ಆ್ಯಪ್ನಗರ

ಜೆಎನ್‌ಯು ಹಿಂಸಾಚಾರ: ವಾಟ್ಸ್‌ಆ್ಯಪ್‌ ಗ್ರೂಪ್‌ ಸದಸ್ಯರ ಮೊಬೈಲ್‌ ವಶಕ್ಕೆ ಪಡೆಯಲು ಕೋರ್ಟ್‌ ಆದೇಶ

ಜೆಎನ್‌ಯು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎರಡು ವಾಟ್ಸಪ್ ಗ್ರೂಪ್‌ಗಳ ಸದಸ್ಯರಿಗೆ ಸಮನ್ಸ್ ಜಾರಿಗೊಳಿಸುವುದರ ಜೊತೆಗೆ ಅವರ ಮೊಬೈಲ್‌ಗಳನ್ನು ವಶಕ್ಕೆ ಪಡೆಯಿರಿ ಎಂದು ದೆಹಲಿ ಹೈ ಕೋರ್ಟ್ ಪೊಲೀಸರಿಗೆ ಆದೇಶ ನೀಡಿದೆ.

Vijaya Karnataka 14 Jan 2020, 10:46 pm
ಹೊಸದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ(ಜೆಎನ್‌ಯು) ಜ.5 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 'ಫ್ರೆಂಡ್ಸ್‌ ಆಫ್‌ ಆರ್‌ಎಸ್‌ಎಸ್‌' ಮತ್ತು 'ಯೂನಿಟಿ ಅಗೇನ್ಸ್ಟ್‌ ಲೆಫ್ಟ್‌' ಹೆಸರಿನ ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಸದಸ್ಯರಿಗೆ ಸಮನ್ಸ್‌ ನೀಡಿ ಅವರ ಮೊಬೈಲ್‌ಗಳನ್ನು ವಶಕ್ಕೆ ಪಡೆಯುವಂತೆ ದಿಲ್ಲಿಪೊಲೀಸರಿಗೆ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.
Vijaya Karnataka Web delhi high court ordered to police regarding jnu violence
ಜೆಎನ್‌ಯು ಹಿಂಸಾಚಾರ: ವಾಟ್ಸ್‌ಆ್ಯಪ್‌ ಗ್ರೂಪ್‌ ಸದಸ್ಯರ ಮೊಬೈಲ್‌ ವಶಕ್ಕೆ ಪಡೆಯಲು ಕೋರ್ಟ್‌ ಆದೇಶ


ಇದರೊಂದಿಗೆ, ಹಿಂಸಾಚಾರ ದಿನಕ್ಕೆ ಸಂಬಂಧಿಸಿದಂತೆ ಗೂಗಲ್‌ ಹಾಗೂ ವಾಟ್ಸ್‌ಆ್ಯಪ್‌ ಕಂಪನಿಗಳಿಂದ ದಿಲ್ಲಿ ಪೊಲೀಸರು ಕೇಳಿರುವ ಮಾಹಿತಿಗಳನ್ನು ನೀಡುವಂತೆಯೂ ಕಂಪನಿಗಳಿಗೆ ಕೋರ್ಟ್‌ ಸೂಚಿಸಿದೆ. ಇನ್ನು, ಜೆಎನ್‌ಯು ಆಡಳಿತ ಮಂಡಳಿಗೆ ಕ್ಯಾಂಪಸ್‌ನ ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರ ಬೇಡಿಕೆಗೆ ತಕ್ಕಂತೆ ಒದಗಿಸುವಂತೆಯೂ ಕೋರ್ಟ್‌ ಖಡಕ್‌ ನಿರ್ದೇಶನ ನೀಡಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳಾಗಿರುವ ಡಿಜಿಟಲ್‌ ಮಾಹಿತಿಗಳನ್ನು ಸಂರಕ್ಷಿಸಬೇಕು. ಇದರಿಂದ ಹಿಂಸಾಚಾರದ ಹಿಂದಿನ ನೈಜ ಕಾರಣ ಬಯಲಾಗಲಿದೆ ಎಂದು ಒತ್ತಾಯಿಸಿ ಜೆಎನ್‌ಯುನ ಮೂವರು ಪ್ರಾಧ್ಯಾಪಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾ. ಬ್ರಿಜೇಶ್‌ ಸೇಥಿ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ಇನ್ನೊಂದೆಡೆ, ದಿಲ್ಲಿ ಪೊಲೀಸರ ಎಸ್‌ಐಟಿ ತಂಡದ ತನಿಖೆ ಮುಂದುವರಿದಿದ್ದು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮಂಗಳವಾರ ಹಿಂಸಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬುಧವಾರ ಕೂಡ ಅವರು ಭೇಟಿ ಮುಂದುವರಿಸಲಿದ್ದಾರೆ.

ಮೂವರು ಶಂಕಿತರು ಪರಾರಿ

ಹಿಂಸಾಚಾರದಲ್ಲಿ ಭಾಗಿಯಾದವರು ಎನ್ನಲಾದ ಕೋಮಲ್‌ ಶರ್ಮಾ, ರೋಹಿತ್‌ ಶಾ ಹಾಗೂ ಅಕ್ಷತ್‌ ಆವಸ್ಥಿ ತಲೆಮರೆಸಿಕೊಂಡಿದ್ದಾರೆ ಎಂದು ದಿಲ್ಲಿಪೊಲೀಸ್‌ ಮೂಲಗಳು ಹೇಳಿವೆ. ಏತನ್ಮಧ್ಯೆ, ಎಸ್‌ಐಟಿ ತಂಡ ಇನ್ನಿಬ್ಬರು ಶಂಕಿತರಾದ ಸುಚೇತಾ ತಾಲೂಕ್ದಾರ್‌ ಹಾಗೂ ಪ್ರಿಯಾ ರಂಜನ್‌ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ