ಆ್ಯಪ್ನಗರ

ಜಮ್ಮು ಕಾಶ್ಮೀರದಲ್ಲಿ 6 ಸೇತುವೆಗಳ ಲೋಕಾರ್ಪಣೆ‌; ಗಡಿಯಲ್ಲಿ ಹೊಸ ಕ್ರಾಂತಿ

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ 6 ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಲೋಕಾರ್ಪಣಡಗೊಳಿಸಿದ್ದಾರೆ. ಸುಮಾರು 43 ಕೋಟಿ ರೂ. ವೆಚ್ಚದಲ್ಲಿ ಬಿಆರ್‌ಒ ನಿರ್ಮಿಸಿದ ಸೇತುವೆಗೆಳು ಗಡಿಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದ್ದು, ಸ್ಥಳೀಯ ಆರ್ಥಿಕತೆ ಬೆಳವಣಿಗೆಗೆ ಪೂರಕವಾಗಲಿವೆ.

Agencies 9 Jul 2020, 5:31 pm
ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ಬಿಆರ್‌ಒ ನಿರ್ಮಿಸಿದ 6 ಪ್ರಮುಖ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ್ದಾರೆ. 43 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಾರ್ಯತಂತ್ರದ ಸೇತುವೆಗಳು ಭದ್ರತೆ ದೃಷ್ಟಿಯಿಂದ ಹಾಗೂ ಸ್ಥಳೀಯ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರಲಿವೆ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ.
Vijaya Karnataka Web defence minister rajnath singh e inaugurates six strategic bridges constructed by bro in jk
ಜಮ್ಮು ಕಾಶ್ಮೀರದಲ್ಲಿ 6 ಸೇತುವೆಗಳ ಲೋಕಾರ್ಪಣೆ‌; ಗಡಿಯಲ್ಲಿ ಹೊಸ ಕ್ರಾಂತಿ


ಸೇತುವೆಗಳು ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಗೆ ಸಮೀಪವಿರುವ ಕಾರಣ ಸೂಕ್ಷ್ಮ ಗಡಿ ಪ್ರದೇಶಗಳಲ್ಲಿನ ರಸ್ತೆಗಳಿಗೆ ಸಂಪರ್ಕಿಸುವಲ್ಲಿ ಹೊಸ ಕ್ರಾಂತಿ ಸೃಷ್ಟಿಯಾಗಲಿದೆ. ಆರು ಸೇತುವೆಗಳ ಕಾಮಗಾರಿಗಳನ್ನು ದಾಖಲೆ ಸಮಯದಲ್ಲಿ ಮುಕ್ತಾಯಗೊಳಿಸಿದ್ದಕ್ಕೆ ಬಿಆರ್‌ಒನ ಎಲ್ಲಾ ಅಧಿಕಾರಿಗಳನ್ನು ರಾಜನಾಥ್‌ ಸಿಂಗ್‌ ಅಭಿನಂದಿಸಿದರು.


ಅತ್ಯಂತ ಕಷ್ಟಕರವಾದ ಭೂಪ್ರದೇಶ ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ಕೆಲಸ ಮಾಡಿ ಸರಿಯಾದ ಸಮಯದಲ್ಲಿ ಸೇತುವೆಗಳನ್ನು ನಿರ್ಮಿಸಿ ರಾಷ್ಟ್ರ ನಿರ್ಮಾಣಕ್ಕೆ ಸಹಕರಿಸಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಬಿಆರ್‌ಒ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು. ಇನ್ನು, ಬಿಆರ್‌ಒ ಯೋಜನೆಗಳನ್ನು ಕೇಂದ್ರ ಖುದ್ದಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ಅಗತ್ಯ ಅನುದಾನವನ್ನು ನೀಡುತ್ತಿದೆ ಎಂದು ತಿಳಿಸಿದರು.

ನೀನಾ ಚೀನಾ-20: ಲಡಾಕಿನಿಂದ ಅರುಣಾಚಲ ತನಕ, ಚೀನಾ ಗಡಿಯುದ್ದಕ್ಕೂ 3400 ಕಿ.ಮೀ. ರಸ್ತೆ ನಿರ್ಮಾಣದ ಸಾಹಸಗಾಥೆ!

ಜನರನ್ನು ಸಂಪರ್ಕಿಸುವ ಈ ಸೇತುವೆಗಳನ್ನು ಉದ್ಘಾಟಿಸುವುದು ಖುಷಿಯ ವಿಚಾರ. ಬಿಆರ್‌ಒ ಸಂಪೂರ್ಣ ಬದ್ಧತೆಯೊಂದಿಗೆ ದೇಶದ ಗಡಿ ಪ್ರದೇಶಗಳಲ್ಲಿ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣವನ್ನು ಮುಂದುವರೆಸಿದ್ದು, ದೂರದ ಪ್ರದೇಶಗಳಿಗೆ ತಲುಪಲು ಹಾಗೂ ಸರಕಾರದ ಪ್ರಯತ್ನಗಳನ್ನು ಸಾಕಾರಗೊಳಿಸಲು ಬಿಆರ್‌ಒ ಸಹಾಯ ಮಾಡುತ್ತಿದೆ. ರಸ್ತೆಗಳು ರಾಷ್ಟ್ರದ ಜೀವಸೆಲೆಯಾಗಿರುತ್ತವೆ ಎಂದು ಅವರು ಹೇಳಿದರು.

ಅರುಣಾಚಲ ಪ್ರದೇಶ ವಿಚಾರದಲ್ಲಿ ಚೀನಾಗೆ ಭಾರತ ಸೆಡ್ಡು..! ಗಡಿಯಲ್ಲಿ ಸೇನೆಗಾಗಿ ಬೃಹತ್‌ ಸೇತುವೆ ನಿರ್ಮಾಣ

ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯಲ್ಲಿ ತೀವ್ರ ಆಸಕ್ತಿ ಹೊಂದಿದೆ. ಜಮ್ಮು ಪ್ರದೇಶದಲ್ಲಿ ಪ್ರಸ್ತುತ ಸುಮಾರು 1,000 ಕಿಲೋ ಮೀಟರ್ ಉದ್ದದ ರಸ್ತೆಗಳು ನಿರ್ಮಾಣ ಹಂತದಲ್ಲಿವೆ ಎಂದು ಹೇಳಿದರು. 6 ಸೇತುವೆಗಳ ಪೈಕಿ ಎರಡು ಕಥುವಾ ಜಿಲ್ಲೆಯ ಟರ್ನಃ ನಲ್ಲಃ ಪ್ರದೇಶದಲ್ಲಿ ನಿರ್ಮಾಣವಾಗಿದ್ದರೆ, ಉಳಿದ ನಾಲ್ಕು ಜಮ್ಮು ಮತ್ತು ಆಖ್ನೂರ್‌ ಜಿಲ್ಲೆಯಲ್ಲಿ ಆಖ್ನೂರ್‌ ಪಲ್ಲನ್‌ವಾಲಾ ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಸೇತುವೆಗಳು 30 ರಿಂದ 300 ಮೀಟರ್‌ ಉದ್ದವನ್ನು ಹೊಂದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ