ಆ್ಯಪ್ನಗರ

ಮಷಿನ್ ಗನ್ ಖರೀದಿ ಆದೇಶ ರದ್ದುಗೊಳಿಸಿದ ರಕ್ಷಣಾ ಇಲಾಖೆ

ಭಾರತೀಯ ಸೇನೆ ಆಧುನೀಕರಣಗೊಳ್ಳಲು ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ 44 ಸಾವಿರ ಮಷಿನ್ ಕೊಳ್ಳಲು ಮುಂದಾಗಿತ್ತು. ಆದರೆ, ಕೆಲವು ಕಾರಣಗಳಿಂದ ರಕ್ಷಣಾ ಸಚಿವಾಲಯ ಈ ಯೋಜನೆಯನ್ನು ಕೈ ಬಿಡುತ್ತಿದ್ದು, ಇದರಿಂದ ಸೇನೆಗೆ ಹೊಡೆತ ಬಿದ್ದಂತಾಗಿದೆ.

ಟೈಮ್ಸ್ ಆಫ್ ಇಂಡಿಯಾ 19 Aug 2017, 1:20 pm
ಹೊಸದಿಲ್ಲಿ: ಭಾರತೀಯ ಸೇನೆ ಆಧುನೀಕರಣಗೊಳ್ಳಲು ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ 44 ಸಾವಿರ ಮಷಿನ್ ಕೊಳ್ಳಲು ಮುಂದಾಗಿತ್ತು. ಆದರೆ, ಕೆಲವು ಕಾರಣಗಳಿಂದ ರಕ್ಷಣಾ ಸಚಿವಾಲಯ ಈ ಯೋಜನೆಯನ್ನು ಕೈ ಬಿಡುತ್ತಿದ್ದು, ಇದರಿಂದ ಸೇನೆಗೆ ಹೊಡೆತ ಬಿದ್ದಂತಾಗಿದೆ.
Vijaya Karnataka Web defence ministry junks machine guns order for foot soldiers
ಮಷಿನ್ ಗನ್ ಖರೀದಿ ಆದೇಶ ರದ್ದುಗೊಳಿಸಿದ ರಕ್ಷಣಾ ಇಲಾಖೆ


ಯುದ್ಧ ಟ್ಯಾಂಕರ್‌ಗಳು, ಹೋವಿಟ್ಜರ್ ಶಸ್ತ್ರಾಸ್ತ್ರಗಳು, ಇನ್‌ಫ್ಯಾಂಟ್ರಿ ಶಸ್ತ್ರಾಸ್ತ್ರಗಳು, ಬುಲೆಟ್ ಪ್ರೂಫ್ ಜಾಕೆಟ್, ವೆಬ್ಬಿಂಗ್ ಮತ್ತು ಬ್ಯಾಲಿಸ್ಟಿಕ್ ಹೆಲ್ಮೆಟ್ ಸೇರಿ ಇತರೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲು ಸೇನೆ ಮುಂದಾಗಿದೆ. ಹೊಸ ದಾಳಿ ರೈಫಲ್ಸ್ ಮತ್ತು ಕ್ಲೋಸ್ ಕ್ವಾರ್ಟರ್ ಯುದ್ಧದ ಕಾರ್ಬೈನ್‌ಗಳನ್ನು ಹೊಂದಲು ರಕ್ಷಣಾ ಇಲಾಖೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಶಸ್ತ್ರಾಸ್ತ್ರಗಳನ್ನು ಕಳೆದ ಎರಡು ವರ್ಷಗಳಲ್ಲಿ ನಾಶಗೊಳಿಸಿದೆ. ಇದೀಗ ಮಷಿನ್ ಗನ್ ಕೊಳ್ಳಲೂ ಹಿನ್ನಡೆಯಾಗಿದ್ದು, ಸೇನೆಗೆ ಮತ್ತೊಂದು ಹೊಡತೆ ಬಿದ್ದಂತಾಗಿದೆ.

ಮೆಗಾ 'ಖರೀದಿ ಮತ್ತು ಉತ್ಪಾದನೆ' ಯೋಜನೆ ಅಡಿಯಲ್ಲಿ ವಿದೇಶಿ ಶಸ್ತ್ರಾಸ್ತ್ರ ಕಂಪೆನಿಗಳಿಂದ 4400 ಎಲ್‌ಎಂಜಿ (ಹಗುರ ಮೆಷಿನ್‌ ಗನ್‌) ಆರಂಭಿಕ ಖರೀದಿ ಒಪ್ಪಂದವಾಗಿತ್ತು. ನಂತರ ದೊಡ್ಡ ಪ್ರಮಾಣದಲ್ಲಿ ದೇಶೀಯ ಉತ್ಪಾದನೆಗಾಗಿ ತಂತ್ರಜ್ಞಾನವನ್ನು ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್‌ಗೆ ವರ್ಗಾವಣೆ ಮಾಡಲಾಗಿತ್ತು. ಈ ಯೋಜನೆಯ ಒಟ್ಟು ವೆಚ್ಚ ಸುಮಾರು 13 ಸಾವಿರ ಕೋಟಿ ರೂಪಾಯಿಯಾಗಿತ್ತು.

ಶಸ್ತ್ರಾಸ್ತ್ರ ಖರೀದಿಯಲ್ಲಿ ನಡೆದ ಭಾರಿ ಹಗರಣಗಳಿಂದ ಈ ಯೋಜನೆಯನ್ನು ಕೈ ಬಿಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ