ಆ್ಯಪ್ನಗರ

ಯೋಧರ ಪಿಂಚಣಿಗೆ ಆಧಾರ್‌ ಕಡ್ಡಾಯ

ಮಾಜಿ ಸೈನಿಕರು ಪಿಂಚಣಿ ಸೌಲಭ್ಯ ಪಡೆಯಲು ಕಡ್ಡಾಯವಾಗಿ ಆಧಾರ್‌ ಕಾರ್ಡ್‌ ಹೊಂದಿರಬೇಕು ಎಂದು ಸರಕಾರ ಲೋಕಸಭೆಯಲ್ಲಿ ತಿಳಿಸಿದೆ..

ಏಜೆನ್ಸೀಸ್ 1 Apr 2017, 7:27 am

ಹೊಸದಿಲ್ಲಿ: ಮಾಜಿ ಸೈನಿಕರು ಪಿಂಚಣಿ ಸೌಲಭ್ಯ ಪಡೆಯಲು ಕಡ್ಡಾಯವಾಗಿ ಆಧಾರ್‌ ಕಾರ್ಡ್‌ ಹೊಂದಿರಬೇಕು ಎಂದು ಸರಕಾರ ಲೋಕಸಭೆಯಲ್ಲಿ ತಿಳಿಸಿದೆ.

Vijaya Karnataka Web defence pensioners need an aadhaar too to get pensions
ಯೋಧರ ಪಿಂಚಣಿಗೆ ಆಧಾರ್‌ ಕಡ್ಡಾಯ


''ರಕ್ಷಣಾ ಪಡೆಯ ಸಿಬ್ಬಂದಿ ಆಧಾರ್‌ ಕಾರ್ಡ್‌ ಹೊಂದಿರುವ ಕುರಿತು ದಾಖಲೆ ಸಲ್ಲಿಸಬೇಕು. ಇಲ್ಲವಾದಲ್ಲಿ ಕೂಡಲೇ ಆಧಾರ್‌ ಕಾರ್ಡ್‌ ಪಡೆಯಬೇಕು ಎಂದು ಮಾಜಿ ಯೋಧರ ಕಲ್ಯಾಣ ಇಲಾಖೆ ಮಾರ್ಚ್‌ 3ರಂದೇ ಅಧಿಸೂಚನೆ ಹೊರಡಿಸಿತ್ತು. ಈಗಾಗಲೇ ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಮಾಜಿ ಯೋಧರು ತಮ್ಮ ಆಧಾರ್‌ ಸಂಖ್ಯೆಯನ್ನು ಹಾಜರುಪಡಿಸಬೇಕು. ಆಧಾರ್‌ ಕಾರ್ಡ್‌ ಇಲ್ಲವಾದಲ್ಲಿ ಜೂನ್‌ 30ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಆಧಾರ್‌ ಸಂಖ್ಯೆ ಬರುವವರೆಗೆ ಬೇರೆ ಯಾವುದಾದರೂ ಗುರುತಿನ ಪತ್ರ ತೋರಿಸಿ ಪಿಂಚಣಿ ಪಡೆಯಬಹುದು,'' ಎಂದು ರಕ್ಷಣಾ ಖಾತೆಯ ಸಹಾಯಕ ಸಚಿವ ಸುಭಾಷ್‌ ಭಾಮ್ರೆ ಶುಕ್ರವಾರ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ