ಆ್ಯಪ್ನಗರ

ಟಿಆರ್‌ಎಸ್‌ಗೆ ಜಿಗಿದ ಕಾಂಗ್ರೆಸ್ ಶಾಸಕಿ ಮೇಲೆ ಕಲ್ಲು, ಚಪ್ಪಲಿ ಎಸೆತ

ಯೆಲ್ಲಂದೂ ಕ್ಷೇತ್ರದ ಶಾಸಕಿ ಬಾನೊಠು ಹರಿಪ್ರಿಯಾ ನಾಯ್ಕ್‌ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಟಿಆರ್‌ಎಸ್‌ ಅಭ್ಯರ್ಥಿ ಪರವಾಗಿ ಪ್ರಚಾರಕ್ಕಾಗಿ ಶನಿವಾರ ಬೆಳಗ್ಗೆ ಗೋವಿಂದ್ರಾಲಾ ಗ್ರಾಮಕ್ಕೆ ಬೆಂಬಲಿಗರೊಂದಿಗೆ ಆಗಮಿಸಿದರು.

Vijaya Karnataka 5 May 2019, 8:20 am
ಹೈದರಾಬಾದ್‌: ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌) ಸೇರಿದ್ದ ಶಾಸಕಿಗೆ ಕ್ಷೇತ್ರದ ಗ್ರಾಮವೊಂದರ ಜನರು ಚಪ್ಪಲಿ ಮತ್ತು ಕಲ್ಲಿನಿಂದ ಹೊಡೆದು ಸ್ವಾಗತಿಸಿರುವ ಘಟನೆ ನಡೆದಿದೆ.
Vijaya Karnataka Web trs


ಯೆಲ್ಲಂದೂ ಕ್ಷೇತ್ರದ ಶಾಸಕಿ ಬಾನೊಠು ಹರಿಪ್ರಿಯಾ ನಾಯ್ಕ್‌ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಟಿಆರ್‌ಎಸ್‌ ಅಭ್ಯರ್ಥಿ ಪರವಾಗಿ ಪ್ರಚಾರಕ್ಕಾಗಿ ಶನಿವಾರ ಬೆಳಗ್ಗೆ ಗೋವಿಂದ್ರಾಲಾ ಗ್ರಾಮಕ್ಕೆ ಬೆಂಬಲಿಗರೊಂದಿಗೆ ಆಗಮಿಸಿದರು.

ಕಾಮೇಪಲ್ಲಿ ಬ್ಲಾಕ್‌ ಬಳಿ ನೆರೆದಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಈ ವೇಳೆ ತೆರೆದ ವಾಹನದಲ್ಲಿದ್ದ ಶಾಸಕಿ ಮೇಲೆ ಕಲ್ಲು, ಚಪ್ಪಲಿಗಳನ್ನು ಎಸೆದಿದ್ದಾರೆ. ಸುತ್ತಲಿದ್ದ ಟಿಆರ್‌ಎಸ್‌ ಕಾರ್ಯಕರ್ತರು ಶಾಸಕಿಯನ್ನು ರಕ್ಷಿಸಿ ಗ್ರಾಮದಿಂದ ಹಿಂದಕ್ಕೆ ಕರೆದೊಯ್ದಿದ್ದಾರೆ.

''ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಹಗಲು ರಾತ್ರಿ ಶ್ರಮಿಸಿ ಕಾಂಗ್ರೆಸ್‌ನಿಂದ ಹರಿಪ್ರಿಯಾರನ್ನು ಗೆಲ್ಲಿಸಿದೆವು. ಈಗ ಆಕೆ ಟಿಆರ್‌ಎಸ್‌ಗೆ ಸೇರುವ ಮೂಲಕ ನಮ್ಮ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡಿದ್ದಾರೆ,'' ಎಂದು ಕಾಂಗ್ರೆಸ್‌ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲ್ಲು ಎಸೆತ ವೇಳೆ ಐದು ಮಂದಿ ಗಾಯಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ