ಆ್ಯಪ್ನಗರ

ಬುಧವಾರ ನೌಕಾ ಕಮಾಂಡರ್ಸ್ ಕಾನ್ಫರೆನ್ಸ್‌ನ ಉದ್ಘಾಟನಾ ಭಾಷಣ ಮಾಡಲಿರುವ ರಾಜನಾಥ್ ಸಿಂಗ್!

ನಾಳೆ(ಬುಧವಾರ) ಭಾರತೀಯ ನೌಕಾಸೇನೆಯ ನೌಕಾ ಕಮಾಂಡರ್ಸ್ ಕಾನ್ಫರೆನ್ಸ್ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಾವೇಶದ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಸಿದ್ಧತೆಯನ್ನು ಉತ್ತಮಗೊಳಿಸುವ ಮಾರ್ಗಗಳ ಕುರಿತು ಈ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು.

Vijaya Karnataka Web 18 Aug 2020, 11:21 pm
ನವದೆಹಲಿ: ನಾಳೆ(ಬುಧವಾರ) ನವದೆಹಲಿಯಲ್ಲಿ ಭಾರತೀಯ ನೌಕಾಸೇನೆಯ ನೌಕಾ ಕಮಾಂಡರ್ಸ್ ಕಾನ್ಫರೆನ್ಸ್ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಾವೇಶದ ಉದ್ಘಾಟನಾ ಭಾಷಣ ಮಾಡಲಿದ್ದಾರೆ.
Vijaya Karnataka Web rajnath singh getty
ಸಂಗ್ರಹ ಚಿತ್ರ


ಜಂಟಿ ಕಾರ್ಯಾಚರಣೆ ಯೋಜನೆ, ಮೂರೂ ರಕ್ಷಣಾ ಪಡೆಗಳ ನಡುವಿನ ಹೊಂದಾಣಿಕೆ ಹಾಗೂ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಸಿದ್ಧತೆಯನ್ನು ಉತ್ತಮಗೊಳಿಸುವ ಮಾರ್ಗಗಳ ಕುರಿತು ಈ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು.

ಯಾವುದೇ 'ಸನ್ನಿವೇಶ' ಎದುರಾದರೂ ಭಾರತೀಯ ನೌಕಾಪಡೆ ಸನ್ನದ್ಧ: ರಾಜನಾಥ್ ಸಿಂಗ್

ಲಡಾಖ್ ಗಡಿಯಲ್ಲಿ ಚೀನಾದ ದುಸ್ಸಾಹದ ಬಳಿಕ ಮೂರೂ ರಕ್ಷಣಾ ಪಡೆಗಳನ್ನು ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಅದರಂತೆ ನೌಕಾಸೇನೆ ಮಲಕ್ಕಾ ಜಲಸಂಧಿಯಲ್ಲಿ ಅಣ್ವಸ್ತ್ರ ಯುದ್ಧ ಹಡಗಿನೊಂದಿಗೆ ಸರ್ವ ಸನ್ನದ್ಧ ಸ್ಥಿತಿಯಲ್ಲಿದೆ.

ನಾಳೆಯಿಂದ ಆರಂಭವಾಗಲಿರುವ ನೇವಲ್ ಕಮಾಂಡರ್ಸ್ ಕಾನ್ಫರೆನ್ಸ್ 21 ಆಗಸ್ಟ್(ಶುಕ್ರವಾರ)ದವರೆಗೆ ನಡೆಯಲಿದ್ದು, ನೌಕಾಸೇನೆಯ ಬಲವರ್ಧನೆ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹಿಂದೂ ಮಹಾಸಾಗರದಲ್ಲಿ ಚೀನಾದ ಬಲವರ್ಧನೆಗೆ ಭಾರತ ಸ್ಪಂದಿಸಲೇಬೇಕಿದೆ: ನೌಕಾಪಡೆ ಮುಖ್ಯಸ್ಥ

ಇತ್ತೀಚಿಗಷ್ಟೇ ವಾಯುಸೇನಾಧಿಕಾರಿಗಳ ಕಾನ್ಫರೆನ್ಸ್ ಮುಕ್ತಾಯ ಕಂಡಿದ್ದು, ಕೆಲವು ದಿನಗಳ ಹಿಂದಷ್ಟೇ ಭೂಸೇನಾ ಕಮಾಂಡರ್‌ಗಳ ಕಾನ್ಫರೆನ್ಸ್ ಕೂಡ ನಡೆದಿತ್ತು.

ಇದೀಗ ನೌಕಾಸೇನೆ ಕಮಾಂಡರ್ಸ್ ಸಭೆ ಜರುಗಲಿದ್ದು, ಭಾರತದ ನೌಕಾ ಸಾಮರಿಕ ಶಕ್ತಿಯನ್ನು ವೃದ್ಧಿಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಫಲ ನೀಡಲಿವೆ ಎಂದು ವಿಶ್ಲೇಷಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ