ಆ್ಯಪ್ನಗರ

ಐಎಂಡಿ ಬಗ್ಗೆ ಅಸಮಾಧಾನ, ಖಾಸಗಿಗೆ ಹವಾವಾನ ಮುನ್ಸೂಚನೆ ಜವಾಬ್ದಾರಿ ನೀಡಿದ ಕೇರಳ!

ಹವಾಮಾನ ಮೂನ್ಸೂಚನೆ ವಿಚಾರಕ್ಕೆ ಸಂಬಂಧಪಟ್ಟಂತೆ ಐಎಂಡಿ ಜೊತೆ ಅಸಮಾಧಾನ ಹೊಂದಿದ್ದ ಕೇರಳ ಸರ್ಕಾರ ಇದೀಗ ಖಾಸಗಿ ಸಂಸ್ಥೆಗಳಿಗೆ ಈ ಜವಾಬ್ದಾರಿಯನ್ನ ನೀಡಿದೆ. ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ಹವಾಮಾನ ಮೂನ್ಸೂಚನೆಗೆ ಖಾಸಗಿಯ ಮೊರೆ ಹೋಗಿದೆ.

Indiatimes 24 Jun 2020, 9:34 am
ಹೊಸದಿಲ್ಲಿ: ದೇಶದಲ್ಲಿ ಇದೆ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ಹವಾಮಾನ ಮೂನ್ಸೂಚನೆ ನೀಡುವ ಜವಾಬ್ದಾರಿಯನ್ನ ಖಾಸಗಿ ಸಂಸ್ಥೆಗಳಿಗೆ ನೀಡಿದ ಘಟನೆ ನಡೆದಿದೆ. ಕೇರಳ ಸರ್ಕಾರ ಭಾರತೀಯ ಹವಾಮಾನ ಇಲಾಖೆಗೆ ಕೋಕ್‌ ನೀಡಿ, ಇದೀಗ ಖಾಸಗಿ ಸಂಸ್ಥೆಗಳಿಗೆ ಈ ಜವಾಬ್ದಾರಿಯನ್ನ ನೀಡಿದೆ.
Vijaya Karnataka Web photo (2)


ಹವಾಮಾನ ಮುನ್ನೆಚ್ಚರಿಕೆ ಸೇವೆಯನ್ನು ಸುಧಾರಣೆ ಮಾಡಲು ನಿರ್ಧರಿಸಿರುವ ಕೇರಳ ಸರಕಾರ, ಖಾಸಗಿ ವಲಯದ ಸ್ಕೈಮೆಟ್‌ ಪ್ರೈವೇಟ್‌ ಲಿಮಿಡೆಟ್‌, ಅಥ್‌ರ್‌ ನೆಟ್‌ವರ್ಕ್ ಮತ್ತು ಐಬಿಎಂ ವೆದರ್‌ ಕಂಪನಿಯ ಸೇವೆ ಬಳಸಿಕೊಳ್ಳಲು ಮುಂದಾಗಿದೆ. ಇವುಗಳಿಗೆ ವರ್ಷದ ಸೇವಾ ಗುತ್ತಿಗೆಯಾಗಿ 95 ಲಕ್ಷ ರೂ.ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಸೇವೆಯ ಬಗ್ಗೆ ಕೇರಳ ಸರಕಾರ ಅಸಮಾಧಾನ ವ್ಯಕ್ತಪಡಿಸುತ್ತ ಬಂದಿದ್ದು, ಇದೇ ಮೊದಲ ಬಾರಿಗೆ ಖಾಸಗಿ ಹವಾಮಾನ ಕಂಪನಿಗಳಿಗೆ ಮುನ್ನೆಚ್ಚರಿಕೆ ನೀಡುವ ಜವಾಬ್ದಾರಿ ವಹಿಸಿದೆ. ಈ ಬಗ್ಗೆ ಕೇರಳ ವಿಪತ್ತು ನಿರ್ವಹಣ ವಿಭಾಗ ಆದೇಶ ಹೊರಡಿಸಿದೆ. ಒಂದು ವರ್ಷದ ಪೈಲೆಟ್‌ ಯೋಜನೆ ರೀತಿಯಲ್ಲಿ ಖಾಸಗಿ ಸಂಸ್ಥೆಗಳಿಂದ ಹವಾಮಾನ ಮೂನ್ಸೂಚನೆ ಜವಾಬ್ದಾರಿ ನೀಡಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಭಾರತ-ಚೀನಾ ಗಡಿ ಬಳಿಯ ಸೇತುವೆ ಕುಸಿತ: ನೋಡ ನೋಡುತ್ತಿದ್ದಂತೇ ಕಂದಕಕ್ಕೆ ಉರುಳಿದ ಟ್ರಕ್!

ಇನ್ನು ಈ ಹಿಂದಿನಿಂದಲೂ ಎಲ್ಲಾ ರಾಜ್ಯಗಳಿಗೂ ಸರ್ಕಾರಿ ಸ್ವಾಮ್ಯದ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡುತ್ತಿತ್ತು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಐಎಂಡಿ, ''ನೂತನ ಹವಾಮಾನ ಮುನ್ಸೂಚನೆ ಕೇಂದ್ರಗಳನ್ನು ಸ್ಥಾಪಿಸುವ ವಿಷಯದಲ್ಲಿ ಕೇರಳ ಸರಕಾರ ಸಹಕರಿಸದೇ ಇರುವುದರಿಂದ ತಮಗೆ ನಿಖರ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಈಗ ನಮ್ಮನ್ನು ಕಡೆಗಣಿಸಿ ಖಾಸಗಿಯವರನ್ನು ನೆಚ್ಚಿಕೊಂಡಿದ್ದಾರೆ,'' ಎಂದು ಐಎಂಡಿ ಬೇಸರ ವ್ಯಕ್ತಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ