ಆ್ಯಪ್ನಗರ

ಡಿಫೆನ್ಸ್‌ ಎಕ್ಸ್‌ಪೊ ಇಂಪ್ಯಾಕ್ಟ್: 2024ರ ವೇಳೆಗೆ 5 ಶತಕೋಟಿ ಡಾಲರ್ ರಕ್ಷಣಾ ಉತ್ಪನ್ನ ರಫ್ತು, 3 ಲಕ್ಷ ಉದ್ಯೋಗ ಸೃಷ್ಟಿ

2016-17ನೇ ಸಾಲಿಗೆ ಹೋಲಿಸಿದರೆ 2018-19ರಲ್ಲಿ ರಕ್ಷಣಾ ಉತ್ಪಾದನೆಗಳ ರಫ್ತು ಮೌಲ್ಯ ಏಳು ಪಟ್ಟು ಹೆಚ್ಚಿದ್ದು, ಇದ್ದರ ಮೌಲ್ಯ 10,745 ಕೋಟಿ ರೂ. ಆಗಿದೆ. ಆರ್ಟಿಲರಿ ಗನ್‌ಗಳು, ಹೆಲಿಕಾಪ್ಟರ್‌, ಬುಲೆಟ್‌ ಪ್ರೂಫ್‌ ಜಾಕೆಟ್‌ಗಳು ಹಾಗೂ ಯುದ್ಧ ಟ್ಯಾಂಕ್‌ ಹೊಡೆದುರುಳಿಸುವ ಕ್ಷಿಪಣಿಗಳು ಸೇರಿ ಹತ್ತು ಹಲವು ರಕ್ಷಣಾ ಉತ್ಪನ್ನಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದೆ.

TIMESOFINDIA.COM 7 Feb 2020, 8:43 pm
ಲಖನೌ (ಉತ್ತರ ಪ್ರದೇಶ): ‘ಮೇಕ್‌ ಇನ್‌ ಇಂಡಿಯಾ’ ಯೋಜನೆಯ ಫಲವಾಗಿ ರಕ್ಷಣಾ ಉತ್ಪಾದನೆ ವಲಯದಲ್ಲಿ ಭಾರತ ಮಹತ್ತರ ಪ್ರಗತಿ ಸಾಧಿಸುತ್ತಿದ್ದು, 2024ರ ಹೊತ್ತಿಗೆ ದೇಶದ ರಕ್ಷಣಾ ಉತ್ಪನ್ನಗಳ ರಫ್ತು ಮೌಲ್ಯ 5 ಶತಕೋಟಿ ಡಾಲರ್‌ ತಲುಪಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಸರಕಾರ ವ್ಯಕ್ತಪಡಿಸಿದೆ.
Vijaya Karnataka Web rajnath defence
ಡಿಫೆನ್ಸ್‌ ಎಕ್ಸ್‌ಪೊ ಇಂಪ್ಯಾಕ್ಟ್: 2024ರ ವೇಳೆಗೆ 5 ಶತಕೋಟಿ ಡಾಲರ್ ರಕ್ಷಣಾ ಉತ್ಪನ್ನ ರಫ್ತು, 3 ಲಕ್ಷ ಉದ್ಯೋಗ ಸೃಷ್ಟಿ


ಲಖನೌದಲ್ಲಿ ನಡೆಯುತ್ತಿರುವ ಐದು ದಿನಗಳ ಡಿಫೆನ್ಸ್‌ ಎಕ್ಸ್‌ಪೊದಲ್ಲಿ ನಿರೀಕ್ಷೆಗೂ ಮೀರಿ ವಹಿವಾಟು ನಡೆಯುತ್ತಿದೆ. 200ಕ್ಕೂ ಹೆಚ್ಚು ಒಪ್ಪಂದಗಳಿಗೆ ಸರಕಾರ ಸಹಿ ಹಾಕಿದೆ. ಇದರೊಂದಿಗೆ ಇನ್ನೂ ನಾಲ್ಕು ವರ್ಷದಲ್ಲಿ ದೇಶೀಯವಾಗಿ ಉತ್ಪಾದನೆಗೊಂಡ ರಕ್ಷಣಾ ಪರಿಕರಗಳು ಹಾಗೂ ಶಸ್ತ್ರಾಸ್ತ್ರಗಳ ರಫ್ತಿನಲ್ಲಿ ಗಮನಾರ್ಹ ಪ್ರಗತಿ ಕಂಡುಬರಲಿದೆ. 2024ರ ಹೊತ್ತಿಗೆ ರಫ್ತು ಮೌಲ್ಯ 5 ಬಿಲಿಯನ್‌ ಡಾಲರ್‌ ಆಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಹೇಳಿದರು.

2016-17ನೇ ಸಾಲಿಗೆ ಹೋಲಿಸಿದರೆ 2018-19ರಲ್ಲಿ ರಕ್ಷಣಾ ಉತ್ಪಾದನೆಗಳ ರಫ್ತು ಮೌಲ್ಯ ಏಳು ಪಟ್ಟು ಹೆಚ್ಚಿದ್ದು, ಇದ್ದರ ಮೌಲ್ಯ 10,745 ಕೋಟಿ ರೂ. ಆಗಿದೆ. ಆರ್ಟಿಲರಿ ಗನ್‌ಗಳು, ಹೆಲಿಕಾಪ್ಟರ್‌, ಬುಲೆಟ್‌ ಪ್ರೂಫ್‌ ಜಾಕೆಟ್‌ಗಳು ಹಾಗೂ ಯುದ್ಧ ಟ್ಯಾಂಕ್‌ ಹೊಡೆದುರುಳಿಸುವ ಕ್ಷಿಪಣಿಗಳು ಸೇರಿ ಹತ್ತು ಹಲವು ರಕ್ಷಣಾ ಉತ್ಪನ್ನಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದೆ. ಹೂಡಿಕೆಗೆ ಕಂಪನಿಗಳೂ ಮುಂದೆ ಬರುತ್ತಿದ್ದು, ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದರು.

3 ಲಕ್ಷ ಉದ್ಯೋಗ: ಉತ್ತರ ಪ್ರದೇಶ ಸರಕಾರ 23 ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದರಿಂದ 50 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಹರಿದುಬರುವ ನಿರೀಕ್ಷೆ ಇದೆ. ಇದರಿಂದ ಸುಮಾರು 3 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದರು.

ಲಖನೌ ಡಿಫೆನ್ಸ್‌ ಎಕ್ಸ್‌ಪೋ ಕಾರ್ಯಕ್ರಮದ ರಂಗು ರಂಗಿನ ಹೈಲೈಟ್ಸ್‌ ಇಲ್ಲಿದೆ ನೋಡಿ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ