ಆ್ಯಪ್ನಗರ

500 ರೂ. ಪಡೆಯಲು ನಿರಾಕರಿಸಿದ ಆಸ್ಪತ್ರೆ, ನವಜಾತ ಶಿಶು ಸಾವು

ಚಲಾವಣೆಯಲ್ಲಿರುವ ನೋಟುಗಳನ್ನು ನೀಡುವಂತೆ ವೈದ್ಯರು ಹೇಳಿದ್ದರಿಂದ, ತಕ್ಷಣವೇ ಸೂಕ್ತ ಚಿಕಿತ್ಸೆ ಸಿಗದ ಅನಾರೋಗ್ಯದಿಂದ ಬಳಲುತ್ತಿದ್ದ ನವಜಾತ ಶಿಶುವೊಂದು ಮೃತಪಟ್ಟಿದೆ.

Mumbai Mirror 12 Nov 2016, 6:43 pm
ಮುಂಬಯಿ: ಚಲಾವಣೆಯಲ್ಲಿರುವ ನೋಟುಗಳನ್ನು ನೀಡುವಂತೆ ವೈದ್ಯರು ಹೇಳಿದ್ದರಿಂದ, ತಕ್ಷಣವೇ ಸೂಕ್ತ ಚಿಕಿತ್ಸೆ ಸಿಗದ ಅನಾರೋಗ್ಯದಿಂದ ಬಳಲುತ್ತಿದ್ದ ನವಜಾತ ಶಿಶುವೊಂದು ಮೃತಪಟ್ಟಿದೆ.
Vijaya Karnataka Web doc says no to deposit in rs 500 notes baby dies awaiting help
500 ರೂ. ಪಡೆಯಲು ನಿರಾಕರಿಸಿದ ಆಸ್ಪತ್ರೆ, ನವಜಾತ ಶಿಶು ಸಾವು


ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣವನ್ನು ಮಹಾರಾಷ್ಟ್ರ ವೈದ್ಯ ಪರಿಷತ್‌ಗೆ ವರ್ಗಾಯಿಸಿದ್ದಾರೆ.

ಕೇಂದ್ರ ಸರಕಾರ ಏಕಾಏಕಿ 1000 ರೂ ಹಾಗೂ 500 ರೂ.ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರಿಂದ ಇಂಥ ಅವಘಡಕ್ಕೆ ಕಾರಣವಾಗಿದ್ದು, ನವಜಾತ ಗಂಡು ಶಿಶುವೊಂದು ಗೋವಂದಿಯಲ್ಲಿ ಮೃತಪಟ್ಟಿದೆ.

ಆಸ್ಪತ್ರೆ ಹಾಗೂ ಇತರೆ ಅಗತ್ಯ ಹಾಗೂ ನಿಗದಿತ ಸೇವಾ ಕ್ಷೇತ್ರಗಳಲ್ಲಿ ನಿಷೇಧಿತ 1000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ಸ್ವೀಕರಿಸುವಂತೆ ಸರಕಾರ ಸೂಚಿಸಿದ್ದರೂ, ಜೀವನ್ ಜ್ಯೋತ್ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನಲ್ಲಿ ಮಗುವಿಗೆ ಚಿಕಿತ್ಸೆ ನಿರಾಕರಿಸಲಾಗಿದೆ.

ಕಾರ್ಪೆಂಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಗುವಿನ ತಂದೆ ಜಗದೀಶ್ ಶರ್ಮಾ ಶಿವಾಜಿ ನಗರ ಠಾಣೆಯಲ್ಲಿ ಈ ಬಗ್ಗೆ ಶುಕ್ರವಾರ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪತ್ರವೊಂದನ್ನು ಮಹಾರಾಷ್ಟ್ರ ವೈದ್ಯ ಪರಿಷತ್‌ಗೆ ಕಳುಹಿಸಲು ಸೂಚಿಸಲಾಗಿದೆ.

ಶರ್ಮಾ ಪತ್ನಿ ಕಿರಣ್ ಏಪ್ರಿಲ್ 18ರಿಂದಲೂ ಜೀವನ್ ಜ್ಯೋತ್ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನ ಡಾ.ಶೀತರ್ ಕಾಮತ್ ಅವರಡಿಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ 1000 ರೂ ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದಾಗಿ ಘೋಷಿಸಿದ ಮಾರನೇ ದಿನವೂ ಕಿರಣ್ ವೈದ್ಯರಲ್ಲಿಗೆ ಬಂದು, ಸೋನೋಗ್ರಫಿ ಮಾಡಿಸಿಕೊಂಡಿದ್ದಾರೆ. ಆಗಲೂ ಡಿ.7ಕ್ಕೆ ಪ್ರಸವವಾಗಬಹುದೆಂದು ವೈದ್ಯರು ಹೇಳಿದ್ದರು.

ಆದರೆ, ನ.9ರಂದೇ ಕಿರಣ್‌ಗೆ ಪ್ರಸವ ವೇದನೆ ಆರಂಭವಾಗಿದ್ದು, ಸಂಬಂಧಿಗಳು ಹಾಗೂ ನೆರೆಹೊರೆಯವರ ಸಹಾಯದಿಂದ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ನಿಗದಿತ ದಿನಾಂಕಕ್ಕಿಂತಲೂ ಮುಂಚೆಯೇ ಜನಿಸಿದ ಮಗು ಕೇವಲ 1.6 ಕೆ.ಜಿ ತೂಕವಿತ್ತು. ತಾಯಿಗೂ ಅಪಾರ ರಕ್ತಸ್ರಾವವಾಗಿತ್ತು. ಈ ಕಾರಣ ಮತ್ತೆ ಡಾ.ಕಾಮತ್ ಬಳಿ ತಾಯಿ-ಮಗುವನ್ನು ಕರೆದುಕೊಂಡು ಹೋಗಲಾಗಿತ್ತು.

ಕಿರಣ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಆಕೆ ಪತಿ 500 ರೂ.ಮುಖಬೆಲೆಯ ನೋಟುಗಳನ್ನು ನೀಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಆ ದಿನ ಎಲ್ಲ ಎಟಿಎಂ ಹಾಗೂ ಬ್ಯಾಂಕ್‌ಗಳು ಮುಚ್ಚಿದ್ದು, ಬೇರೆ ಹಣವನ್ನು ಹೊಂದಿಸಿಕೊಡುವುದು ಈ ದಂಪತಿಗೆ ಕಷ್ಟವಾಯಿತು. ಶೀಘ್ರವೇ ಚಲಾವಣೆಯಲ್ಲಿರುವ ಹಣವನ್ನು ನೀಡುವುದಾಗಿ ಭರವಸೆ ನೀಡಿದರೂ, ವೈದ್ಯರು ತಾಯಿ-ಮಗುವನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.

ಮಗುವಿನ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಮತ್ತೊಂದು ಆಸ್ಪತ್ರೆಗೆ ತೆರಳಿದ್ದು, ಮಾರ್ಗ ಮಧ್ಯೆಯೇ ಮಗು ಕೊನೆಯುಸಿರೆಳೆದಿದೆ.

500 ರೂ. ನಿರಾಕರಿಸಿರುವುದನ್ನು ವೈದ್ಯರು ಒಪ್ಪಿಕೊಂಡಿದ್ದು, ವೈದ್ಯರು ಮಾತನಾಡಿರುವ ಆಡಿಯೋ 'ಮುಂಬಯಿ ಮಿರರ್'ನೊಂದಿಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ