲಾಜಿಕಲ್‌ ಮತ್ತು ಇಮೇಜಿಂಗ್‌ ಸಂಸ್ಥೆ ಹೇಳಿದೆ.

Vijaya Karnataka 6 May 2021, 9:27 pm
ಹೊಸದಿಲ್ಲಿ: ''ಒಮ್ಮೆ ಸಿಟಿ ಸ್ಕ್ಯಾ‌ನ್‌ ನಡೆಸುವುದು ಎಂದರೆ 300-400 ಎಕ್ಸ್‌ರೇ ಮಾಡಿದಂತೆ,'' ಎಂಬ ದಿಲ್ಲಿ ಏಮ್ಸ್‌ ನಿರ್ದೇಶಕ ಡಾ.ರಣದೀಪ್‌ ಗುಲೇರಿಯಾ ಅವರ ಹೇಳಿಕೆಯನ್ನು ಭಾರತೀಯ ರೇಡಿಯಾಲಾಜಿಕಲ್‌ ಮತ್ತು ಇಮೇಜಿಂಗ್‌ ಸಂಸ್ಥೆ (ಐಆರ್‌ಎಐ) ತಳ್ಳಿ ಹಾಕಿದೆ.
Vijaya Karnataka Web CT Scan


"ಗುಲೇರಿಯಾ ಅವರ ಹೇಳಿಕೆ ದಾರಿತಪ್ಪಿಸುವಂತಿದೆ. ಕೊರೊನಾ ಸೇರಿದಂತೆ ರೋಗ ಪತ್ತೆಯಲ್ಲಿ ಸಿಟಿ ಸ್ಕ್ಯಾ‌ನ್‌ ಮಹತ್ವದ ಪಾತ್ರ ವಹಿಸುತ್ತದೆ. ಈಗ ಅತ್ಯಾಧುನಿಕ ತಂತ್ರಜ್ಞಾನಗಳು ಬಂದಿದ್ದು, ಕಡಿಮೆ ತೀವ್ರತೆಯ ಅಲ್ಟ್ರಾ ಕಿರಣಗಳನ್ನು ಬಳಸಲಾಗುತ್ತದೆ. ಗುಲೇರಿಯಾ ಹೇಳಿದ ಸ್ಥಿತಿ 30-40 ವರ್ಷದ ಹಿಂದೆ ಇದ್ದದ್ದು ಹೌದು. ಈಗ ಒಂದು ಸಿಟಿ ಸ್ಕ್ಯಾ‌ನ್‌ ಕೇವಲ 5-10 ಎಕ್ಸ್‌ರೇಗಳಷ್ಟು ತೀವ್ರತೆ ಹೊಂದಿರುತ್ತದೆ,'' ಎಂದು ಸಂಸ್ಥೆಯ ಅಧಿಕೃತ ಹೇಳಿಕೆ ತಿಳಿಸಿದೆ.


''ಒಂದು ಸಿಟಿ ಸ್ಕ್ಯಾ‌ನ್‌ 300-400 ಎಕ್ಸ್‌ರೇಯಷ್ಟು ಅಲ್ಟ್ರಾ ಕಿರಣಗಳ ಬಳಕೆಯಾಗುತ್ತದೆ. ಹೀಗಾಗಿ ಕೊರೊನಾ ಸೋಂಕಿತರಿಗೆ ಪದೇಪದೆ ಸಿಟಿ ಸ್ಕ್ಯಾ‌ನ್‌ ನಡೆಸುವುದು ಸರಿಯಲ್ಲ. ಯುವಕರು ಆಗಾಗ ಸಿಟಿ ಸ್ಕ್ಯಾ‌ನ್‌ಗೆ ಒಳಪಡುತ್ತಿದ್ದರೆ ಕ್ಯಾನ್ಸರ್‌ಗೆ ಒಳಗಾಗುವ ಅಪಾಯ ಹೆಚ್ಚಿದೆ,'' ಎಂದು ಗುಲೇರಿಯಾ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ