ಆ್ಯಪ್ನಗರ

Air India Urinating: ಮೂತ್ರ ವಿಸರ್ಜನೆಯ ಮತ್ತೊಂದು ಪ್ರಕರಣ: ಏರ್ ಇಂಡಿಯಾಗೆ 10 ಲಕ್ಷ ರೂ ದಂಡ

Air India Peeing Case: ಪ್ಯಾರಿಸ್- ದಿಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಡಿ. 6ರಂದು ಸೀಟಿನ ಮೇಲೆ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣವನ್ನು ವರದಿ ಮಾಡದ ಕಾರಣಕ್ಕೆ ಸಂಸ್ಥೆಗೆ ಡಿಜಿಸಿಎ 10 ಲಕ್ಷ ರೂ ದಂಡ ವಿಧಿಸಿದೆ.

Authored byಅಮಿತ್ ಎಂ.ಎಸ್ | Vijaya Karnataka Web 24 Jan 2023, 4:31 pm

ಹೈಲೈಟ್ಸ್‌:

  • ಪ್ಯಾರಿಸ್- ದಿಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಡಿ. 6ರಂದು ನಡೆದಿದ್ದ ಘಟನೆ
  • ಮಹಿಳೆಯ ಪಕ್ಕದ ಖಾಲಿ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ವ್ಯಕ್ತಿ
  • ವಿವರಣೆ ಕೇಳಿದ ಬಳಿಕವಷ್ಟೇ ವರದಿ ನೀಡಿದ್ದಕ್ಕೆ ಏರ್ ಇಂಡಿಯಾಗೆ ಡಿಜಿಸಿಎ ದಂಡ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Air_India
ಹೊಸದಿಲ್ಲಿ: ವಿಮಾನದಲ್ಲಿ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆ ಮಾಡಿದ ಮತ್ತೊಂದು ಪ್ರಕರಣದಲ್ಲಿ ಕೂಡ ಏರ್ ಇಂಡಿಯಾಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ದಂಡ ವಿಧಿಸಿದೆ. ಪ್ಯಾರಿಸ್- ದಿಲ್ಲಿ ವಿಮಾನದಲ್ಲಿ ಮಹಿಳೆ ಪಕ್ಕದ ಖಾಲಿ ಸೀಟಿನ ಬ್ಲಾಂಕೆಟ್ ಮೇಲೆ ವ್ಯಕ್ತಿಯೊಬ್ಬ ಕಳೆದ ತಿಂಗಳು ಮೂತ್ರ ವಿಸರ್ಜನೆ ಮಾಡಿದ್ದ ಎಂದು ಆರೋಪಿಸಲಾಗಿದ್ದು, ಈ ಪ್ರಕರಣದ ಬಗ್ಗೆ ವರದಿ ನೀಡದ ಕಾರಣಕ್ಕೆ ಏರ್ ಇಂಡಿಯಾ ವಿಮಾನ ಸಂಸ್ಥೆಗೆ 10 ಲಕ್ಷ ರೂ ದಂಡ ವಿಧಿಸಲಾಗಿದೆ.
ಟಾಟಾ ಸಮೂಹ ಮಾಲೀಕತ್ವದ ಏರ್‌ಲೈನ್ಸ್, ಡಿಸೆಂಬರ್ 6ರಂದು ನಡೆದ ಘಟನೆಯನ್ನು ತನ್ನ ಆಂತರಿಕ ಸಮಿತಿಯ ಗಮನಕ್ಕೆ ತರುವಲ್ಲಿ ತಡ ಮಾಡಿದೆ ಎಂದು ಡಿಜಿಸಿಎ ಅಸಮಾಧಾನ ವ್ಯಕ್ತಪಡಿಸಿದೆ.
Air India Urinating Case: ಮೂತ್ರ ವಿಸರ್ಜನೆ ಪ್ರಕರಣದಲ್ಲಿ ಏರ್ ಇಂಡಿಯಾಗೆ ಆಘಾತ: 30 ಲಕ್ಷ ದಂಡದ ಬರೆ

ಏರ್ ಇಂಡಿಯಾ ವಿಮಾನವು ಹಾರಾಟ ನಡೆಸುವಾಗ ಪ್ರಯಾಣಿಕರೊಬ್ಬರ ಸೀಟಿನ ಮೇಲೆ ಮತ್ತೊಬ್ಬ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ ಎರಡನೇ ಪ್ರಕರಣ ಇದಾಗಿದೆ. ನವೆಂಬರ್ 26ರಂದು 70 ವರ್ಷದ ಮಹಿಳೆಯೊಬ್ಬರ ಮೇಲೆ ಮದ್ಯದ ನಶೆಯಲ್ಲಿ ಶಂಕರ್ ಮಿಶ್ರಾ ಎಂಬ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಈ ಘಟನೆ ಭಾರಿ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ ಡಿ. 6ರಂದು ನಡೆದಿದ್ದ ಘಟನೆ ಕೂಡ ಬಯಲಾಗಿತ್ತು.

ಈ ಎರಡೂ ಘಟನೆಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದ ಏರ್ ಇಂಡಿಯಾ, ಅದನ್ನು ಡಿಜಿಸಿಎ ಗಮನಕ್ಕೆ ಕೂಡ ತಂದಿರಲಿಲ್ಲ. ಮಾಧ್ಯಮಗಳ ಮೂಲಕ ಘಟನೆಗಳು ಬೆಳಕಿಗೆ ಬಂದಿದ್ದವು. ಡಿ. 6ರ ಘಟನೆ ಬಗ್ಗೆ ವಿವರಣೆ ನೀಡಿದ ಬಳಿಕವಷ್ಟೇ ಏರ್ ಇಂಡಿಯಾ ತನಗೆ ಮಾಹಿತಿ ನೀಡಿದೆ ಎಂದು ಡಿಜಿಸಿಎ ಹೇಳಿದೆ.
Air India Case: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ್ದ ಮತ್ತೊಂದು ಘಟನೆ ಬೆಳಕಿಗೆ!

2023ರ ಜ. 23ರಂದು ಘಟನೆಯ ಬಗ್ಗೆ ವರದಿ ಕೇಳುವವರೆಗೂ ಡಿಜಿಸಿಎಗೆ ಏರ್ ಇಂಡಿಯಾ ವರದಿ ನೀಡಿರಲಿಲ್ಲ ಎಂದು ಡಿಜಿಸಿಎ ಹೇಳಿಕೆ ನೀಡಿದೆ. ಅನಾಗರಿಕವಾಗಿ ವರ್ತಿಸುವ ಪ್ರಯಾಣಿಕರನ್ನು ನಿಭಾಯಿಸುವ ಡಿಜಿಸಿಎ ನಿಯಮಾವಳಿಗಳನ್ನು ಏರ್ ಇಂಡಿಯಾ ಸಂಸ್ಥೆ ಪಾಲಿಸದೆ ಇರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.

ನವೆಂಬರ್ 26ರಂದು ನ್ಯೂಯಾರ್ಕ್- ದಿಲ್ಲಿ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣದಲ್ಲಿಯೂ ಏರ್ ಇಂಡಿಯಾ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಮತ್ತು ಅದರ ಬಗ್ಗೆ ವರದಿ ಮಾಡಿರಲಿಲ್ಲ. ಈ ಘಟನೆಯಲ್ಲಿ ಏರ್ ಇಂಡಿಯಾಗೆ ಡಿಜಿಸಿಎ 30 ಲಕ್ಷ ರೂ ದಂಡ ವಿಧಿಸಿದೆ. ಹೀಗಾಗಿ ಒಂದೇ ತಿಂಗಳಲ್ಲಿ ಏರ್ ಇಂಡಿಯಾ ಸಂಸ್ಥೆಯು ಒಟ್ಟು 40 ಲಕ್ಷ ರೂ ದಂಡ ತೆರುವಂತಾಗಿದೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ