ಆ್ಯಪ್ನಗರ

ಜೀತದಾಳು ಆಗಲು ಒಲ್ಲೆ ಎಂದ ದಲಿತ ಮಹಿಳೆ ಮೂಗು ಕತ್ತರಿಸಿದ ಸವರ್ಣೀಯರು

ಆಘಾತಕಾರಿ ಬೆಳವಣೆಗೆಯೊಂದರಲ್ಲಿ ಸವರ್ಣೀಯರು ಹೇಳಿದ ಕೆಲಸ ಮಾಡಲು ನಿರಾಕರಿಸಿದ ದಲಿತ ಮಹಿಳೆಯ ಮೂಗು ಕತ್ತರಿಸಿದ ಹೇಯ ಕೃತ್ಯ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ವರದಿಯಾಗಿದೆ.

Navbharat Times 18 Aug 2017, 3:45 pm
ಹೊಸದಿಲ್ಲಿ: ಜೀತದಾಳು ಆಗಲು ಒಲ್ಲೆ ಎಂದ ಮಹಿಳೆಯ ಮೂಗನ್ನು ಸವರ್ಣೀಯರು ಕತ್ತರಿಸಿದ ಮನಕಲಕುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ವರದಿಯಾಗಿದೆ.
Vijaya Karnataka Web dalit womans nose cut in madhya pradesh village for allegedly refusing to work
ಜೀತದಾಳು ಆಗಲು ಒಲ್ಲೆ ಎಂದ ದಲಿತ ಮಹಿಳೆ ಮೂಗು ಕತ್ತರಿಸಿದ ಸವರ್ಣೀಯರು


'ತಂದೆ-ಮಗ ಸೇರಿ ದಲಿತ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಮನೆಯಲ್ಲಿ ಕೆಲಸ ಮಾಡಲು ನಿರಾಕರಿಸಿದ್ದರಿಂದ ದಲಿತ ಮಹಿಳೆಯ ಮೂಗನ್ನು ಕತ್ತರಿಸಿ, ಆಕೆಯ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ,' ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ಆಯೋಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಸಂತ್ರಸ್ತೆ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ. ಮಧ್ಯಪ್ರದೇಶ ಮಹಿಳಾ ಆಯೋಗದ ಅಧ್ಯಕ್ಷೆ ಲತಾ ವಾಂಕೆಡ್ ಅವರು ದೂರು ದಾಖಲಿಸಿಕೊಂಡಿದ್ದಾರೆ.

ಘಟನೆ ಸಂಬಂಧ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ