ಆ್ಯಪ್ನಗರ

ಕೋವಿಡ್‌ನಿಂದ ಮಕ್ಕಳ ರಕ್ಷಣೆಗೆ ಆದ್ಯತೆ: ಒಂದೇ ದಿನ ಮೂರು ಲಸಿಕೆಗಳಿಗೆ ಡಿಸಿಜಿಐ ಅನುಮೋದನೆ

ದೇಶದಲ್ಲಿ ಕೋವಿಡ್ 19 ಪ್ರಕರಣಗಳಲ್ಲಿ ಏರಿಕೆ ಉಂಟಾಗುತ್ತಿರುವ ಸಂದರ್ಭದಲ್ಲಿಯೇ ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಮೂರು ಕಂಪೆನಿಗಳ ಲಸಿಕೆಗಳಿಗೆ ಡಿಸಿಜಿಐ ಅನುಮೋದನೆ ನೀಡಿದೆ. ಕೋವ್ಯಾಕ್ಸಿನ್, ಕೊರ್ಬೆವ್ಯಾಕ್ಸ್ ಮತ್ತು ಝೈಕೋವ್ ಡಿ ಲಸಿಕೆಗಳ ತುರ್ತು ಬಳಕೆಗಳಿಗೆ ಅನುಮತಿ ಕೊಡಲಾಗಿದೆ.

Edited byಅಮಿತ್ ಎಂ.ಎಸ್ | Vijaya Karnataka Web 26 Apr 2022, 3:41 pm

ಹೈಲೈಟ್ಸ್‌:

  • ಒಂದೇ ದಿನ ಮೂರು ಲಸಿಕೆಗಳಿಗೆ ಅನುಮತಿ ನೀಡಿದ ಡಿಸಿಜಿಐ
  • 6- 12 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ
  • 5-12 ವರ್ಷದ ಮಕ್ಕಳಿಗೆ ಕೊರ್ಬವ್ಯಾಕ್ಸ್ ಲಸಿಕೆಗೆ ಅನುಮೋದನೆ
  • 12 ವರ್ಷ ಮೇಲಿನ ಮಕ್ಕಳಿಗೆ ಝೈಡಸ್ ಕ್ಯಾಡಿಲಾದ ಲಸಿಕೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web dcgi approves covaxin restricted use authorisation for 6 12 and corbevax for 5 12 age group
ಕೋವಿಡ್‌ನಿಂದ ಮಕ್ಕಳ ರಕ್ಷಣೆಗೆ ಆದ್ಯತೆ: ಒಂದೇ ದಿನ ಮೂರು ಲಸಿಕೆಗಳಿಗೆ ಡಿಸಿಜಿಐ ಅನುಮೋದನೆ
ಹೊಸದಿಲ್ಲಿ: ಕೊರೊನಾ ವೈರಸ್ 4ನೇ ಅಲೆಯ ಭೀತಿ ಹೆಚ್ಚುತ್ತಿದೆ. ಈಗಾಗಲೇ ದಿಲ್ಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ದೈನಂದಿನ ಕೋವಿಡ್ 19 ಪ್ರಕರಣಗಳಲ್ಲಿ ಏರಿಕೆ ಉಂಟಾಗುತ್ತಿದ್ದು, ಬೂಸ್ಟರ್ ಡೋಸ್ ಬಗ್ಗೆ ಒತ್ತು ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ. ಶಾಲೆಗಳಲ್ಲಿ ಕೂಡ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಈ ಮಧ್ಯೆ 6- 12 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್ ಕಂಪೆನಿಯ ಕೋವ್ಯಾಕ್ಸಿನ್ ಲಸಿಕೆಯ ನಿರ್ಬಂಧಿತ ಬಳಕೆಯ ಅವಕಾಶಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಮಂಗಳವಾರ ಅನುಮತಿ ನೀಡಿದೆ.
ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ)ದ ಕೋವಿಡ್ 19ರ ಮೇಲಿನ ವಿಷಯ ಪರಿಣತರ ಸಮಿತಿ (ಎಸ್‌ಇಸಿ) ಶಿಫಾರಸುಗಳ ಬಳಿಕ ಡಿಸಿಜಿಐ (DCGI) ಈ ಅನುಮೋದನೆ ಕೊಟ್ಟಿದೆ. ಬಯಾಲಾಜಿಕಲ್ ಇ ಕಂಪೆನಿಯ ಕೊರ್ಬೆವ್ಯಾಕ್ಸ್ ಲಸಿಕೆಯನ್ನು 5-12 ವರ್ಷ ವಯೋಮಾನದ ಮಕ್ಕಳಿಗೆ ನೀಡಲು ಕೂಡ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಇದರ ಜತೆಗೆ ಝೈಡಸ್ ಕ್ಯಾಡಿಲಾ ಕಂಪೆನಿಯ ಝೈಕೋವ್ ಡಿ ಲಸಿಕೆಯನ್ನು ಕೂಡ 12 ವರ್ಷದ ಮೇಲಿನ ಮಕ್ಕಳಿಗೆ ಎರಡು ಡೋಸ್ ನೀಡಲು ಅನುಮತಿ ನೀಡಲಾಗಿದೆ.
ಕೊರಾನಾ ನಿಯಂತ್ರಣಕ್ಕೆ ಬೆಂಗಳೂರು ಲಸಿಕೆ: 100 ಡಿಗ್ರಿ ಸೆಲ್ಸಿಯಸ್‌ನಲ್ಲಿಯೂ ಕೆಡದ ಸಾಮರ್ಥ್ಯ

ಮುಂದಿನ ಎರಡು ತಿಂಗಳವರೆಗೆ ಕೋವ್ಯಾಕ್ಸಿನ್ (Covaxin) ಲಸಿಕೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಪ್ರಕರಣ ಸೇರಿದಂತೆ ಪ್ರತಿ 15 ದಿನಕ್ಕೆ ಒಮ್ಮೆ ಸುರಕ್ಷತೆಯ ಡೇಟಾಗಳನ್ನು ಸಲ್ಲಿಸುವಂತೆ ಡಿಸಿಜಿಐ, ಭಾರತ್ ಬಯೋಟೆಕ್ (Bharat Biotech) ಕಂಪೆನಿಗೆ ಸೂಚಿಸಿದೆ. ಅದರ ಬಳಿಕ ಮುಂದಿನ ಐದು ತಿಂಗಳವರೆಗೆ ಪ್ರತಿ ತಿಂಗಳೂ ಸುರಕ್ಷತೆಯ ವಿವರಗಳನ್ನು ಅದು ಸಲ್ಲಿಸಬೇಕಿದೆ.
ಈ ಸಮೀಕ್ಷೆಯನ್ನು ಪೂರ್ಣಗೊಳಿಸಿ ಮತ್ತು ಅತ್ಯಾಕರ್ಷಕ ಬಹುಮಾನ ಗೆಲ್ಲುವ ಅವಕಾಶ ಪಡೆಯಿರಿ

2021ರ ಡಿಸೆಂಬರ್ 24ರಂದು 12 ರಿಂದ 18 ವರ್ಷದ ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ ತುರ್ತು ಬಳಕೆಯ ಅಧಿಕಾರವನ್ನು ಡಿಸಿಜಿಐ ನೀಡಿತ್ತು. ಪ್ರಸ್ತುತ 15- 18 ವಯೋಮಾನದ ಗುಂಪಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.
ಲಸಿಕೆ ಪಡೆಯದವರಿಂದ ಪಡೆದವರಿಗೂ ಅಪಾಯ : ಟೊರೊಂಟೊದ ಅಧ್ಯಯನ

ಇತ್ತೀಚಿನ ಹೊಸ ಅನುಮೋದನೆಗಳಿಂದ ಕೋವಿಡ್ ವಿರುದ್ಧದ ಭಾರತದ ಹೋರಾಟ ಇನ್ನಷ್ಟು ಬಲಗೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.

15- 18ರ ಪ್ರಾಯದವರಿಗೆ ಕೋವಿಡ್ ಲಸಿಕೆ ನೀಡುವ ಕ್ರಮವನ್ನು ಈ ವರ್ಷದ ಜನವರಿ 3ರಂದು ಆರಂಭಿಸಲಾಗಿತ್ತು. ಕಳೆದ ತಿಂಗಳು 12 ವರ್ಷದ ಮಕ್ಕಳನ್ನು ಕೂಡ ಇದಕ್ಕೆ ಸೇರಿಸಲಾಗಿತ್ತು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ