ಆ್ಯಪ್ನಗರ

ಕ್ಯಾನ್ಸರ್ ಸಂಶೋಧನೆಗೆ 2 ಮ್ಯಾರಥಾನ್‌ಗಳಲ್ಲಿ ಓಡಿ 2.6 ಲಕ್ಷ ರೂ. ಸಂಗ್ರಹಿಸಿದ ದಿಲ್ಲಿ ಮೂಲದ ವ್ಯಕ್ತಿ

ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲು ಇತ್ತೀಚೆಗೆ ಭಾರತೀಯರಲ್ಲಿ ಉತ್ಸಾಹ ಹೆಚ್ಚಾಗುತ್ತಿದೆ. ಆದರೆ, ದಿಲ್ಲಿ ಮೂಲದ ವ್ಯಕ್ತಿಯೊಬ್ಬರು ಎರಡು ವಾರಗಳಲ್ಲಿ 2 ಮ್ಯಾರಥಾನ್‌ನಲ್ಲಿ ಓಡಿದ್ದಾರೆ. ಅಲ್ಲದೆ, ಒಳ್ಳೆಯ ಉದ್ದೇಶಕ್ಕಾಗಿ ಹಣ ಸಂಗ್ರಹಿಸಿದ್ದಾರೆ.

TIMESOFINDIA.COM 31 Dec 2019, 5:54 pm
ಹೊಸದಿಲ್ಲಿ: ಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ ರಾಷ್ಟ್ರ ರಾಜಧಾನಿಯಲ್ಲಿ ಓಡುವ ಉತ್ಸಾಹಿಗಳಿಗ ಕೊರತೆಯಿಲ್ಲ. ಆದರೆ ಹೊಸದಿಲ್ಲಿ ಮೂಲದ ಸುರೇಶ್ ಶ್ರೀನಿವಾಸನ್ ಎರಡು ಪ್ರತಿಷ್ಠಿತ ವಿಶ್ವ ಮ್ಯಾರಥಾನ್‌ಗಳನ್ನು ಎರಡು ವಾರಗಳ ಅಂತರದಲ್ಲಿ ಓಡಿ ಮುಗಿಸಿದ್ದಾರೆ. ಅಲ್ಲದೆ, ಇದರ ಹಿಂದೆ ಒಂದು ಸದುದ್ದೇಶವಿದೆ.
Vijaya Karnataka Web suresh srinivasan


ಮಕ್ಕಳಲ್ಲಿ ಕ್ಯಾನ್ಸರ್ ರೋಗದ ಸಂಶೋಧನೆ ಮತ್ತು ಗುಣಪಡಿಸುವಿಕೆಗಾಗಿ ಹಣವನ್ನು ಸಂಗ್ರಹಿಸುವಾಗ ಸುರೇಶ್ ಚಿಕಾಗೊ ಮತ್ತು ನ್ಯೂಯಾರ್ಕ್ ಮ್ಯಾರಥಾನ್‌ಗಳನ್ನು ಸತತವಾಗಿ ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಮೂಲಕ ಟ್ಯಾಕಲ್ ಕಿಡ್ಸ್ ಕ್ಯಾನ್ಸರ್ ಎಂಬ ಎನ್‌ಜಿಒಗೆ 3,694 ಡಾಲರ್ ಅಂದರೆ ರೂ. 2.6 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿದ್ದಾರೆ. ಕ್ಯಾನ್ಸರ್ ಸಂಶೋಧನೆಗೆ ಸಹಾಯ ಮಾಡಲು ಈ ಹಣದ ಬಳಕೆಯಾಗಲಿದೆ ಎಂದು ತಿಳಿದುಬಂದಿದೆ.

ಇನ್ನು, ಈ ಸದುದ್ದೇಶದ ಹಿಂದೆ ಸುರೇಶ್ ಅವರಿಗೆ ವೈಯಕ್ತಿಕ ಕಾರಣವೂ ಇದೆ. ನಾನು ಈ ಪ್ರಯತ್ನವನ್ನು ನನ್ನ ತಂದೆಯ ನೆನಪಿಗಾಗಿ ಅರ್ಪಿಸಿದೆ. ಅವರು 18 ವರ್ಷಗಳಲ್ಲಿ ಎರಡು ಬಾರಿ ಕ್ಯಾನ್ಸರ್‌ಗೆ ತುತ್ತಾಗಿ ಅದರ ವಿರುದ್ಧ ಹೋರಾಡಿದರು. ನನ್ನ ತಂದೆ ನಂಬಿದ್ದ ಸಂದೇಶವನ್ನು ಹರಡಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಜೀವನವು ನಿಮ್ಮನ್ನು ಸಂತೋಷವಾಗಿರಿಸುವುದಕ್ಕಾಗಿ ಇದೆ ಮತ್ತು ಎಲ್ಲರೂ ಸಂತೋಷವಾಗಿರಲು ವ್ಯಾಯಾಮ ಮಾಡಬೇಕು ಎಂದು ಅವರು ಹೇಳುತ್ತಿದ್ದರು ಎಂದು ಸುರೇಶ್‌ ತಿಳಿಸಿದರು.

ಸುರೇಶ್‌ ಶ್ರೀನಿವಾಸನ್‌

ಈ ಸುದ್ದಿ ಓದಿ: 2 ತಾಸಿನೊಳಗೆ ಮ್ಯಾರಥಾನ್ ಕ್ರಮಿಸಿದ ಎಲ್ಯೂಡ್ ಕಿಪ್ಜೊಜ್ ಐತಿಹಾಸಿಕ ಸಾಧನೆ; ಆದರೂ ವಿಶ್ವ ದಾಖಲೆಯಲ್ಲ!

ಅಲ್ಲದೆ, ಜೂನ್‌ ತಿಂಗಳಲ್ಲಿ ಸುರೇಶ್ ಸ್ವತ: ಗಾಯಗೊಂಡಿದ್ದರು. ಆದರೆ, ಭೌತಚಿಕಿತ್ಸಕ ಡಾ. ಚಂದನ್ ಚಾವ್ಲಾ ಅವರ ಸಹಾಯ ಮತ್ತು ಮಾರ್ಗದರ್ಶನದೊಂದಿಗೆ ಮಾತ್ರ ಈ ಮಿಷನ್ ಮ್ಯಾರಥಾನ್‌ಗೆ ತಯಾರಿ ನಡೆಸಲು ನನಗೆ ಸಹಾಯವಾಯಿತು. ಅಲ್ಲದೆ, ಕೊನೆಯಲ್ಲಿ ನಾನು ಅದಕ್ಕೆ ಹೋಗುವಂತಾಯಿತು ಎಂದು ಸುರೇಶ್ ಹೇಳುತ್ತಾರೆ.

ಇದನ್ನೂ ಓದಿ: ವಾಯು ಮಾಲಿನ್ಯದಿಂದ ಕ್ಯಾನ್ಸರ್‌

ಪ್ರತಿಷ್ಠಿತ ಮ್ಯಾರಥಾನ್‌ಗಳಲ್ಲಿ ಓಡುವುದು ಹೆಚ್ಚಿನ ಓಟಗಾರರಿಗೆ ಒಂದು ಸಾಧನೆಯಾದರೂ, ಸುರೇಶ್ ಅವರು ಮ್ಯಾರಥಾನ್‌ನಲ್ಲಿ ಓಡಿ ತಮ್ಮ ಉದ್ದೇಶಕ್ಕಾಗಿ ಸಂಗ್ರಹಿಸಿದ ಹಣದ ಬಗ್ಗೆ ಸಂತೋಷದಿಂದಿದ್ದಾರೆ.

ಭವಿಷ್ಯ ಬದಲಿಸಬಲ್ಲ ತ್ರಿಡಿ ಮುದ್ರಣ ತಂತ್ರಜ್ಞಾನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ