ಆ್ಯಪ್ನಗರ

ಮಗುವಿನ ಹೊಟ್ಟೆಯಿಂದ ಸ್ಕ್ರ್ಯೂ ಹೊರ ತೆಗೆದ ವೈದ್ಯರು

ದು ವರ್ಷದ ಮಗುವಿನ ಹೊಟ್ಟೆ ಸೇರಿದ್ದ ಸ್ಕ್ರ್ಯೂ ಅನ್ನು ಹೊರ ತೆಗೆಯುವಲ್ಲಿ ತಾಲೆಗಾಂವ್‌ನ ಅಥರ್ವ ಆ್ಯಕ್ಸಿಡೆಂಟ್‌ ಆಸ್ಪತ್ರೆಯ ವೈದ್ಯರ ತಂಡವು ಯಶಸ್ವಿಯಾಗಿದೆ.

Vijaya Karnataka Web 27 Dec 2017, 12:46 pm
ಪುಣೆ: ಒಂದು ವರ್ಷದ ಮಗುವಿನ ಹೊಟ್ಟೆ ಸೇರಿದ್ದ ಸ್ಕ್ರ್ಯೂ ಅನ್ನು ಹೊರ ತೆಗೆಯುವಲ್ಲಿ ತಾಲೆಗಾಂವ್‌ನ ಅಥರ್ವ ಆ್ಯಕ್ಸಿಡೆಂಟ್‌ ಆಸ್ಪತ್ರೆಯ ವೈದ್ಯರ ತಂಡವು ಯಶಸ್ವಿಯಾಗಿದೆ.
Vijaya Karnataka Web docs remove screw from one yr olds abdomen
ಮಗುವಿನ ಹೊಟ್ಟೆಯಿಂದ ಸ್ಕ್ರ್ಯೂ ಹೊರ ತೆಗೆದ ವೈದ್ಯರು


ಮಗುವು ತೊಟ್ಟಿಲಿನಿಂದ ಬಿದ್ದಿದ್ದ ಒಂದೂವರೆ ಇಂಚಿನ ಸ್ಕ್ರ್ಯೂ ನುಂಗಿತ್ತು. ನುಂಗಿದ ಬಳಿಕ ಮಗು ನೋವಿನಿಂದ ಅಳಲಾರಂಭಿಸಿದೆ. ತಾಯಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಎಕ್ಸರೇ ಮಾಡಿ ನೋಡಿದಾಗ ಸ್ಕ್ರ್ಯೂ ಮಗುವಿನ ಹೊಟ್ಟೆಯಲ್ಲಿ ಪತ್ತೆಯಾಗಿದೆ.

ತಕ್ಷಣವೇ ಮಗುವಿಗೆ ಎಂಡೊಸ್ಕೊಪಿ ಸರ್ಜರಿ ಮಾಡಿದ ನಾಲ್ವರು ವೈದ್ಯರ ತಂಡವು ಸ್ಕ್ರ್ಯೂ ಹೊರ ತೆಗೆದಿದೆ. ಈ ವೇಳೆ ಮಗುವಿಗೆ ಯಾವುದೇ ತೊಂದರೆಯಾಗದೆ ಒಂದೇ ದಿನದಲ್ಲಿ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ