ಆ್ಯಪ್ನಗರ

ಗುಜರಾತ್‌: ಮೀಸೆ ಬೆಳೆಸಿದನೆಂದು ದಲಿತ ಯುವಕನಿಗೆ ಹಲ್ಲೆ

ಗುಜರಾತ್‌ನ ರಾಜಧಾನಿಯಿಂದ ಕೇವಲ 15 ಕಿ.ಮೀ. ದೂರದಲ್ಲೇ ಇರುವ ಗಾಂಧೀನಗರದಲ್ಲಿ ಮೀಸೆ ಬೆಳೆಸಿದ ಕಾರಣಕ್ಕೆ ದಲಿತ ಯುವಕನನ್ನು ಮೇಲ್ವರ್ಗದ ಸಮುದಾಯವೊಂದು ಹಿಗ್ಗಾಮುಗ್ಗಾ ಥಳಿಸಿದ ಮತ್ತೊಂದು ಘಟನೆ ವರದಿಯಾಗಿದೆ.

TNN 2 Oct 2017, 9:50 pm
ಅಹ್ಮದಾಬಾದ್: ಗುಜರಾತ್‌ನ ರಾಜಧಾನಿಯಿಂದ ಕೇವಲ 15 ಕಿ.ಮೀ. ದೂರದಲ್ಲೇ ಇರುವ ಗಾಂಧೀನಗರದಲ್ಲಿ ಮೀಸೆ ಬೆಳೆಸಿದ ಕಾರಣಕ್ಕೆ ದಲಿತ ಯುವಕನನ್ನು ಮೇಲ್ವರ್ಗದ ಸಮುದಾಯವೊಂದು ಹಿಗ್ಗಾಮುಗ್ಗಾ ಥಳಿಸಿದ ಮತ್ತೊಂದು ಘಟನೆ ವರದಿಯಾಗಿದೆ.
Vijaya Karnataka Web dalit youth beaten up for sporting a moustache
ಗುಜರಾತ್‌: ಮೀಸೆ ಬೆಳೆಸಿದನೆಂದು ದಲಿತ ಯುವಕನಿಗೆ ಹಲ್ಲೆ


ಸೆ.25ರಂದು ಪಿಯೂಶ್‌ ಕಪರ್ಮಾರ್‌ ಎಂಬಾತನ ಮೇಲೆಮೇಲ್ವರ್ಗ ವ್ಯಕ್ತಿಗಳು ದಾಳಿ ನಡೆಸಿದ್ದು, ದಲಿತರು ಮೀಸೆ ಬೆಳೆಸಬಾರದು ಎಂದು ಅವರು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಈಗಾಗಲೇ ಪೊಲೀಸರು ಮೂವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಮಯೂರ್‌ಸಿನ್ಹ ವಾಗಲೇ, ರಾಹುಲ್‌ ರಾಹುಲ್‌ ವಿಕ್ರಮ್‌ ಸಿನ್ಹ ಸೆರಿತ್ಯಾ ಮತ್ತು ಅಜಿತ್‌ಸಿನ್ಹ ವಾಗಲೆ ಎಂದು ಗುರುತಿಸಲಾಗಿದೆ.

ದೂರಿನ ಪ್ರಕಾರ, ಪರ್ಮಾರ್‌ ಹಾಗೂ ಅವರ ಸಂಬಂದಿ ದಿಗಂತ್‌ ನವರಾತ್ರಿ ಉತ್ಸವದ ಗರ್ಬಾ ನೃತ್ಯ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಕೆಲ ವ್ಯಕ್ತಿಗಳು ಈ ನೃತ್ಯ ವೀಕ್ಷಿಸಲು ದಲಿತರು ಹೋಗಬಾರದು ಎಂದು ಆಕ್ಷೇಪಿಸಿದ್ದಾರೆ. 'ರಾತ್ರಿಯಾದ ಕಾರಣ ನಾವು ಅವರನ್ನು ನೋಡಲು ಸಾಧ್ಯವಾಗಲಿಲ್ಲ. ನಾವು ಧ್ವನಿ ಬರುತ್ತಿದ್ದೆಡೆಗೆ ನಾವು ಧಾವಿಸಿದೆವು. ಈ ವೇಳೆ ಈ ಮೂವರನ್ನು ನಮ್ಮ ಮೇಲೆ ಹಲ್ಲೆ ಮಾಡಿದರು. ಬಳಿಕ ನನ್ನ ಬಳಿ ಗಡ್ಡ ಏತಕ್ಕೆ ಬಿಟ್ಟೆ ಎಂದು ಪ್ರಶ್ನಿಸಿದ್ದಾರೆ. ಕೀಳು ಜಾತಿಯಿಂದ ಬಂದವರು ಇಷ್ಟು ಉದ್ದ ಗಡ್ಡ ಏತಕ್ಕೆ ಬೇಕು ಎಂದು ಮತ್ತೆ ಮತ್ತೆ ಪ್ರಶ್ನಿಸಿದ್ದಾರೆ' ಎಂದು ಪರ್ಮಾರ್‌ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಈಗಾಗಲೇ ಈಮೂವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು, ಡಿವೈಎಸ್‌ಪಿ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ