ಆ್ಯಪ್ನಗರ

DMK: ಕರುಣಾನಿಧಿ ಆಪ್ತರು ನನ್ನ ಜತೆ ಇದ್ದಾರೆ ಎಂದ ಅಳಗಿರಿ: 'ದ್ರಾವಿಡ ಕಾಳಗ'ಕ್ಕೆ ನಾಂದಿ?

ಡಿಎಂಕೆ ಮುಖಂಡ ಕರುಣಾನಿಧಿ ಸಾವಿನ ಬೆನ್ನಲ್ಲೇ ಅವರ ಉತ್ತರಾಧಿಕಾರಿ ಮತ್ತು ತಮಿಳುನಾಡು ರಾಜಕೀಯ ಕುರಿತಂತೆ ವಿವಿಧ ಚಟುವಟಿಕೆ ಗರಿಗೆದರಿದ್ದು, ಕರುಣಾನಿಧಿ ಅವರಿಗೆ ಆಪ್ತರಾಗಿದ್ದ ಮತ್ತು ಪಕ್ಷ ನಿಷ್ಠೆ ಹೊಂದಿರುವ ಹಲವು ನಾಯಕರು ತಮ್ಮ ಜತೆ ಸಂಪರ್ಕದಲ್ಲಿದ್ದು, ತಮಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಡಿಎಂಕೆಯಿಂದ ಉಚ್ಚಾಟಿತ ನಾಯಕ, ಕರುಣಾನಿಧಿ ಪುತ್ರ ಎಂ. ಕೆ. ಅಳಗಿರಿ ಹೇಳಿದ್ದಾರೆ.

Vijaya Karnataka Web 13 Aug 2018, 4:49 pm
ಚೆನ್ನೈ: ಡಿಎಂಕೆ ಮುಖಂಡ ಕರುಣಾನಿಧಿ ಸಾವಿನ ಬೆನ್ನಲ್ಲೇ ಅವರ ಉತ್ತರಾಧಿಕಾರಿ ಮತ್ತು ತಮಿಳುನಾಡು ರಾಜಕೀಯ ಕುರಿತಂತೆ ವಿವಿಧ ಚಟುವಟಿಕೆ ಗರಿಗೆದರಿದ್ದು, ಕರುಣಾನಿಧಿ ಅವರಿಗೆ ಆಪ್ತರಾಗಿದ್ದ ಮತ್ತು ಪಕ್ಷ ನಿಷ್ಠೆ ಹೊಂದಿರುವ ಹಲವು ನಾಯಕರು ತಮ್ಮ ಜತೆ ಸಂಪರ್ಕದಲ್ಲಿದ್ದು, ತಮಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಡಿಎಂಕೆಯಿಂದ ಉಚ್ಚಾಟಿತ ನಾಯಕ, ಕರುಣಾನಿಧಿ ಪುತ್ರ ಎಂ. ಕೆ. ಅಳಗಿರಿ ಹೇಳಿದ್ದಾರೆ.
Vijaya Karnataka Web Alagiri DMK


ಕುಟುಂಬ ಸದಸ್ಯರ ಜತೆ ಮರೀನಾ ಬೀಚ್‌ನಲ್ಲಿನ ಕರುಣಾನಿಧಿ ಸಮಾಧಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಳಗಿರಿ, ನಮ್ಮ ನಾಯಕ ಕರುಣಾನಿಧಿ ಅವರಿಗೆ ಗೌರವ ನಮನ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ಅವರ ಜತೆ ನಿಷ್ಠೆಯಿಂದಿದ್ದ ಮತ್ತು ಆಪ್ತರಾಗಿದ್ದ ಡಿಎಂಕೆ ಮುಖಂಡರು ನನ್ನ ಜತೆ ಸಂಪರ್ಕದಲ್ಲಿದ್ದಾರೆ. ಮತ್ತು ಅವರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಂದೆ ಸೂಕ್ತ ಸಮಯ ಬರಲಿದೆ. ಆಗ ಎಲ್ಲವನ್ನೂ ತಿಳಿಸುತ್ತೇನೆ ಎಂದಿದ್ದಾರೆ.

ಅಳಗಿರಿ ಜತೆ ಪುತ್ರ ದುರೈ ದಯಾನಿಧಿ ಮತ್ತು ಪುತ್ರಿ ಕಯಾಳಿಜಿ ಕೂಡ ಡಿಎಂಕೆ ನಾಯಕ ಕರುಣಾನಿಧಿ ಸಮಾಧಿಗೆ ಭೇಟಿ ನೀಡಿ ಗೌರವ ಅರ್ಪಿಸಿದ್ದರು.
ಜತೆಗೆ ಡಿಎಂಕೆ ಕಾರ್ಯಕಾರಿ ಸಮಿತಿ ಸಭೆ ಕುರಿತು ತಮಗೆ ಮಾಹಿತಿಯಿಲ್ಲ, ನಾನು ಡಿಎಂಕೆ ಪಕ್ಷದಲ್ಲಿಲ್ಲ. ಹೀಗಾಗಿ ಅವರ ಕುರಿತು ಏನೂ ಕೇಳಬೇಡಿ ಎಂದು ಅಳಗಿರಿ ಹೇಳಿದ್ದಾರೆ.

ಈ ಸುದ್ದಿಯನ್ನು ತಮಿಳಿನಲ್ಲಿ ಓದಿ:

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ