ಆ್ಯಪ್ನಗರ

ಲಾಕಪ್‌ ಡೆತ್‌ ಕೈದಿಗಳ ಬದುಕುವ ಹಕ್ಕಿನ ಹರಣ: ಸುಪ್ರೀಂ

ಪಿಟಿಐ ಹೊಸದಿಲ್ಲಿ 'ಲಾಕಪ್‌ ಡೆತ್‌' ಅಪರಾಧವಾಗಿದ್ದು, ಇಂಥ ಪ್ರಕರಣಗಳು ಕೈದಿಗಳ ಬದುಕು ಹಾಗೂ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿರುವುದಕ್ಕೆ ಸಂಕೇತವಾಗಿದೆ ಎಂದು ಶುಕ್ರವಾರ ...

PTI 16 Sep 2017, 9:38 am

ಹೊಸದಿಲ್ಲಿ: 'ಲಾಕಪ್‌ ಡೆತ್‌' ಅಪರಾಧವಾಗಿದ್ದು, ಇಂಥ ಪ್ರಕರಣಗಳು ಕೈದಿಗಳ ಬದುಕು ಹಾಗೂ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿರುವುದಕ್ಕೆ ಸಂಕೇತವಾಗಿದೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಹೇಳಿದೆ.

ಜೈಲಿನಲ್ಲೂ ಕೈದಿಗಳು ಗೌರವಾನ್ವಿತ ಜೀವನ ನಡೆಸುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಬದುಕುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನೇ ಉಲ್ಲಂಘಿಸಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಕೈದಿಗಳನ್ನು ನಡೆದಾಡುವ ವಸ್ತು ಎಂಬಂತೆ ನಡೆಸಿಕೊಳ್ಳುವುದನ್ನು ಬಿಡಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಮದನ್‌ ಬಿ ಲೋಕೂರು ಹಾಗೂ ದೀಪಕ್‌ ಗುಪ್ತಾರನ್ನೊಳಗೊಂಡ ಪೀಠ ಹೇಳಿತು.

ಜೈಲಿನಲ್ಲಿ ಸಂಭವಿಸುವ ಅಸಹಜ ಸಾವು ಹಾಗೂ ಜೈಲಿನ ಸುಧಾರಣೆ ಕುರಿತು ಕೆಲ ನಿರ್ದೇಶನಗಳನ್ನು ನೀಡಿದ ಪೀಠವು, ಲಾಕಪ್‌ ಡೆತ್‌ ದೊಡ್ಡ ಅಪರಾಧವಾಗಿದ್ದು, ಎಷ್ಟೇ ಪರಿಹಾರ ನೀಡಿದರೂ ಅದಕ್ಕೆ ತಕ್ಕ ಶಿಕ್ಷೆಯಲ್ಲ ಎಂದಿತು.

ಅಧಿಕಾರದಲ್ಲಿರುವವರು ವ್ಯಕ್ತಿಯ ಘನತೆಯೊಂದಿಗೆ ಆಟವಾಡಕೂಡದು ಎಂದು ಎಚ್ಚರಿಸಿದ ಪೀಠ, 2012ರಿಂದ 2015ರ ನಡುವೆ ಕಸ್ಟಡಿಯಲ್ಲಿದ್ದಾಗಲೇ ಸಾವನ್ನಪ್ಪಿದ ವ್ಯಕ್ತಿಗಳ ಪರ ಎಲ್ಲ ಹೈಕೋರ್ಟ್‌ಗಳು ಸ್ವಯಂ ಪ್ರೇರಣೆಯಿಂದ ಅರ್ಜಿ ದಾಖಲಿಸಿಕೊಂಡು, ಅವರ ಕುಟುಂಬಕ್ಕೆ ಯೋಗ್ಯ ಪರಿಹಾರ ನೀಡಬೇಕು ಎಂದು ನಿರ್ದೇಶಿಸಿತು.

Custodial deaths indicates apparent disdain of state: SC
Vijaya Karnataka Web custodial deaths indicates apparent disdain of state sc
ಲಾಕಪ್‌ ಡೆತ್‌ ಕೈದಿಗಳ ಬದುಕುವ ಹಕ್ಕಿನ ಹರಣ: ಸುಪ್ರೀಂ


New Delhi: Custodial death is a crime and such incidents indicate the "apparent disdain" of the State to the life and liberty of prisoners, the Supreme Court said today.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ