ಆ್ಯಪ್ನಗರ

ಹಸಿವಿನಿಂದ ಮಕ್ಕಳ ಸಾವು: ತಂದೆ ಬಗ್ಗೆ ಸಂಶಯ

ಪೂರ್ವ ದಿಲ್ಲಿಯಲ್ಲಿ ಮೂವರು ಹೆಣ್ಣು ಮಕ್ಕಳು ಹಸಿವಿನಿಂದ ಮೃತಪಟ್ಟ ಪ್ರಕರಣದಲ್ಲಿ ತಂದೆಯ ನಡೆಯ ಬಗ್ಗೆ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Vijaya Karnataka 28 Jul 2018, 9:54 am
ಹೊಸದಿಲ್ಲಿ: ಪೂರ್ವ ದಿಲ್ಲಿಯಲ್ಲಿ ಮೂವರು ಹೆಣ್ಣು ಮಕ್ಕಳು ಹಸಿವಿನಿಂದ ಮೃತಪಟ್ಟ ಪ್ರಕರಣದಲ್ಲಿ ತಂದೆಯ ನಡೆಯ ಬಗ್ಗೆ ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
Vijaya Karnataka Web Death


ಮಂಗಳವಾರದಿಂದ ತಲೆಮರೆಸಿಕೊಂಡಿರುವ ತಂದೆ, ಮಕ್ಕಳಿಗೆ ಅಪರಿಚಿತ ಔಷಧ ನೀಡಿರಬಹುದೆಂದು ಸರಕಾರಕ್ಕೆ ಶುಕ್ರವಾರ ಸಲ್ಲಿಸಲಾದ ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿದೆ.

ಮೃತ ಮೂವರು ಹೆಣ್ಣು ಮಕ್ಕಳ ಪೈಕಿ, ಹಿರಿಯ ಬಾಲಕಿಯ ಬ್ಯಾಂಕ್‌ ಖಾತೆಯಲ್ಲಿ 1,805 ರೂ. ಕಂಡುಬಂದಿರುವ ಹಿನ್ನೆಲೆಯಲ್ಲಿ, ಅವರು ನಿಜಕ್ಕೂ ಹಸಿವಿನಿಂದ ಮೃತಪಟ್ಟಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ಮಕ್ಕಳ ಹೊಟ್ಟೆಯಲ್ಲಿ ಸೋಂಕಿನ ಹಿನ್ನೆಲೆಯಲ್ಲಿ ವಾಂತಿ ಮತ್ತು ಭೇದಿಯಿಂದ ನಿತ್ರಾಣಗೊಂಡಿದ್ದಾರೆ. ಆದರೆ ಅವರಿಗೆ ಸಕಾಲಕ್ಕೆ ನೀರು ಅಥವಾ ದ್ರವಾಹಾರ ಮತ್ತು ಸೂಕ್ತ ಔಷಧ ನೀಡದ ಕಾರಣ ಅವರು ನಿರ್ಜಲೀಕರಣಕ್ಕೆ ತುತ್ತಾಗಿ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.

ತಂದೆ ಮಂಗಲ್‌ ಸಿಂಗ್‌ ಮಕ್ಕಳಿಗೆ ಯಾವುದೋ ಔಷಧವನ್ನು ಬಿಸಿನೀರಿನೊಂದಿಗೆ ಸೇರಿಸಿ ಜು.23ರಂದು ರಾತ್ರಿ ನೀಡಿದ್ದಾನೆ. ಜು.24ರಂದು ಮಕ್ಕಳು ಮೃತಪಟ್ಟಿದ್ದು, ಅಂದಿನಿಂದ ಆತ ಮನೆಗೆ ಹಿಂದಿರುಗಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಮತ್ತಷ್ಟು ತನಿಖೆಯ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ