ಆ್ಯಪ್ನಗರ

Surgical strike 2.0 ಮಿರಾಜ್‌ 2000 ಯುದ್ಧ ವಿಮಾನವನ್ನೇ ಆಯ್ಕೆ ಮಾಡಿದ್ದೇಕೆ ಗೊತ್ತೇ?

ಸುಖೋಯ್‌-30 ಸೇರಿದಂತೆ ಭಾರತೀಯ ವಾಯುಸೇನೆಯ ಬಳಿ ಬಲಿಷ್ಠ ಯುದ್ಧ ವಿಮಾನಗಳಿತ್ತಾದರೂ ಮಿರಾಜ್ 2000ಗೆ ಅವಕಾಶ ನೀಡಲಾಗಿತ್ತು. ಏಕೆಂದರೆ ಕಠಿಣ ದಾಳಿ ಪರಿಸ್ಥಿತಿಯ ನಿಭಾಯಿಸುವುದು, ಹಗುರ ಹಾಗೂ ಅತ್ಯಂತ ವೇಗವಾದ ಚಲಾವಣೆ ಮಾಡಬಲ್ಲ ಶಕ್ತಿ ಮಿರಾಜ್‌ಗಳಿಗಿವೆ.

Times Now 26 Feb 2019, 6:11 pm
[This story originally published in Times of India on Feb 26,2019]
Vijaya Karnataka Web mirarj

ಹೊಸದಿಲ್ಲಿ: ಪಾಕಿಸ್ತಾನದ ಬಾಲಕೋಟ್‌ಗೆ ನಸುಕಿನ ವೇಳೆಯಲ್ಲಿ ನುಗ್ಗಿ ಜೈಷ್‌ ಉಗ್ರರನ್ನು ಬಗ್ಗು ಬಡಿಯಲು ಮಿರಾಜ್‌ 2000 ಯುದ್ಧ ವಿಮಾನಗಳನ್ನೇ ಆಯ್ಕೆ ಮಾಡಲಾಗಿತ್ತು.

ಸುಖೋಯ್‌-30 ಸೇರಿದಂತೆ ಭಾರತೀಯ ವಾಯುಸೇನೆಯ ಬಳಿ ಬಲಿಷ್ಠ ಯುದ್ಧ ವಿಮಾನಗಳಿತ್ತಾದರೂ ಮಿರಾಜ್ 2000ಗೆ ಅವಕಾಶ ನೀಡಲಾಗಿತ್ತು. ಏಕೆಂದರೆ ಕಠಿಣ ದಾಳಿ ಪರಿಸ್ಥಿತಿಯ ನಿಭಾಯಿಸುವುದು, ಹಗುರ ಹಾಗೂ ಅತ್ಯಂತ ವೇಗವಾದ ಚಲಾವಣೆ ಮಾಡಬಲ್ಲ ಶಕ್ತಿ ಮಿರಾಜ್‌ಗಳಿಗಿವೆ. ಒಂದೇ ಕಾರ್ಯಾಚರಣೆಯಲ್ಲಿ 2-3 ಟಾರ್ಗೆಟ್‌ಗಳನ್ನು ನಿರ್ಮಾಮ ಮಾಡುವ ಕೆಲಸವನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯ ಈ ಯುದ್ಧ ವಿಮಾನಗಳಿಗಿದೆ.

ದುಷ್ಕರ್ಮಿಗಳನ್ನು ಕೆಲವಾರು ಕಿ.ಮೀ ದೂರದಿಂದಲೇ ಗುರುತಿಸಬಲ್ಲ ಯುದ್ಧ ವಿಮಾನವಾಗಿರುವುದು ಮತ್ತೊಂದು ಪ್ಲಸ್‌ ಪಾಯಿಂಟ್‌.
ಕಾರ್ಗಿಲ್‌ ಯುದ್ಧದಲ್ಲೂ ಮಿರಾಜ್‌ ಪರಾಕ್ರಮ ಶ್ಲಾಘನೀಯ!

ಲೇಸರ್‌ ಗೈಡೆಡ್‌ ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲ ಮಿರಾಜ್‌, 1999ರ ಕಾರ್ಗಿಲ್‌ ಯುದ್ಧದ ವೇಳೆ ಶತ್ರುಗಳ ಸಂಹಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಅಲ್ಲದೆ ವಿವಿಧ ಬಗೆಯ ಬಾಂಬ್‌ಗಳು, ಹೆಚ್ಚು ತೂಕವುಳ್ಳ ಬಾಂಬ್‌ಗಳನ್ನು ಆಗಸಕ್ಕೆ ಒಯ್ಯ ಬಲ್ಲ ಸಾಮರ್ಥ್ಯವೇ ಸರ್ಜಿಕಲ್‌ ಏರ್‌ಸ್ಟ್ರೈಕ್‌ಗೆ ಮಿರಾಜ್‌2000 ಆಯ್ಕೆಗೆ ಪ್ರಮುಖ ಕಾರಣಗಳು.

ಇದೆಲ್ಲಕ್ಕಿಂತಲೂ ಪ್ರಮುಖವಾಗಿ ರಾತ್ರಿ ವೇಳೆಯ ಕಾರ್ಯಾಚರಣೆಯಲ್ಲಿ ಸ್ಟಷ್ಟ ಗೋಚರತೆಗಾಗಿ ವಿಶೇಷ ಉಪಕರಣಗಳಿದ್ದು, ಇವುಗಳು ದಾಳಿ ನಡೆಸಬೇಕಾದ ಸ್ಥಳಗಳನ್ನು ಸುಲಭವಾಗಿ ಪೈಲಟ್‌ಗೆ ಗೋಚರಿಸುವಂತೆ ಮಾಡುತ್ತವೆ. ಅಂದರೆ ಮಲ್ಟಿಕಲರ್‌, ಮಲ್ಟಿ ಫಂಕ್ಷನ್‌ ಡಿಸ್‌ಪ್ಲೇ ಇರುವ ಕಾಕ್‌ಪಿಟ್‌ ಜತೆ ಆಧುನಿಕ ಡಿಜಿಟಲ್‌ ಡಿಸ್ಪ್‌ಪ್ಲೇಗಳನ್ನೂ ಒಳಗೊಂಡಿದೆ.

ಪಾಕಿಸ್ತಾನದ ಬಳಿ ಇರುವ ಅಮೆರಿಕದ ಎಫ್‌-16ನಿಂದಲೂ ಫ್ರೆಂಚ್‌ದ ಡಸಾಲ್ಟ್‌ ಏವಿಯೇಷನ್‌ ಸಿದ್ಧಪಡಿಸಿದ ಮಿರಾಜ್‌ 2000 ವಿವಿಧ ಬಗೆಯ ವೈಶಿಷ್ಟ್ಯತೆಗಳನ್ನು ಹೊಂದಿದೆ. ಎಂಬಿಡಿಎ ಶ್ರೇಣಿಯ ವಿವಿಧ ಕ್ಷಿಪಣಿಗಳು, ಆರ್ಮತ್‌ ಆ್ಯಂಟಿ ರೇಡಾರ್‌ ಮಿಸೈಲ್‌, ರಾಕೆಟ್‌ ಲಾಂಚರ್‌ಗಳನ್ನು ಮಿರಾಜ್‌ ಹೊತ್ತೊಯ್ಯಬಲ್ಲದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ