ಆ್ಯಪ್ನಗರ

ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ 14 ಅನರ್ಹ ಶಾಸಕರು

ಕರ್ನಾಟಕ ರಾಜಕೀಯ ಕ್ಷಿಪ್ರಕ್ರಾಂತಿ ಒಂದು ಹಂತ ಮುಗಿದು ಈಗ ಕಾನೂನು ಹೋರಾಟದ ಅಂಗಳಕ್ಕೆ ಬಂದು ನಿಂತಿದೆ. ಅನರ್ಹಗೊಂಡಿರುವ ಶಾಸಕರು ಈಗ ಮಾಜಿ ಸ್ಪೀಕರ್ ನಿರ್ಧಾರ ರದ್ದುಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

Vijaya Karnataka Web 1 Aug 2019, 8:48 pm
ಹೊಸದಿಲ್ಲಿ: ದೋಸ್ತಿ ಸರಕಾರ ಪತನಕ್ಕೆ ಕಾರಣರಾಗಿ ಅನರ್ಹಗೊಂಡಿದ್ದ 14 ಶಾಸಕರು ಮಾಜಿ ಸ್ಪೀಕರ್‌ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Vijaya Karnataka Web ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌


ತಮ್ಮನ್ನು ಅನರ್ಹತೆ ಮಾಡಿರುವ ಮಾಜಿ ಸ್ಪೀಕರ್‌ ಆದೇಶವನ್ನು ರದ್ದುಗೊಳಿಸುವಂತೆ ಕಾಂಗ್ರೆಸ್‌, ಜೆಡಿಎಸ್‌ನ 14 ಶಾಸಕರು ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ.

ಈ ಮೊದಲು ಅನರ್ಹಗೊಂಡಿದ್ದ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್‌ ಕುಮಟಳ್ಳಿ, ರಾಣೆಬೆನ್ನೂರಿನ ಶಾಸಕ ಆರ್‌. ಶಂಕರ್‌ ಈಗಾಗಲೇ ತಮ್ಮ ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈಗ ಇನ್ನುಳಿದ 14 ಶಾಸಕರು ಕಾನೂನು ಹೋರಾಟಕ್ಕೆ ಇಳಿದಿದ್ದಾರೆ.

ಸಂವಿಧಾನದ 32ನೇ ಪರಿಚ್ಛೇದದ ಅನುಸಾರ ಅರ್ಜಿ ಸಲ್ಲಿಸಿರುವ ಅನರ್ಹ ಶಾಸಕರು, ಸಂವಿಧಾನದ 14, 19, 21 ಪರಿಚ್ಛೇದಗಳ ಅನ್ವಯ ನಮಗೆ ನೀಡಲಾಗಿರುವ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಸ್ಪೀಕರ್‌ ಅವರು ಹತ್ತಿಕ್ಕಿ 190ನೇ ಪರಿಚ್ಛೇದದ ಉಲ್ಲಂಘನೆ ಮಾಡಿದ್ದಾರೆ. ರಾಜೀನಾಮೆ ಮತ್ತು ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲಿಸಿ ಸ್ಪೀಕರ್‌ ಆದೇಶಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಅನರ್ಹ ಶಾಸಕರು ಸಲ್ಲಿಸಿರುವ ತಮ್ಮ ಅರ್ಜಿಯಲ್ಲಿ ವಿಶೇಷವಾಗಿ 361(ಬಿ) ಪರಿಚ್ಛೇದವನ್ನು ಉಲ್ಲೇಖಿಸಿದ್ದು, ಇದರನ್ವಯ ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ನ್ಯಾಯಾಲಯದ ಗಮನ ಸೆಳೆದಿದ್ದಾರೆ.

ಜೆಡಿಎಸ್‌ನ ಎಚ್‌ ವಿಶ್ವನಾಥ್‌, ಕೆ ಗೋಪಾಲಯ್ಯ, ನಾರಾಯಣಗೌಡ ಅರ್ಜಿ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಮುನಿರತ್ನ, ಎಸ್‌ಟಿ ಸೋಮಶೇಖರ್‌, ಭೈರತಿ ಬಸವರಾಜ್‌, ಎಂಟಿಬಿ ನಾಗರಾಜ್‌, ಬಿಸಿ ಪಾಟೀಲ್‌, ಪ್ರತಾಪ್‌ ಗೌಡ ಪಾಟೀಲ್‌, ಡಾ. ಕೆ. ಸುಧಾಕರ್‌, ರೋಷನ್‌ ಬೇಗ್‌, ಆನಂದ್‌ ಸಿಂಗ್‌, ಶಿವರಾಮ್‌ ಹೆಬ್ಬಾರ್‌ ಅವರು ಮಾಜಿ ಸ್ಪೀಕರ್‌ ನೀಡಿದ ತೀರ್ಮಾನ ಪ್ರಶ್ನಿಸಿ ಕಾನೂನಿನ ಮೊರೆ ಹೋಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ