ಆ್ಯಪ್ನಗರ

ನಿರ್ಭಯಾ ಹಂತಕರಿಗೆ ಮಾರ್ಚ್‌ 20ಕ್ಕೆ ಗಲ್ಲು ಫಿಕ್ಸ್‌, ಕೋರ್ಟ್‌ನಿಂದ ಮತ್ತೆ ಡೆತ್‌ ವಾರಂಟ್‌ ಜಾರಿ

ನಿರ್ಭಯಾ ಹಂತಕರಿಗೆ ಹೊಸ ಡೆತ್‌ ವಾರೆಂಟ್‌ ಜಾರಿಯಾಗಿದ್ದು, ಮಾರ್ಚ್‌ 20 ಬೆಳಗ್ಗೆ 5.30ಕ್ಕೆ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಲು ದೆಹಲಿ ಕೋರ್ಟ್‌ ಆದೇಶ ನೀಡಿದೆ. ​ಅಪರಾಧಿಗಳಾದ ಮುಖೇಶ್‌ (32), ಪವನ್‌ ಗುಪ್ತಾ (25), ವಿನಯ್‌ ಶರ್ಮಾ (26) ಮತ್ತು ಅಕ್ಷಯ್‌ಕುಮಾರ್‌ ಸಿಂಗ್‌ಗೆ (31) ಡೆತ್‌ ವಾರಂಟ್‌ ಜಾರಿಗೊಳಿಸಲಾಗಿದೆ.

Vijaya Karnataka Web 5 Mar 2020, 3:17 pm
ಹೊಸದಿಲ್ಲಿ: ನಿರ್ಭಯಾ ಪ್ರಕರಣದ ದೋಷಿಗಳನ್ನು ಗಲ್ಲಿಗೇರಿಸಲು ಮತ್ತೊಮ್ಮೆ ಮೂಹೂರ್ತ ಫಿಕ್ಸ್‌ ಮಾಡಲಾಗಿದ್ದು. ಮಾರ್ಚ್ 20ಕ್ಕೆ ಡೆತ್ ವಾರೆಂಟ್ ಜಾರಿ ಮಾಡಿ ದೆಹಲಿ ಕೋರ್ಟ್‌ ಆದೇಶ ಹೊರಡಿಸಿದೆ. ನಾಲ್ವರು ದೋಷಿಗಳನ್ನು ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲು ಕೋರ್ಟ್‌ ಆದೇಶಿಸಿದೆ.
Vijaya Karnataka Web NIRBHAYA CONVICTS




ಅಪರಾಧಿಗಳಾದ ಮುಖೇಶ್‌ (32), ಪವನ್‌ ಗುಪ್ತಾ (25), ವಿನಯ್‌ ಶರ್ಮಾ (26) ಮತ್ತು ಅಕ್ಷಯ್‌ಕುಮಾರ್‌ ಸಿಂಗ್‌ಗೆ (31) ಡೆತ್‌ ವಾರಂಟ್‌ ಜಾರಿಗೊಳಿಸಲಾಗಿದೆ. ಈ ಬಗ್ಗೆ ನಿರ್ಭಯಾ ತಾಯಿ ಆಶಾದೇವಿ ಪ್ರತಿಕ್ರಿಯೆ ನೀಡಿದ್ದು, ನಾಲ್ಕು ಅಪರಾಧಿಗಳ ಕಾನೂನು ಬಾಗಿಲುಗಳು ಮುಚ್ಚಿದ್ದು, ಈ ಬಾರಿಯಾದರೂ ನಿಗದಿಯಂತೆ ಅಪರಾಧಿಗಳನ್ನು ಗಲ್ಲಿಗೇರಿಸಲಾಗುತ್ತದೆ ಎಂಬ ವಿಶ್ವಾಸ ಇದೆ ಎಂದರು.

ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ: ಕಾನೂನು ಹೋರಾಟಕ್ಕೆ ಇನ್ನೂ ಅವಕಾಶಗಳಿವೆ ಎಂದ ವಕೀಲ ಎಪಿ ಸಿಂಗ್‌


ಈ ಮೊದಲು ಮಾರ್ಚ್‌ 3ಕ್ಕೆ ಮೂರನೇ ಬಾರಿ ಡೆತ್‌ ವಾರೆಂಟ್‌ ಜಾರಿಗೊಳಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ದೆಹಲಿ ಕೋರ್ಟ್‌ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಪವನ್‌ ಗುಪ್ತಾ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರಿಂದ ಡೆತ್‌ ವಾರೆಂಟ್‌ ಜಾರಿಯಾಗಿತ್ತು. ಆದರೆ, ಈಗ ನಿರ್ಭಯಾ ಹಂತಕರ ಮುಂದಿದ್ದ ಎಲ್ಲಾ ಕಾನೂನು ಬಾಗಿಲುಗಳು ಮುಚ್ಚಿದ್ದು, ಮಾರ್ಚ್‌ 20ಕ್ಕೆ ಅಪರಾಧಿಗಳು ಗಲ್ಲಿಗೇರುವುದು ಫಿಕ್ಸ್‌ ಎನ್ನಲಾಗಿದೆ.

ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆಗೆ ಮತ್ತೆ ಮುಹೂರ್ತ ಫಿಕ್ಸ್‌; ಮಾ.3 ಬೆಳಗ್ಗೆ 6 ಗಂಟೆಗೆ ನೇಣು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ