ಆ್ಯಪ್ನಗರ

ನೋಟು ನಿಷೇಧ, ಜಿಎಸ್‌ಟಿಯಿಂದ ದೇಶದ ಆರ್ಥಿಕತೆ ICUಗೆ: ರಾಹುಲ್ ಗಾಂಧಿ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಹಣಕಾಸು ಸಚಿವ 'ಡಾಕ್ಟರ್' ಅರುಣ್ ಜೇಟ್ಲಿ ವಿರುದ್ಧ ಹರಿಹಾಯ್ದಿದ್ದಾರೆ.

TNN 26 Oct 2017, 2:10 pm
ಹೊಸದಿಲ್ಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಮಾರ್ಮಿಕವಾಗಿ 'ಡಾಕ್ಟರ್' ಎಂದು ಸಂಬೋಧಿಸಿದ್ದು, ಈ ವೈದ್ಯರ ನೋಟು ನಿಷೇಧ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನಿರ್ಧಾರ ದೇಶದ ಆರ್ಥಿಕತೆಯನ್ನು 'ಐಸಿಯು'ನಲ್ಲಿರುವಂತೆ ಮಾಡಿದೆ ಎಂದು ಗುಡುಗಿದ್ದಾರೆ.
Vijaya Karnataka Web doctor jaitley note ban and gst put the economy in icu rahul gandhi
ನೋಟು ನಿಷೇಧ, ಜಿಎಸ್‌ಟಿಯಿಂದ ದೇಶದ ಆರ್ಥಿಕತೆ ICUಗೆ: ರಾಹುಲ್ ಗಾಂಧಿ


'ಡಾಕ್ಟರ್ ಜೇಟ್ಲಿ ಅವರೇ ನಿಮ್ಮ ಸರಕಾರದ ನೋಟು ನಿಷೇಧದ ನಿರ್ಧಾರ ಹಾಗೂ ಜಿಎಸ್‌ಟಿ ಜಾರಿಯಿಂದ ದೇಶದ ಆರ್ಥಿಕ ಸ್ಥಿತಿಯನ್ನು ಐಸಿಯುಗೆ ತಳ್ಳಿದೆ. ನೀವು ಯಾರಿಗಿಂತಲೂ ಕಡಿಮೆ ಇಲ್ಲ ಎಂದು ಹೇಳುತ್ತೀರಿ. ಆದರೆ, ನಿಮ್ಮ ಔಷಧದಲ್ಲಿ ಯಾವ ರೋಗವನ್ನೂ ಗುಣಪಡಿಸುವ ಶಕ್ತಿಯೇ ಇಲ್ಲ' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

डॉ जेटली, नोटबंदी और GST से अर्थव्यवस्था ICU में है। आप कहते हैं आप किसी से कम नहीं, मगर आपकी दवा में दम नहीं — Office of RG (@OfficeOfRG) October 26, 2017
'ಸರಕಾರ ತೆಗೆದುಕೊಂಡಿರುವ ಆರ್ಥಿಕ ಸುಧಾರಣೆಗಳು ದೇಶ ಆರ್ಥಿಕ ಪರಿಸ್ಥಿತಿ ಮೇಲೆ ಪ್ರಭಾವ ಬೀರಿದ್ದು, ಇದನ್ನು ಸುಸ್ಥಿತಿಗೆ ತರುವುದು ಬಹಳ ಕಷ್ಟ, ಹೆಚ್ಚಿನ ಸಮಯದ ಅಗತ್ಯವಿದೆ. ಐಸಿಯುನಲ್ಲಿರುವ ರೋಗಿಯಂತೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯಿದ್ದು, ಆಸ್ಪತ್ರೆಯ ವಿಶೇಷ ನಿಗಾ ಹಾಗೂ ಸಮಗ್ರ ಚಿಕಿತ್ಸೆಯಿಂದ ಮಾತ್ರ ದೇಶದ ಪರಿಸ್ಥಿತಿಯನ್ನು ಉತ್ತಮಗೊಳಿಸಬಹುದಾಗಿದೆ,' ಎಂದು ಟ್ಟೀಟ್ ಮಾಡಿದ್ದಾರೆ.

ಮೊನ್ನೆಯಷ್ಟೇ, ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಜರೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ