ಆ್ಯಪ್ನಗರ

ಗುಜರಾತಿನಲ್ಲಿ ಅಬ್ಬರಿಸಿ ಸಂಜೆ ವೇಳೆ ದುರ್ಬಲಗೊಂಡ ಸೈಕ್ಲೋನ್‌, ತೌಕ್ತೆ ರುದ್ರ ನರ್ತನಕ್ಕೆ ರಾಜ್ಯದಲ್ಲಿ 8 ಬಲಿ

ಮಹಾರಾಷ್ಟ್ರ ಕರಾವಳಿಯಿಂದ ಗಂಟೆಗೆ 180 ಕಿ.ಮೀ ವೇಗದಲ್ಲಿ ಸಾಗಿ, ಸೋಮವಾರ ಮಧ್ಯರಾತ್ರಿ ವೇಳೆಗೆ ಸೌರಾಷ್ಟ್ರ ವಲಯದ ದಿಯು ಮತ್ತು ಉನ್ನ ಕರಾವಳಿ ತೀರಕ್ಕೆ ಅಪ್ಪಳಿಸಿದ್ದ ತೌಕ್ತೆ ಚಂಡಮಾರುತ, ಮಂಗಳವಾರ ಸಂಜೆ ವೇಳೆಗೆ ಗುಜರಾತಿನ ಕರಾವಳಿಯಿಂದ ನಿರ್ಗಮಿಸಿದ್ದು ಕ್ರಮೇಣ ದುರ್ಬಲಗೊಂಡಿದೆ.

Vijaya Karnataka 18 May 2021, 9:49 pm

ಹೈಲೈಟ್ಸ್‌:

  • ಸೋಮವಾರ ಮಧ್ಯರಾತ್ರಿ ವೇಳೆಗೆ ಸೌರಾಷ್ಟ್ರ ವಲಯದ ದಿಯು ಮತ್ತು ಉನ್ನ ಕರಾವಳಿ ತೀರಕ್ಕೆ ಅಪ್ಪಳಿಸಿದ್ದ ತೌಕ್ತೆ ಚಂಡಮಾರುತ
  • ಮಹಾರಾಷ್ಟ್ರ ಕರಾವಳಿಯಿಂದ ಗಂಟೆಗೆ 180 ಕಿ.ಮೀ ವೇಗದಲ್ಲಿ ಸಾಗಿ ಅಪ್ಪಳಿಸಿದ್ದ ಸೈಕ್ಲೋನ್‌
  • ಮಂಗಳವಾರ ಸಂಜೆ ವೇಳೆಗೆ ಗುಜರಾತಿನ ಕರಾವಳಿಯಿಂದ ನಿರ್ಗಮಿಸಿದ್ದು ಕ್ರಮೇಣ ದುರ್ಬಲಗೊಂಡಿದೆ
  • ಆದರೆ ಈ ಅವಧಿಯಲ್ಲಿ ತೌಕ್ತೆ ಅಬ್ಬರಕ್ಕೆ ಗುಜರಾತಿನಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Tauktae, in Una, Gujarat
ಅಹಮದಾಬಾದ್‌: ತೌಕ್ತೆ ಚಂಡಮಾರುತಕ್ಕೆ ಗುಜರಾತಿನಲ್ಲಿ ಮಂಗಳವಾರ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ಕರಾವಳಿಯಿಂದ ಗಂಟೆಗೆ 180 ಕಿ.ಮೀ ವೇಗದಲ್ಲಿ ಸಾಗಿ ಮಧ್ಯರಾತ್ರಿ ವೇಳೆಗೆ ಸೌರಾಷ್ಟ್ರ ವಲಯದ ದಿಯು ಮತ್ತು ಉನ್ನ ಕರಾವಳಿ ತೀರಕ್ಕೆ ಅಪ್ಪಳಿಸಿದ ಚಂಡಮಾರುತ, ಭಾರಿ ಮಳೆಗಾಳಿಯ ಆರ್ಭಟ ಸೃಷ್ಟಿಸಿತು.
''ಮಹಾ ಮಳೆಯ ರಭಸಕ್ಕೆ 16 ಸಾವಿರ ಮನೆಗಳು ಜಖಂಗೊಂಡಿವೆ. 40 ಸಾವಿರಕ್ಕಿಂತ ಹೆಚ್ಚು ಮರಗಳು ಮುರಿದು ಬಿದ್ದಿವೆ. ಕನಿಷ್ಠ 1000 ವಿದ್ಯುತ್‌ ಕಂಬಗಳು ತುಂಡಾಗಿದ್ದು, ವ್ಯಾಪಕ ನಷ್ಟ ಉಂಟಾಗಿದೆ,'' ಎಂದು ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ತಿಳಿಸಿದ್ದಾರೆ.



ಸೌರಾಷ್ಟ್ರದ ಅಮ್ರೇಲಿ ಬಳಿ ಭೂ ಪ್ರವೇಶ ಮಾಡಿದಾಗ ರೌದ್ರಾವತಾರಿಯಾಗಿದ್ದ ತೌಕ್ತೆ, ಮಂಗಳವಾರ ಸಂಜೆ ವೇಳೆಗೆ ಗುಜರಾತಿನ ಕರಾವಳಿಯಿಂದ ನಿರ್ಗಮಿಸಿದ್ದು ಕ್ರಮೇಣ ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತದ ಅಪಾಯಕಾರಿ ನಡೆಯನ್ನು ಮೊದಲೇ ಗ್ರಹಿಸಿದ್ದ ಹವಾಮಾನ ಇಲಾಖೆಗೆ ಸೂಕ್ತ ಮುನ್ನಚ್ಚರಿಕೆ ಕ್ರಮಗಳಿಗೆ ಸೂಚನೆ ನೀಡಿತ್ತು. 2 ಲಕ್ಷ ಜನರನ್ನು ಕರಾವಳಿ ತೀರಗಳಿಂದ ಸುರಕ್ಷಿತ ನೆಲೆಗಳಿಗೆ ಸ್ಥಳಾಂತರಿಸಲಾಗಿತ್ತು. ಸೌರಾಷ್ಟ್ರ ಪ್ರದೇಶದ ಏಷ್ಯಾಟಿಕ್‌ ಸಿಂಹಗಳ ಸುರಕ್ಷತೆ ಮೇಲೂ ನಿಗಾ ಇರಿಸಲಾಗಿತ್ತು. ಆದರೂ ಅನೇಕ ಕಡೆಗಳಿಂದ ದುರ್ಘಟನೆಗಳು ವರದಿಯಾಗಿವೆ.

ಭಾವ್‌ನಗರ ಜಿಲ್ಲೆಯಲ್ಲಿ ಮೂವರು, ರಾಜ್‌ಕೋಟ್‌, ಪಟಾನ್‌, ಅಮ್ರೇಲಿ ಮತ್ತು ವಲ್ಸದ್‌ನಲ್ಲಿತಲಾ ಒಬ್ಬರು ಚಂಡಮಾರುತ ಸಂಬಂಧಿ ದುರಂತಗಳಲ್ಲಿ ಮಡಿದಿದ್ದಾರೆ.



177 ಮಂದಿ ರಕ್ಷಣೆಮಹಾರಾಷ್ಟ್ರದಲ್ಲಿ ಚಂಡಮಾರುತಕ್ಕೆ ಮಂಗಳವಾರ ಇನ್ನೂ ಐವರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿಎರಡು ದಿನಗಳಿಂದ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ, ತೌಕ್ತೆ ಅಪ್ಪಳಿಸುವ ಒಂದು ತಾಸು ಮೊದಲು ಅರಬ್ಬಿ ಸಮುದ್ರದ ಬಾರ್ಜ್‌ ಒಂದರಲ್ಲಿ ಸಿಲುಕಿದ್ದ 177 ಮಂದಿಯನ್ನು ನೌಕಾ ಪಡೆ ರಕ್ಷಣೆ ಮಾಡಿದೆ. ಮುಂಬಯಿನಿಂದ 70 ದೂರದಲ್ಲಿರುವ ತೈಲ ಕೊಳವೆ ಬಾವಿಗೆ ತೆರಳಿದ್ದ ಬಾರ್ಜ್‌, ಹಿಂದಿರುಗುವ ಮಾರ್ಗಮಧ್ಯೆ ಅಪಾಯಕ್ಕೆ ಸಿಲುಕಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ