ಆ್ಯಪ್ನಗರ

ಪತ್ನಿಯನ್ನು ಸಾಯಿಸಿ ಶವದ ಪಕ್ಕದಲ್ಲಿ ಸಂಪೂರ್ಣ ರಾತ್ರಿ ಮಲಗಿದ

ನಿಹಾಲ್ ವಿಹಾರ್ ಪ್ರದೇಶದಲ್ಲಿ ಗುರುವಾರ ಈ ಘಟನೆ ನಡೆದಿದ್ದು ಆರೋಪಿಯನ್ನು ಪೇಮ್ ಅಲಿಯಾಸ್ ಪಪ್ಪು ಎಂದು ಗುರುತಿಸಲಾಗಿದೆ.

TIMESOFINDIA.COM 10 Mar 2019, 12:25 pm
ಹೊಸದಿಲ್ಲಿ: 28 ವರ್ಷದ ವ್ಯಕ್ತಿಯೊಬ್ಬ ಪತ್ನಿಯನ್ನು ಉಸಿರುಗಟ್ಟಿಸಿ ಸಾಯಿಸಿ ಸಂಪೂರ್ಣ ರಾತ್ರಿ ಶವದ ಪಕ್ಕದಲ್ಲಿಯೇ ನಿರುಮ್ಮಳವಾಗಿ ನಿದ್ರಿಸಿದ ಬೆಚ್ಚಿ ಬೀಳಿಸುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
Vijaya Karnataka Web Police Hat


ನಿಹಾಲ್ ವಿಹಾರ್ ಪ್ರದೇಶದಲ್ಲಿ ಗುರುವಾರ ಈ ಘಟನೆ ನಡೆದಿದ್ದು ಆರೋಪಿಯನ್ನು ಪೇಮ್ ಅಲಿಯಾಸ್ ಪಪ್ಪು ಎಂದು ಗುರುತಿಸಲಾಗಿದೆ.

ಗುರುವಾರ ಬೆಳಗ್ಗೆ ನೆರೆಹೊರೆಯ ಮನೆಯವರು ಬಬ್ಲಿ ( ಮೃತ ಮಹಿಳೆ) ತನ್ನ ಕೋಣೆಯಲ್ಲಿ ಶವವಾಗಿ ಬಿದ್ದಿರುವುದನ್ನು ನೋಡಿದ್ದರು. ಪತಿಯನ್ನು ಹುಡುಕಲಾಗಿ ನಾಪತ್ತೆಯಾಗಿರುವುದು ಪತ್ತೆಯಾಯ್ತು ಮತ್ತು ಆತನ ಮೊಬೈಲ್ switched off ಆಗಿತ್ತು. ಹಿಂದಿನ ದಿನ ರಾತ್ರಿ ಪತಿ- ಪತ್ನಿ ಇಬ್ಬರು ಜಗಳವಾಡುತ್ತಿರುವುದು ಕೇಳಿಸಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ಬಬ್ಲಿಯನ್ನು ಉಸಿರುಗಟ್ಟಿಸಿ ಕೊಂದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತಾಗಿತ್ತು. ಪ್ರೇಮ್ ಮೊಬೈಲ್‌ನ್ನು ತಾಂತ್ರಿಕ ಕಣ್ಗಾವಲಿನಲ್ಲಿರಸಲಾಯಿತು.

ದಿಲ್ಲಿಯಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ರೈಲು ನಿಲ್ದಾಣದಲ್ಲಿ ಬಂಧಿಸಲಾಯಿತು.

12 ವರ್ಷಗಳ ಹಿಂದೆ ನಮ್ಮ ವಿವಾಹವಾಗಿತ್ತು. ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಅವಳ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅನುಮಾನವಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಬುಧವಾರ ರಾತ್ರಿ ಕೂಡ ಮತ್ತದೇ ಕಾರಣಕ್ಕೆ ಜಗಳವಾಗಿತ್ತು. ಕುಡಿದ ಮತ್ತಿನಲ್ಲಿ ಆಕೆಗೆ ಥಳಿಸಿ ಕುತ್ತಿಗೆ ಹಿಸುಕಿದೆ. ಬಳಿಕ ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿ ಸೋತು ಶವದ ಪಕ್ಕದಲ್ಲಿಯೇ ಮಲಗಿ ಬೆಳಕಾಗುತ್ತಿದ್ದಂತೆ ಅಲ್ಲಿಂದ ಎದ್ದು ಹೋದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ