ಆ್ಯಪ್ನಗರ

ದಿನದ ದುಡಿಮೆಯನ್ನು ಯೋಧರ ಪರಿಹಾರ ನಿಧಿಗೆ ಅರ್ಪಿಸಿದ ಕಾರ್ಮಿಕರು

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಹಾರಾಷ್ಟ್ರದ ಇಬ್ಬರು ಯೋಧರ ಕುಟುಂಬಕ್ಕೆ ಪರಿಹಾರ ನೀಡಲು ನಿಧಿ ಸಂಗ್ರಹಕ್ಕೆ ಮುಂಬಯಿಯ ಗ್ರಾಂಟ್‌ ರೋಡ್‌ (ಪೂರ್ವ)ನ ಸ್ಕೂಟರ್‌ ಪಾರ್ಟ್ಸ್ ಅಸೋಸಿಯೇಷನ್‌ ಸಭೆ ಆಯೋಜಿಸಿತ್ತು.

Vijaya Karnataka 18 Feb 2019, 8:21 am
ಮುಂಬಯಿ: ಆತ ಪಾನಿಪುರಿ ವ್ಯಾಪಾರಿ. ಕಳೆದ ಶನಿವಾರ ಅವರ ದಿನದ ಗಳಿಕೆ 1,100 ರೂಪಾಯಿ. ಅಷ್ಟೂ ಹಣವನ್ನು ಅವರು ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಯೋಧರ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ. ಪಾನಿಪುರಿ ವ್ಯಾಪಾರಿಯಂತೆಯೇ ಮೂವರು ಹಮಾಲರು ಕೂಡ ತಮ್ಮ ದಿನದ ದುಡಿಮೆಯನ್ನು ನೀಡಿ ಮಾದರಿಯಾಗಿದ್ದಾರೆ!
Vijaya Karnataka Web Donation


ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಹಾರಾಷ್ಟ್ರದ ಇಬ್ಬರು ಯೋಧರ ಕುಟುಂಬಕ್ಕೆ ಪರಿಹಾರ ನೀಡಲು ನಿಧಿ ಸಂಗ್ರಹಕ್ಕೆ ಮುಂಬಯಿಯ ಗ್ರಾಂಟ್‌ ರೋಡ್‌ (ಪೂರ್ವ)ನ ಸ್ಕೂಟರ್‌ ಪಾರ್ಟ್ಸ್ ಅಸೋಸಿಯೇಷನ್‌ ಸಭೆ ಆಯೋಜಿಸಿತ್ತು. ಕೇವಲ 10 ನಿಮಿಷಗಳಲ್ಲಿ 17.50 ಲಕ್ಷ ರೂ. ನಿಧಿ ಸಂಗ್ರಹವಾಗಿದೆ. ಬುಲ್ಧಾನಾ ಜಿಲ್ಲೆಯ ನಿತಿನ್‌ ರಾಥೋಡ್‌ ಮತ್ತು ಸಂಜಯ್‌ ರಜಪೂತ್‌ ಗುರುವಾರ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.

''ದಾಳಿಯಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಗಳನ್ನು ನೋಡಿದೆ. ಬಹಳಷ್ಟು ಮಂದಿ ಚಿಕ್ರ ಪ್ರಾಯದವರು. ಅವರ ಕುಟುಂಬಕ್ಕಾಗಿ ನನ್ನ ಕೈಲಾದಷ್ಟು ನೀಡಬೇಕು ಅನ್ನಿಸಿತು. ನನ್ನ ದಿನದ ದುಡಿಮೆಯನ್ನು ನೀಡಿದೆ,'' ಎಂದು ಬಂಡಿ ಎಳೆಯುವ ಜೋಗಿಂದರ್‌ ಯಾದವ್‌ ತಿಳಿಸಿದ್ದಾರೆ.

''2016ರ ಸೆಪ್ಟೆಂಬರ್‌ನಲ್ಲಿ ನಡೆದ ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಮನೆಗೆ ಪರಿಹಾರ ನೀಡಲು ತೆರಳಿದ್ದೆವು. ಕೆಲವರ ಮನೆಗಳಲ್ಲಿ ಫ್ಯಾನ್‌ನಂತಹ ಕನಿಷ್ಠ ಸೌಲಭ್ಯ ಸಹ ಇರಲಿಲ್ಲ. ಬಹುತೇಕ ಯೋಧರ ಮನೆಗಳಲ್ಲಿ ಮೂಲಸೌಲಭ್ಯಗಳಿಗೂ ಕೊರತೆ ಇದೆ,'' ಎಂದು ಸ್ಕೂಟರ್‌ ಪಾರ್ಟ್ಸ್ ಅಸೋಸಿಯೇಷನ್‌ ಅಧ್ಯಕ್ಷ ದೇವೇನ್‌ ದಾನಿ ಯೋಧರ ಕುಟುಂಬದ ಪರಿಸ್ಥಿತಿಯ ಚಿತ್ರಣ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ