ಆ್ಯಪ್ನಗರ

14 ವರ್ಷದ ಬಾಲಕಿಯನ್ನು ಅತ್ಯಾಚಾರಿಗಳಿಂದ ಕಾಪಾಡಿದ ನಾಯಿ

ನಾಯಿ ಮತ್ತು ಮನುಷ್ಯನ ಸಂಬಂಧ ಎಂತಹದ್ದು ಎಂದು ವಿವರಿಸಬೇಕಿಲ್ಲ. ವಿಶ್ವಾಸಕ್ಕೆ ಅನ್ವರ್ಥವಾಗಿರುವ ನಾಯಿಗಳು ನಮಗಾಗಿ ಎಂತಹ ತ್ಯಾಗ ಮಾಡಲು, ಅಪಾಯವನ್ನು ಎದುರಿಸಲು ಹಿಂಜರಿಯುವುದಿಲ್ಲ. ಮಧ್ಯಪ್ರದೇಶದಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ.

Times Now 22 Aug 2018, 2:16 pm
ಸಾಗರ: ನಾಯಿ ಮತ್ತು ಮನುಷ್ಯನ ಸಂಬಂಧ ಎಂತಹದ್ದು ಎಂದು ವಿವರಿಸಬೇಕಿಲ್ಲ. ವಿಶ್ವಾಸಕ್ಕೆ ಅನ್ವರ್ಥವಾಗಿರುವ ನಾಯಿಗಳು ನಮಗಾಗಿ ಎಂತಹ ತ್ಯಾಗ ಮಾಡಲು, ಅಪಾಯವನ್ನು ಎದುರಿಸಲು ಹಿಂಜರಿಯುವುದಿಲ್ಲ. ಮಧ್ಯಪ್ರದೇಶದಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ.
Vijaya Karnataka Web Kidnap


ಸಾಗರ ಜಿಲ್ಲೆಯ ಕರೀಲಾ ಗ್ರಾಮದಲ್ಲಿ 14 ವರ್ಷದ ಬಾಲಕಿಯೋರ್ವಳು ರಾತ್ರಿಯ ಹೊತ್ತು ತನ್ನ ಅಜ್ಜಿಗಾಗಿ ಕೆಲ ಸಾಮಾನುಗಳನ್ನು ತರಲು ಮನೆಯಿಂದ ಹೊರಗೆ ಹೋಗಿದ್ದಳು. ಆ ಸಂದರ್ಭದಲ್ಲಿ ಅವಳನ್ನು ಹಿಂಬಾಲಿಸಿದ ರೇಶು ಅಹಿರ್ವಾರ್ ಮತ್ತು ಪುನೀತ್ ಎಂಬುವವರು ಆಕೆಯನ್ನು ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅಸಹಾಯಕ ಬಾಲಕಿ ಸಹಾಯಕ್ಕೆ ಕೂಗಿಕೊಂಡಿದ್ದಾಳೆ. ನಿರ್ಜನ ಪ್ರದೇಶದಲ್ಲಿ ಆಕೆಯ ಆರ್ತನಾದ ಮನುಷ್ಯರಿಗೆ ಕೇಳಿಸಲಿಲ್ಲ. ಆದರೆ ಅವಳು ಪ್ರೀತಿಯಿಂದ ಸಾಕಿದ ನಾಯಿಗೆ ಕೇಳಿಸಿತು. ತಕ್ಷಣ ಆಕೆಯ ಸಹಾಯಕ್ಕೆ ಓಡಿ ಬಂದ ನಾಯಿ, ದುಷ್ಕರ್ಮಿಗಳ ಮೇಲೆ ದಾಳಿ ಮಾಡಿದೆ.

ನಾಯಿ ದಾಳಿಗೆ ಒಬ್ಬನಿಗೆ ಗಾಯವಾಗಿದ್ದು, ಬೊಗಳುವಿಕೆಯನ್ನು ಕೇಳಿ ಸ್ಥಳೀಯರು ಸಹ ಓಡಿ ಬಂದಿದ್ದಾರೆ. ತಕ್ಷಣ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ