ಆ್ಯಪ್ನಗರ

ಸ್ವಲ್ಪವೂ ನಾಚಿಕೆ ಆಗಲ್ವಾ ನಿಮಗೆಲ್ಲಾ? ಹೊಲಕ್ಕೆ ಬೆಂಕಿ ಹಾಕೋದು ಇನ್ನಾದ್ರು ನಿಲ್ಸಿ!: ಸರಕಾರಕ್ಕೆ ಸುಪ್ರೀಂ ಛೀಮಾರಿ!

ಪಂಜಾಬ್‌, ಹರಿಯಾಣ ಹಾಗೂ ಉತ್ತರ ಪ್ರದೇಶದ ಭಾಗಗಳಲ್ಲಿ ಪ್ರತಿ ವರ್ಷ ಕೃಷಿ ತ್ಯಾಜ್ಯವನ್ನು ಇದೇ ಸಮಯದಲ್ಲಿ ಸುಡುತ್ತಾರೆ. ಇದರಿಂದ ದಿಲ್ಲಿಯಲ್ಲಿ ಜನ ಉಸಿರಾಡುವುದಕ್ಕೂ ಕಷ್ಟಪಡುವಂತಾಗುತ್ತಿದೆ. ಸರಕಾರಗಳಿಗೆ ಸ್ವಲ್ಪವೂ ನಾಚಿಕೆ ಇಲ್ಲವೇ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Agencies 6 Nov 2019, 5:35 pm
ಹೊಸದಿಲ್ಲಿ: ನಿಮಗೆ ಒಂಚೂರೂ ನಾಚಿಕೆಯೂ ಆಗುದಿಲ್ಲವೇ? ರಾಷ್ಟ್ರ ರಾಜಧಾನಿಯಲ್ಲಿದ್ದೂ ಜನರು, ತಮ್ಮ ತಮ್ಮ ಮನೆಗಳಲ್ಲಿಯೇ ಸುರಕ್ಷಿತವಾಗಿಲ್ಲವಲ್ಲಾ.... ಹೀಗೆಂದು ಸುಪ್ರೀಂ ಕೋರ್ಟ್‌ ಕೇಂದ್ರ ಹಾಗೂ ದಿಲ್ಲಿ ಸರಕಾರವನ್ನು ಜರಿದಿದೆ.
Vijaya Karnataka Web pollution


ಹರಿಯಾಣ ಹಾಗೂ ಪಂಜಾಬ್‌ನಲ್ಲಿ ಹೊಲಗಳಲ್ಲಿರುವ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕುವುದನ್ನು ತಡೆಗಟ್ಟುವುದು ಸಾಧ್ಯವಾಗದಿರುವುದು, ಇದರಿಂದ ದಿಲ್ಲಿಯಲ್ಲಿ ವಾಯುಮಾಲಿನ್ಯದ ಮಟ್ಟ ತೀರಾ ಅಪಾಯಕಾರಿಯಾಗಿರುವುದಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬುಧವಾರ ಎರಡೂ ಸರಕಾರಗಳು ಈ ಸಂಬಂಧ ಅಗತ್ಯವಾದ ಕ್ರಮ ಕೈಗೊಳ್ಳದಿರುವುದಕ್ಕೆ ತನ್ನದೇ ಧಾಟಿಯಲ್ಲಿ ಚಾಟಿ ಬೀಸಿದ ಸುಪ್ರೀಂ ಕೋರ್ಟ್‌, ನಿಮಗೆ ಒಂದು ಸ್ವಲ್ಪವಾದರೂ ನಾಚಿಕೆಯಾಗುತ್ತಿಲ್ಲವೇ? ಜನರು ಅವರ ಸ್ವಂತ ಮನೆಗಳಲ್ಲಿಯೇ ಸುರಕ್ಷಿತವಾಗಿಲ್ಲ. ಅನೇಕ ವಿಮಾನಗಳು ರಾಷ್ಟ್ರ ರಾಜಧಾನಿಯಲ್ಲಿ ಇಳಿಯುವ ಬದಲು ಮಾಲಿನ್ಯದ ಕಾರಣದಿಂದ ಬೇರೆಡೆಗೆ ಸಾಗುವಂತಾಗಿದೆ ಎಂದಿದೆ.

ಇದು ಕೋಟಿಗೂ ಹೆಚ್ಚಿನ ಜನರ ಸಾವು ಹಾಗೂ ಬದುಕಿನ ಪ್ರಶ್ನೆ. ಇಂತಹ ಪರಿಸ್ಥಿತಿಗೆ ನಾವು ಸರಕಾರಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಕೃಷಿ ತ್ಯಾಜ್ಯವನ್ನು ಸುಡುವ ಚಟುವಟಿಕೆಯನ್ನು ನಿಯಂತ್ರಿಸುವುದು ಹಾಗೂ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವುದು ಪ್ರಾಜಾಪ್ರಭುತ್ವದಿಂದ ಆಯ್ಕೆಯಾದ ಸರಕಾರದ ಹೊಣೆ ಹಾಗೂ ಇದನ್ನು ಕ್ರಮ ಬದ್ಧವಾಗಿ ನೋಡಿಕೊಳ್ಳಬೇಕಿದೆ.


ಇದೊಂದು ಸಂಘಟಿತ ಹಾಗೂ ಯೋಜಿತ ಪಾಪದ ಕೆಲಸ
ಹೊಲಗಳಲ್ಲಿರುವ ತ್ಯಾಜ್ಯಗಳಿಗೆ ಬೆಂಕಿ ನೀಡುವುದು ಯೋಜಿತ ಹಾಗೂ ಸಂಘಟಿತ ಪಾಪವಾಗಿದೆ. ಪ್ರತಿ ವರ್ಷವೂ ಈ ಚಟುವಟಿಕೆ ಸರಾಗವಾಗಿ ಸಾಗಿದೆ. ಪ್ರತಿ ವರ್ಷವೂ ದಿಲ್ಲಿಯಲ್ಲಿ ಇದೇ ಪರಿಸ್ಥಿತಿ ಎದುರಾಗುತ್ತದೆ. ಹರಿಯಾಣ, ಪಂಜಾಬ್‌ ಹಾಗೂ ಉತ್ತರ ಪ್ರದೇಶ ಸರಕಾರಗಳು ಈ ನಿಟ್ಟಿನಲ್ಲಿ ಸರಿಯಾದ ದಾರಿ ಕಂಡುಕೊಂಡು, ಏಳು ದಿನಗಳ ಒಳಗಾಗಿ ಕ್ರಮ ಜರುಗಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ