ಆ್ಯಪ್ನಗರ

ಕೊರನಾ ಕಡಿವಾಣಕ್ಕೆ ಪ್ರಧಾನಿ ನಿಧಿಗೆ ದೇಣಿಗೆ ನೀಡಿದ ಧರ್ಮಗುರು ದಲೈಲಾಮಾ!

ಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಕೊರೊನಾ ವೈರಸ್‌ ಸೋಂಕನ್ನು ನಿಯಂತ್ರಿಸಲು ಪ್ರಧಾನಿ ಮೋದಿಯ ಪ್ರಯತ್ನಗಳಿಗೆ ಬೆಂಬಲ ಸೂಚಿಸಿದ್ದಾರೆ. ಹಾಗೂ 'ಪಿಎಂ ಕೇರ್‌ ಫಂಡ್‌' ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ.

Vijaya Karnataka Web 31 Mar 2020, 7:02 pm
ಧರ್ಮಶಾಲಾ: ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಕೊರೊನಾ ವೈರಸ್‌ ಸೋಂಕನ್ನು ನಿಯಂತ್ರಿಸಲು ಪ್ರಧಾನಿ ಮೋದಿಯ ಪ್ರಯತ್ನಗಳಿಗೆ ಬೆಂಬಲ ಸೂಚಿಸಿದ್ದಾರೆ. ಸೋಂಕು ನಿಯಂತ್ರಣಕ್ಕಾಗಿ 'ಪಿಎಂ ಕೇರ್‌ ಫಂಡ್‌' ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ.
Vijaya Karnataka Web dalai lama


ದಲೈಲಾಮ ಅವರು ಕೊರೊನಾ ವೈರಸ್‌ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳನ್ನು ಶ್ಲಾಘಿಸಿದ್ದಾರೆ. ಅಂತಾರಾಷ್ಟ್ರೀಯ ಸಂಘಟನೆಯಾದ 'ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ' (ಸಾರ್ಕ್) ನಲ್ಲಿ ಪ್ರಧಾನಿ ಮೋದಿ ಅವರ ಪಾತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



ಕೊರೊನಾ ವಿರುದ್ಧ ಹೋರಾಡಲು ಸಾರ್ಕ್ ದೇಶಗಳ ಸಹಯೋಗದಲ್ಲಿ ತುರ್ತು ನಿಧಿ ಸ್ಥಾಪಿಸಿರುವುದು ಹಾಗೂ ಮಾಹಿತಿ ವಿನಿಮಯ ಮಾಡುಕೊಳ್ಳುತ್ತಿರುವುದು ಒಂದು ಉತ್ತಮ ನಡೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೊರೊನಾ ಕಡಿವಾಣಕ್ಕೆ ಎರಡು ದಿನದ ಸಂಬಳ ನೀಡಿದ 2.5 ಲಕ್ಷ ಎಸ್‌ಬಿಐ ನೌಕರರು!

ಪಿಎಂ ಕೇರ್‌ ಫಂಡ್‌, ಲಾಕ್‌ಡೌನ್‌ನಿಂದಾಗಿ ಒಂದು ಹೊತ್ತಿನ ಊಟವನ್ನೂ ಕಳೆದುಕೊಂಡವರ ನೆರವಿಗಿದೆ. ದಲೈಲಾಮಾ ಟ್ರಸ್ಟ್‌ನಿಂದ ನಾನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದೇನೆ. ಹಾಗೂ ನಮ್ಮ ಕಚೇರಿಯಲ್ಲಿ ಕೆಲಸ ಮಾಡುವವರಿಗೂ ಒಂದು ದಿನದ ಸಂಬಳವನ್ನು ಪಿಎಂ ಕೇರ್‌ ಫಂಡ್‌ಗೆ ನೀಡುವಂತೆ ತಿಳಿಸಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.


ಕೊರೊನಾ ಲಾಕ್‌ಡೌನ್‌ ಎಫೆಕ್ಟ್‌: ವೃದ್ಧಾಶ್ರಮಗಳಿಂದ ಹಿರಿಜೀವಗಳ ನಿಟ್ಟುಸಿರೂ ಹೊರಬರುತ್ತಿಲ್ಲ..!

ಕೊರೊನಾ ವೈರಸ್‌ ಪರಿಣಾಮ ದೇಶಾದ್ಯಂತ ಲಾಕ್ಡೌನ್‌ ಜಾರಿಯಲ್ಲಿದ್ದು, ಇದರಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸಹಾ ಮಾಡಲೆಂದು ಕೇಂದ್ರ ಸರಕಾರವು' ಪಿಎಂ ಕೇರ್ಸ್‌ ಫಂಡ್‌' ಸ್ಥಾಪಿಸಲಾಗಿದೆ.


ಈಗಾಗಲೇ ಹಲವಾರು ಉದ್ಯಮಿಗಳು, ನಟರು, ಸಂಸ್ಥೆಗಳು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಎಸ್‌ಬಿಐನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2,56,000 ನೌಕರರು ಕೊರೊನಾ ವಿರುದ್ಧದ ಹೋರಾಟಕ್ಕಾಗಿ ತಮ್ಮ ಎರಡು ದಿನಗಳ ಸಂಬಳವನ್ನು ಪ್ರಧಾನ ಮಂತ್ರಿಯ ರಾಷ್ಟ್ರೀಯ ಪರಿಹಾರ ನಿಧಿಗೆ ಕೊಡುಗೆ ನೀಡಲು ನಿರ್ಧರಿಸಿದ್ದಾರೆ. ಎಸ್‌ಬಿಐ ನೌಕರರ ಈ ಒಂದು ದಿಟ್ಟ ನಿರ್ಧಾರದಿಂದ ಪಿಎಂ ಕೇರ್ಸ್‌ ಫಂಡ್‌ಗೆ 100 ಕೋಟಿ ರೂಪಾಯಿ ಜಮೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ