ಆ್ಯಪ್ನಗರ

ದಿಲ್ಲಿ ವಿವಿ ಚುನಾವಣೆ - ಎಬಿವಿಪಿಗೆ ಭರ್ಜರಿ ಜಯ

ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ (ಡಿಯುಎಸ್‌ಯು) ನಡೆದ ಚುನಾವಣೆಯಲ್ಲಿಆರ್‌ಎಸ್‌ಎಸ್‌ ಅಂಗಸಂಸ್ಥೆಯಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಗೆಲುವಾಗಿದೆ.

Vijaya Karnataka 13 Sep 2019, 8:11 pm
ಹೊಸದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ (ಡಿಯುಎಸ್‌ಯು) ನಡೆದ ಚುನಾವಣೆಯಲ್ಲಿಆರ್‌ಎಸ್‌ಎಸ್‌ ಅಂಗಸಂಸ್ಥೆಯಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಜಯಭೇರಿ ಭಾರಿಸಿದೆ.
Vijaya Karnataka Web abvp wins delhi


ಎಬಿವಿಪಿ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯ ಮೆರೆದಿದೆ. ಅಧ್ಯಕ್ಷ ಸ್ಥಾನ ಸೇರಿ ಮೂರು ಸ್ಥಾನಗಳಲ್ಲಿಎಬಿವಿಪಿ ಗೆಲುವಿನ ನಗೆ ಬೀರಿದ್ದರೆ, ಕಾರ್ಯದರ್ಶಿ ಸ್ಥಾನವು ಕಾಂಗ್ರೆಸ್‌ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ)ದ ಪಾಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಬಿವಿಪಿಯ ಅಶ್ವಿತ್‌ ದಹಿಯಾ 19 ಸಾವಿರ ಮತಗಳ ಅಂತರದೊಂದಿಗೆ ಎನ್‌ಎಸ್‌ಯುಐನ ಚೇತನಾ ತ್ಯಾಗಿ ಅವರನ್ನು ಸೋಲಿಸಿದ್ದಾರೆ. ಎಬಿವಿಪಿಯ ಪ್ರದೀಪ್‌ ತನ್ವರ್‌ 8574 ಮತಗಳು ಹಾಗೂ ಶಿವಾಂಗಿ ಖರ್ವಾಲ್‌ ಅವರು 2914 ಮತಗಳ ಅಂತರದಲ್ಲಿ ಜಯ ದಾಖಲಿಸುವ ಮೂಲಕ ಉಪಾಧ್ಯಕ್ಷ ಹಾಗೂ ಜಂಟಿ ಕಾರ‍್ಯದರ್ಶಿ ಹುದ್ದೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಾರ‍್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಎನ್‌ಎಸ್‌ಯುಐನ ಆಶೀಶ್‌ ಲಂಬಾ ಅವರು ಎಬಿವಿಪಿಯ ಯೋಗಿ ರಥಿ ಅವರನ್ನು 2,053 ಮತಗಳಿಂದ ಸೋಲಿಸಿದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ ಶೇಕಡ 39.90ರಷ್ಟು ಮತದಾನವಾಗಿತ್ತು. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಶೇಕಡ 44.46ರಷ್ಟು ಮತದಾನವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ