ಆ್ಯಪ್ನಗರ

ತಮಿಳುನಾಡು, ಪದುಚೇರಿ ಕರಾವಳಿಗೆ ಅಪ್ಪಳಿಸಿದ ನಿವಾರ್‌ ಚಂಡಮಾರುತ: ಬಿರುಗಾಳಿ, ಭಾರಿ ಮಳೆಗೆ ಬೆಚ್ಚಿಬಿದ್ದ ಜನ!

120- 130 ಕಿಮೀ ವೇಗದಲ್ಲಿ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ತೀರಕ್ಕೆ ಬಂದು ನಿವಾರ್‌ ಚಂಡಮಾರುತ ಅಪ್ಪಳಿಸಿದೆ. ಅಪ್ಪಳಿಸುವ ವೇಳೆ ನಿವಾರ್‌ ಚಂಡಮಾರುತ ಆರ್ಭಟ ಜೋರಾಗಿ ಇತ್ತು ಆದರೆ ಕೊಂಚ ಸಮಯ ಆಗುವ ವೇಳೆ ಚಂಡಮಾರುತ ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಅಪ್ಪಳಿಸಿದ ನಂತರ ಮೂರು ಗಂಟೆ ಬಳಿಕ ಚಂಡಮಾರುತ ಮುಂದೆ ಸಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇಂದು ಸಂಜೆ ವರೆಗೆ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Vijaya Karnataka Web 26 Nov 2020, 8:49 am
ಚೆನ್ನೈ: ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ತೀರಕ್ಕೆ ಬಂದು ನಿವಾರ್‌ ಚಂಡಮಾರುತ ಅಪ್ಪಳಿಸಿದೆ. ಮಾಮಲ್ಲಾಪುರಂ ಹಾಗೂ ಕಾರೈಕಲ್‌ ನಡುವೆ ಗಂಟೆಗೆ 150 ಕಿ.ಮೀ ವೇಗದಲ್ಲಿ 'ನಿವಾರ್‌' ಚಂಡಮಾರುತ ಚಲಿಸುತ್ತಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಪ್ರಚಂಡ ಚಂಡಮಾರುತದ ಪರಿಣಾಮ ತಮಿಳುನಾಡು ಹಾಗೂ ಪುದುಚೇರಿಯ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಬಿರುಗಾಳಿ ಸೃಷ್ಟಿಯಾಗಿದೆ.

ಈಗಲೂ ನಿರಂತರವಾಗಿ ಮಳೆ ಹಾಗೂ ಬಿರುಗಾಳಿ ಬೀಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನಿವಾರ್‌ ಚಂಡಮಾರುತವು ತಮಿಳುನಾಡು ಮತ್ತು ಪುದುಚೇರಿ ಕರಾವಳಿಗೆ ರಾತ್ರಿ 11.30 ರಿಂದ 2.30 ರ ನಡುವೆ 120- 130 ಕಿಮೀ ವೇಗದಲ್ಲಿ ಬಂದು ಅಪ್ಪಳಿಸಿದೆ. ಸತತ ಮೂರು ಗಂಟೆಗೂ ಹೆಚ್ಚಿನ ಕಾಲ ಅಪ್ಪಳಿಸಿ ಮುಂದೆ ಸಾಗಲು ಅದು ಸಮಯ ತೆಗೆದುಕೊಂಡಿದೆ. ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ.


ಆದರೆ ಗಾಳಿಯ ರಭಸಕ್ಕೆ ಹಲವು ಮರಗಳು ಧರೆಗೆ ಉರುಳಿದೆ. ಅಲ್ಲದೆ ಹಲವು ಸಾರ್ವಜನಿಕ ಆಸ್ತಿಗಳಿಗೂ ಹಾನಿಯಾಗಿದೆ. ಇನ್ನು ಸದ್ಯ ತಮಿಳುನಾಡು ಹಾಗೂ ಪುದುಚೇರಿ ಕಡಲತೀರವನ್ನು ಪಾಸ್‌ ಆಗಿ ನಿವಾರ್‌ ಚಂಡಮಾರುತ ಮುಂದೆ ಚಲಿಸಿದ್ದು, ಗುರುವಾರ ಸಂಜೆವರೆಗೆ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.

ನೂತನ ಸಂಸತ್‌ ಭವನಕ್ಕೆ ಡಿಸೆಂಬರ್‌ 2ನೇ ವಾರದಲ್ಲಿ ಶಂಕುಸ್ಥಾಪನೆ!

ಇನ್ನು ತಮಿಳುನಾಡು ಹಾಗೂ ಪದುಚೇರಿ ಕರಾವಳಿ ತೀರಕ್ಕೆ ಅಪ್ಪಳಿಸಿ ನಿವಾರ್‌ ಚಂಡಮಾರುತ ಮುಂದೆ ಚಲಿಸುವ ವೇಳೆ ಚಂಡಮಾರುತ ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಭಯವಿಲ್ಲದಿದ್ದರೂ ಕೂಡ ಮುಂದಿನ ಮೂರು ಗಂಟೆಯಲ್ಲಿ ಭಾರೀ ಮಳೆ, ಸುಂಟರಗಾಳಿ ಸೃಷ್ಟಿಯಾಗಲಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಚಂಡಮಾರುತದ ಪರಿಣಾಮ ತಿರುವನಾಮಲೈ, ಕಡಲೂರು, ಕಲ್ಲಕುರಿಚಿ ಮತ್ತು ತಮಿಳುನಾಡು ಮತ್ತು ಪುದುಚೇರಿಯ ವಿಲುಪ್ಪುರಂ ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಸುಂಟರಗಾಳಿ ಸೃಷ್ಟಿಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸದ್ಯ ಸರಕಾರಗಳ ಮುಂಜಾಗ್ರತಾ ಕ್ರಮದಿಂದ ಯಾವುದೇ ಅವಘಡ ನಡೆದಿಲ್ಲ.

ಮುಂಜಾಗ್ರತಾ ಕ್ರಮಗಳೇನು?

ನಿವಾರ್‌ ಚಂಡ ಮಾರುತ ಅಪ್ಪಳಿಸಿರುವ ಹಿನ್ನೆಲೆ ಇಂದು ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಸಂಜೆ ಅಥವಾ ರಾತ್ರಿವರಗೆ ಭಾರೀ ಮಳೆ ಹಾಗೂ ಗಾಳಿ ಇರಲಿದೆ. ಹೀಗಾಗಿ ಚೆನ್ನೈ ನಗರ ಸೇರಿದಂತೆ ಒಟ್ಟಾರೆ 13 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಿಸಲಾಗಿದೆ. ನಾಗಪಟ್ಟಣಂ, ಕಡಲೂರು, ವಿಲ್ಲುಪುರಂ, ಚೆಂಗಲ್‌ಪಟ್ಟು ಮತ್ತು ಆಂಧ್ರಪ್ರದೇಶದ ನೆಲ್ಲೂರು, ಚಿತ್ತೂರು ಹಾಗೂ ರಾಯಲ್‌ಸೀಮೆಯಲ್ಲಿ ಭಾರಿ ಮಳೆ ಬೀಳುವ ನಿರೀಕ್ಷೆಯಿದೆ.


ಇನ್ನು ತಮಿಳುನಾಡಿನಲ್ಲಿ 19 ಹಾಗೂ ಪುದುಚೇರಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌)6 ತಂಡಗಳು ಸನ್ನದ್ಧವಾಗಿ ಕಾರ್ಯನಿರ್ವಹಿಸಿತ್ತು. ಕಳೆದ ಎರಡು ದಿನಗಳಿಂದಲೂ ರಾಜ್ಯಾದ್ಯಂತ ತಂಡಗಳು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಪ್ರಾಣಹಾನಿ ತಡೆಗಾಗಿ ಎರಡು ಲಕ್ಷಕ್ಕೂ ಅಧಿಕ ಜನರನ್ನು ತಗ್ಗು ಪ್ರದೇಶಗಳಿಂದ ಸ್ಥಳಾಂತರಿಸಿತ್ತು. ಇನ್ನು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜನ್ನು ತಡೆಹಿಡಿಯಲಾಗಿದೆ. ಇನ್ನು ಕಾರೈಕಲ್‌, ಪುದುಚೇರಿ ನಗರದಲ್ಲಿ 72 ಗಂಟೆಗಳವರೆಗೆ 144 ಸೆಕ್ಷನ್‌ ಜಾರಿ ಮಾಡಲಾಗಿದೆ. ಇದೀಗ ಮತ್ತೆ ಚೆನ್ನೈನ ಚೆಂಬರಾಂಬಕ್ಕಂ ಅಣೆಕಟ್ಟಿನಿಂದ ನೀರು ಹೊರಗೆ ಬಿಡುಗಡೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ