ಆ್ಯಪ್ನಗರ

ಸುಗಮ ಉದ್ದಿಮೆಯಿಂದ ಜೀವನ ಸುಗಮ: ಮೋದಿ

ಉದ್ಯಮ ಸ್ನೇಹಿ ವಾತಾವರಣದಿಂದ ದೇಶದಲ್ಲಿ ಜೀವನವೂ ಸುಗಮವಾಗುತ್ತದೆ ಎಂದು ಪ್ರತಿಪಾದಿಸಿರುವ ಪ್ರಧಾನಿ ಮೋದಿ

Vijaya Karnataka Web 5 Nov 2017, 12:10 am

ಹೊಸದಿಲ್ಲಿ: ಉದ್ಯಮ ಸ್ನೇಹಿ ವಾತಾವರಣದಿಂದ ದೇಶದಲ್ಲಿ ಜೀವನವೂ ಸುಗಮವಾಗುತ್ತದೆ ಎಂದು ಪ್ರತಿಪಾದಿಸಿರುವ ಪ್ರಧಾನಿ ಮೋದಿ, ವಿಶ್ವಬ್ಯಾಂಕ್‌ನ 'ಈಸಿ ಆಫ್‌ ಡೂಯಿಂಗ್‌ ಬ್ಯುಸಿನೆಸ್‌' ಸೂಚ್ಯಂಕದಲ್ಲಿ ಭಾರತದ ಸ್ಥಾನ 142ರಿಂದ 100ಕ್ಕೆ ಏರಿಕೆಯಾಗಿದ್ದರೂ ಅದು ಕಾಂಗ್ರೆಸ್‌ನವರಿಗೆ ಅರ್ಥವಾಗುತ್ತಿಲ್ಲ. ಎಲ್ಲವನ್ನೂ ಟೀಕಿಸುವುದೇ ಅವರ ಚಾಳಿಯಾಗಿದೆ,'' ಎಂದು ಬೇಸರ ವ್ಯಕ್ತಪಡಿಸಿದರು.

Vijaya Karnataka Web doing business in india is easy modi
ಸುಗಮ ಉದ್ದಿಮೆಯಿಂದ ಜೀವನ ಸುಗಮ: ಮೋದಿ


'ಇಂಡಿಯಾಸ್‌ ಬಿಸಿನೆಸ್‌ ರಿಫಾರ್ಮ್ಸ್‌ ಸಮ್ಮೇಳನ'ದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ, ವಿಶ್ವ ಬ್ಯಾಂಕ್‌ನ ಇತ್ತೀಚಿನ ವರದಿಯಲ್ಲಿ ಭಾರತದ ಆರ್ಥಿಕತೆ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. 'ಈಸಿ ಆಫ್‌ ಡೂಯಿಂಗ್‌ ಬ್ಯುಸಿನೆಸ್‌' ಸೂಚ್ಯಂಕದಲ್ಲಿ ಭಾರತದ ರಾರ‍ಯಂಕಿಂಗ್‌ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ ಪ್ರಬಲಗೊಂಡಿದ್ದು, ಕೌಶಲ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನ ಆಧಾರಿತ ಚಟುವಟಿಕೆಗಳು ಇನ್ನಷ್ಟು ವೇಗ ಪಡೆಯಲಿವೆ ಎಂದರು.

ವಿದೇಶಿ ಹೂಡಿಕೆ ಹೆಚ್ಚಳವಾಗಲಿದೆ. ಭಾರತ ಯುವ ಜನತೆಯ ದೇಶವಾಗಿದ್ದು, ಉದ್ಯೋಗ ಸೃಷ್ಟಿಯಲ್ಲಿ ಈ ಸೂಚ್ಯಂಕ ಮಹತ್ವದ ಪಾತ್ರ ವಹಿಸಲಿದೆ. ಆದರೆ ಒಂದು ಕಾಲಕ್ಕೆ ವಿಶ್ವಬ್ಯಾಂಕ್‌ ಜತೆಗೂಡಿ ಕೆಲಸ ಮಾಡಿದವರು (ಯುಪಿಎ -1, ಯುಪಿಎ -2 ಸರಕಾರದಲ್ಲಿದ್ದವರು) ಇಂದು ಅದರ ವರದಿಯ ವಿಶ್ವಾಸರ್ಹತೆಯನ್ನು ಶಂಕಿಸುತ್ತಿರುವುದು ಹಾಸ್ಯಾಸ್ಪದ,'' ಎಂದು ಹೇಳಿದರು. ಇದೇ ವೇಳೆ ಅವರು, ಜಿಎಸ್‌ಟಿ ಸೇರಿದಂತೆ ಪ್ರಮುಖ ಆರ್ಥಿಕ ಸುಧಾರಣಾ ಕ್ರಮಗಳನ್ನು ಸಮರ್ಥಿಸಿಕೊಂಡರು.


Doing Business in India is easy: Modi

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ