ಆ್ಯಪ್ನಗರ

ಏ.2ರಿಂದ ವೈದ್ಯರ ಮುಷ್ಕರ

ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ಕುರಿತು ಸಂಸತ್ತಿನ ಸ್ಥಾಯಿ ಸಮಿತಿ ನೀಡಿರುವ ಶಿಫಾರಸುಗಳನ್ನು ವಿರೋಧಿಸಿ ಭಾರತೀಯ ವೈದ್ಯ ಸಂಘಟನೆ (ಐಎಂಎ) ಏಪ್ರಿಲ್‌ 2ರಿಂದ ...

Vijaya Karnataka Web 25 Mar 2018, 11:47 pm
ಹೊಸದಿಲ್ಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ಕುರಿತು ಸಂಸತ್ತಿನ ಸ್ಥಾಯಿ ಸಮಿತಿ ನೀಡಿರುವ ಶಿಫಾರಸುಗಳನ್ನು ವಿರೋಧಿಸಿ ಭಾರತೀಯ ವೈದ್ಯ ಸಂಘಟನೆ (ಐಎಂಎ) ಏಪ್ರಿಲ್‌ 2ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಭಾನುವಾರ ನಿರ್ಧರಿಸಿದೆ.
Vijaya Karnataka Web doctor strike from april 2
ಏ.2ರಿಂದ ವೈದ್ಯರ ಮುಷ್ಕರ


ದಿಲ್ಲಿಯ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ನಡೆದ ಮಹಾಪಂಚಾಯತ್‌ ಕಾರ್ಯಕ್ರಮದಲ್ಲಿ ದೇಶಾದ್ಯಂತ 25 ಸಾವಿರ ವೈದ್ಯರು ಪಾಲ್ಗೊಂಡಿದ್ದರು. ಇಲ್ಲಿ ಮುಷ್ಕರದ ನಿರ್ಧಾರ ಕೈಗೊಳ್ಳಲಾಗಿದೆ.

ಎಂಬಿಬಿಎಸ್‌ ಪೂರೈಸುವ ವಿದ್ಯಾರ್ಥಿ ಮುಂದೆ ಭಾರತದಲ್ಲಿ ವೈದ್ಯ ವೃತ್ತಿ ಆರಂಭಿಸಲು ರಾಷ್ಟ್ರೀಯ ಪರವಾನಗಿ ಪರೀಕ್ಷೆ ತೆಗೆದುಕೊಳ್ಳುವುದನ್ನು ವಿಧೇಯಕದಲ್ಲಿ ಕಡ್ಡಾಯಗೊಳಿಸಲಾಗಿದೆ. ಇದನ್ನು ಎಂಬಿಬಿಎಸ್‌ ಅಂತಿಮ ವರ್ಷದ ಪರೀಕ್ಷೆಯೊಂದಿಗೆ ಸಂಯೋಜನೆಗೊಳಿಸುವುದು ಹಾಗೂ 'ಬ್ರಿಡ್ಜ್‌ ಕೋರ್ಸ್‌' ಅನ್ನು ಕಡ್ಡಾಯಗೊಳಿಸದಂತೆ ಸಂಸತ್ತಿನ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ