ಆ್ಯಪ್ನಗರ

ಬ್ಯಾಂಕ್‌ನಲ್ಲಿ ಸಾಲ ಸಿಗದೆ ಕಿಡ್ನಿ ಮಾರಾಟಕ್ಕಿಟ್ಟ ರೈತ

ಹೈನುಗಾರಿಕೆ ತರಬೇತಿ ಪಡೆದ ಉತ್ಸಾಹದಲ್ಲಿದ್ದ ರಾಮ್‌ ಕುಮಾರ್‌ ಅವರು ಜಾನುವಾರು ಖರೀದಿ ಮತ್ತು ಶೆಡ್‌ ನಿರ್ಮಾಣಕ್ಕೆ ಸಂಬಂಧಿಕರಿಂದ ಹಣ ಪಡೆದಿದ್ದರು.

PTI 24 Aug 2019, 5:00 am
ಲಖನೌ: ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸಾಲದ ಕೋರಿಕೆಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ನೊಂದ ರೈತರೊಬ್ಬರು ತಮ್ಮ ಕಿಡ್ನಿಯನ್ನೇ ಮಾರಾಟಕ್ಕಿಟ್ಟಿದ್ದಾರೆ. ಸಹರಣ್‌ ಪುರ ಜಿಲ್ಲೆಯ ಚಟ್ಟರ್‌ ಸಾಲಿ ಗ್ರಾಮದ ರಾಮ್‌ ಕುಮಾರ್‌ (30) ಎಂಬವರೇ ಕಿಡ್ನಿ ಮಾರಾಟಕ್ಕಿದೆ ಎಂದು ಸಾರ್ವಜನಿಕವಾಗಿ ಭಿತ್ತಿಪತ್ರ ಹಾಕಿದವರು. ರಾಮ್‌ ಕುಮಾರ್‌ ಅವರು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ(ಪಿಎಂಕೆವಿವೈ)ಯಡಿ ಹೈನುಗಾರಿಕೆ ಕೋರ್ಸ್‌ ನಡೆಸಿದ್ದರು. ಪ್ರಮಾಣಪತ್ರ ತೋರಿಸಿದ ಹೊರತಾಗಿಯೂ ಯಾವ ಸರಕಾರಿ ಬ್ಯಾಂಕೂ ಅವರಿಗೆ ಸಾಲ ಕೊಡಲಿಲ್ಲ. ಹೈನುಗಾರಿಕೆ ತರಬೇತಿ ಪಡೆದ ಉತ್ಸಾಹದಲ್ಲಿದ್ದ ರಾಮ್‌ ಕುಮಾರ್‌ ಅವರು ಜಾನುವಾರು ಖರೀದಿ ಮತ್ತು ಶೆಡ್‌ ನಿರ್ಮಾಣಕ್ಕೆ ಸಂಬಂಧಿಕರಿಂದ ಹಣ ಪಡೆದಿದ್ದರು. ಈಗ ಅವರೆಲ್ಲ ಬಡ್ಡಿ ಸಮೇತ ಹಣ ವಾಪಸ್‌ ಕೇಳುತ್ತಿದ್ದಾರೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ. ಬ್ಯಾಂಕ್‌ಗಳು ಸಾಲ ಕೊಡದೆ ಇರುವುದರಿಂದ ತಮ್ಮ ಕಿಡ್ನಿಯನ್ನೇ ಮಾರಾಟ ಮಾಡದೆ ವಿಧಿಯಿಲ್ಲ ಎಂದು ಹೇಳಿರುವ ಅವರು, ಇದಕ್ಕಾಗಿ ಪೋಸ್ಟರ್‌ಗಳನ್ನು ಹಚ್ಚಿದ್ದಾರೆ.
Vijaya Karnataka Web farmer

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ