ಆ್ಯಪ್ನಗರ

ಇಡಿ ಕಸ್ಟಡಿಯಲ್ಲಿ ಇರುತ್ತೇನೆ, ನೀವು ಊರಿಗೆ ಹೋಗಿ, ಪ್ರತಿಭಟನೆ ಚೆನ್ನಾಗಿ ಮಾಡಿದ್ದೀರಿ, ಥ್ಯಾಂಕ್ಸ್‌: ಬೆಂಬಲಿಗರಿಗೆ ಡಿಕೆಶಿ ಪ್ರತಿಕ್ರಿಯೆ

ಜಾರಿ ನಿರ್ದೇಶನಾಲಯವು ಡಿ.ಕೆ ಶಿವಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ 8.56 ಕೋಟಿ ಹಣ ಪತ್ತೆಯಾಗಿತ್ತು. ಈ ಕುರಿತು ಡಿಕೆಶಿ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.

Vijaya Karnataka Web 13 Sep 2019, 6:29 pm
ಹೊಸದಿಲ್ಲಿ: ಕಳೆದ 15 ದಿನಗಳಿಂದ ಜಾರಿ ನಿರ್ದೇಶನಾಲಯದ ಸುಳಿಯಲ್ಲಿ ಸಿಲುಕಿರುವ ಮಾಜಿ ಸಚಿವ ಹಾಗೂ ತಮ್ಮ ನೆಚ್ಚಿನ ನಾಐಕ ಡಿಕೆ ಶಿವಕುಮಾರ್‌ ಅವರನ್ನು ನೋಡಲು ನೂರಾರು ಅಭಿಮಾನಿಗಳು ಆಗಮಿಸಿದ್ದರು.
Vijaya Karnataka Web ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್


ಶುಕ್ರವಾರ ಮಧ್ಯಾಹ್ನ ಹೊಸದಿಲ್ಲಿಯ ರೋಸ್‌ ಅವೆನ್ಯೂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರೆ, ಹೊರಗೆ ಬೆಂಬಲಿಗರು ಜಮೆಗೊಂಡಿದ್ದರು.

ಒಂದು ಹಂತದಲ್ಲಿ ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಾಧೀಶರು ಕೆಲವು ಸಮಯ ತೀರ್ಪು ಕಾಯ್ದಿರಿಸಿ ತಮ್ಮ ಕಚೇರಿಗೆ ಹೋದರು.

ಈ ಸಂದರ್ಭದಲ್ಲಿ ಕೋರ್ಟ್‌ ಆವರಣದ ಹೊರಗೆ ಬರುತ್ತಿದ್ದಂತೆ ಡಿಕೆಶಿ ಅಣ್ಣಂಗೆ ಜೈ ಎಂದು ಘೋಷಣೆ ಕೂಗಿದರು.

ಕೂಡಲೇ ಅವರನ್ನು ಸಮಾಧಾನಪಡಿಸಿದ ಡಿಕೆ ಶಿವಕುಮಾರ್‌, ಇನ್ನೂ ಕೆಲವು ದಿನ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲೇ ಇರುತ್ತೇನ. ನೀವೆಲ್ಲರೂ ನಿಮ್ಮ ನಿಮ್ಮ ಊರುಗಳಿಗೆ ಹೋಗಿ ಎಂದರು.

PHOTOS: ಡಿಕೆಶಿ ಬಂಧನ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಕಂಡ ದೃಶ್ಯಗಳು...
ಡಿಕೆಶಿ ಪ್ರಕರಣ: ವಕೀಲರಿಗೆ ಜಡ್ಜ್‌ ಕೇಳಿದ ಪ್ರಶ್ನೆಗಳೇನು?

ಡಿಕೆ ಶಿವಕುಮಾರ್‌ ಕಸ್ಟಡಿ ಅವಧಿ ನಾಲ್ಕು ದಿನ ವಿಸ್ತರಣೆ, ಸೆ.17ರವರೆಗೆ ವಿಚಾರಣೆ

ಮೊನ್ನೆ ನನ್ನ ಪರವಾಗಿ ಭರ್ಜರಿಯಾಗಿ ಪ್ರತಿಭಟನೆ, ಮೆರವಣಿಗೆ ಮಾಡಿದ್ದೀರಿ. ನಿಮ್ಮೆಲ್ಲರಿಗೂ ಥ್ಯಾಂಕ್ಸ್‌ ಎಂದು ಡಿಕೆ ಶಿವಕುಮಾರ್‌ ಹೇಳಿ ಮತ್ತೆ ಕೋರ್ಟ್‌ ಹಾಲ್‌ ಒಳಗೆ ಪ್ರವೇಶಿಸಿದರು.

ಡಿಕೆಶಿ ಹೊರ ಹೋದ ನಂತರ, ತೀರ್ಪು ಪ್ರಕಟಗೊಂಡಿತು. ನ್ಯಾಯಾಧೀಶರು ಆದೇಶ ಓದುತ್ತಿದ್ದಂತೆ ಸಹೋದರ, ಸಂಸದ ಡಿಕೆ ಸುರೇಶ್‌, ಬೆಂಬಲಿಗರು, ಅಭಿಮಾನಿಗಳು ನಿರಾಸೆಗೊಂಡು ಕೋರ್ಟ್‌ನಿಂದ ಹೊರ ನಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ