ಆ್ಯಪ್ನಗರ

ಭಾರತದ ಸದ್ಯದ ಗಡಿ ಪರಿಸ್ಥಿತಿಗೆ ರಫೇಲ್‌ ಸಹಾಯಕವಾಗಲಿದೆ: ಸಚಿವ ರಾಜನಾಥ್‌ ಸಿಂಗ್‌

ನಮ್ಮ ದೇಶದ ಸಾರ್ವಭೌಮತೆ ಮೇಲೆ ಕೆಂಗಣ್ಣು ಬೀರುವವರಿಗಂತು ದಿಟ್ಟ ಸಂದೇಶ ರವಾನೆಯಾಗಿದೆ ಎಂದು ರಾಜನಾಥ್‌ ಸಿಂಗ್‌ ತಿಳಿಸಿದರು. ​​ಅಲ್ಲದೆ ಗಡಿಯಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಯನ್ನ ಗಮನದಲ್ಲಿ ಇಟ್ಟುಕೊಂಡು ನೋಡಿದರೆ ರಫೇಲ್‌ ಅಧಿಕೃತ ಸೇರ್ಪಡೆ ನಿಜಕ್ಕೂ ಪ್ರಮುಖವಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಈ ದಿನವನ್ನು ಐತಿಹಾಸಿಕ ಕ್ಷಣವಾಗಿದೆ ಎಂದು ಹೊಗಳಿದ ರಕ್ಷಣಾ ಸಚಿವ, ಫ್ರಾನ್ಸ್‌ ಹಾಗೂ ಭಾರತದ ನಡುವಿನ ಸಂಬಂಧವು ಈ ಮೂಲಕ ಗಟ್ಟಿಯಾಗಿದೆ ಎಂದು ರಾಜನಾಥ್‌ ಸಿಂಗ್‌ ಶ್ಲಾಘಿಸಿದರು.

Agencies 10 Sep 2020, 1:07 pm
ಅಂಬಾಲಾ: ಭಾರತದ ಸದ್ಯದ ಗಡಿ ಪರಿಸ್ಥಿತಿಗೆ ರಫೇಲ್‌ ಪ್ರಮುಖವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಅಂಬಾಲಾ ವಾಯುನೆಲೆಯಲ್ಲಿ ಐದು ರಫೇಲ್‌ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಸಚಿವರು, ಭಾರತೀಯ ಸೇನೆಗೆ ರಫೇಲ್‌ ಸೇರ್ಪಡೆಗೊಳ್ಳುವ ಮೂಲಕ ಇಡೀ ಜಗತ್ತಿಗೆ ಬೃಹತ್‌ ಹಾಗೂ ದಿಟ್ಟ ಸಂದೇಶ ರವಾನೆಯಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
Vijaya Karnataka Web EhiEpLSVkAEWZ6T


ಅದರಲ್ಲೂ ಪ್ರಮುಖವಾಗಿ ನಮ್ಮ ದೇಶದ ಸಾರ್ವಭೌಮತೆ ಮೇಲೆ ಕೆಂಗಣ್ಣು ಬೀರುವವರಿಗಂತು ದಿಟ್ಟ ಸಂದೇಶ ರವಾನೆಯಾಗಿದೆ ಎಂದು ತಿಳಿಸಿದರು. ಅಲ್ಲದೆ ಗಡಿಯಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಯನ್ನ ಗಮನದಲ್ಲಿ ಇಟ್ಟುಕೊಂಡು ನೋಡಿದರೆ ರಫೇಲ್‌ ಅಧಿಕೃತ ಸೇರ್ಪಡೆ ನಿಜಕ್ಕೂ ಪ್ರಮುಖವಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಈ ಕಾರ್ಯಕ್ರಮವನ್ನು ಐತಿಹಾಸಿಕ ಕ್ಷಣವಾಗಿದೆ ಎಂದು ಹೊಗಳಿದ ರಕ್ಷಣಾ ಸಚಿವ, ಫ್ರಾನ್ಸ್‌ ಹಾಗೂ ಭಾರತದ ನಡುವಿನ ಸಂಬಂಧವು ಈ ಮೂಲಕ ಗಟ್ಟಿಯಾಗಿದೆ ಎಂದು ರಾಜನಾಥ್‌ ಸಿಂಗ್‌ ಶ್ಲಾಘಿಸಿದರು.

ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡ ರಫೇಲ್ ಯುದ್ಧ ವಿಮಾನಗಳು, ಬಾನಂಗಳದಲ್ಲಿ ಹಾರುತ್ತ ಶಕ್ತಿ ಪ್ರದರ್ಶನ !

ಐಎಎಫ್‌ಗೆ ರಫೇಲ್‌ ಸೇರ್ಪಡೆಗೊಳ್ಳುವ ಮೂಲಕ ಸೇನೆಯ ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಲಿದೆ. ಈ ಹಿಂದೆ ಕಾರ್ಯಾಚರಣೆಗೆ ಇದ್ದ ಸಮಸ್ಯೆ ಇದರಿಂದ ಸಂಪೂರ್ಣವಾಗಿ ನಿವಾರಣೆಯಾಗಿದೆ ಎಂದು ಅವರು ತಿಳಿಸಿದರು. ಅಲ್ಲದೇ ಸದ್ಯ ಎಲ್‌ಎಸಿಯಲ್ಲಿ ವಾಯುಸೇನೆ ನಡೆಸುತ್ತಿರುವ ಕಾರ್ಯಾಚರಣೆ ಬಗ್ಗೆಯೂ ಶ್ರ್ಲಾಘನೆ ವ್ಯಕ್ತಪಡಿಸಿದರು. ಇನ್ನು ರಾಜನಾಥ್ ಸಿಂಗ್‌ ಹೇಳಿಕೆಯಿಂದ ಚೀನಾ ಹಾಗೂ ಪಾಕಿಸ್ತಾನದ ಮುಖ ಸಪ್ಪೆಯಾಗುವುದರಲ್ಲಿ ಯಾವುದೇ ಡೌಟ್‌ ಇಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ