ಆ್ಯಪ್ನಗರ

ಪ್ರಾದೇಶಿಕ ಸಮಗ್ರತೆ ಕಾಪಾಡುವುದೇ ನಮ್ಮ ಗುರಿ: ನಿರ್ಮಲಾ ಸೀತಾರಾಮನ್

ಚೀನಾ ರಾಯಭಾರಿ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ

Vijaya Karnataka Web 25 Mar 2018, 5:03 pm
ಹೊಸದಿಲ್ಲಿ: ಡೋಕ್ಲಾಮ್‌ ವಿವಾದ ನಂತರ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳುವುದೇ ಭಾರತದ ಸ್ಪಷ್ಟ ಗುರಿ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.
Vijaya Karnataka Web doklam india will maintain territorial integrity asserts defence minister nirmala sitharaman
ಪ್ರಾದೇಶಿಕ ಸಮಗ್ರತೆ ಕಾಪಾಡುವುದೇ ನಮ್ಮ ಗುರಿ: ನಿರ್ಮಲಾ ಸೀತಾರಾಮನ್


ಡೆಹ್ರಾಡೂನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಡೋಕ್ಲಾಮ್‌ನಲ್ಲಿ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ ಎಂದು ತಿಳಿಸಿದರು.

ಡೋಕ್ಲಾಮ್‌ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಒತ್ತು ನೀಡಲಾಗುವುದು ಎಂದು ಚೀನಾ ರಾಯಭಾರಿ ಹೇಳಿಕೆ ನೀಡಿದ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ-ಚೀನಾ ನಡುವಿನ ವಿವಾದಕ್ಕೆ ಕಾರಣವಾಗಿದ್ದ ಡೋಕ್ಲಾಮ್‌ ಪ್ರದೇಶದಲ್ಲಿ ಎಂಥ ಪರಿಸ್ಥಿತಿಯನ್ನೂ ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಕೆಲವು ಮೂಲಗಳ ಪ್ರಕಾರ ಡೋಕ್ಲಾ ಪ್ರದೇಶದ ಬಳಿ 1.3 ಕಿಲೋ ಮೀಟರ್‌ ರಸ್ತೆ ನಿರ್ಮಿಸಲು ಚೀನಾದ ಪಿಎಲ್‌ಎ ಮುಂದಾಗಿದೆ. ಜತೆಗೆ 4 ಕಿಲೋ ಮೀಟರ್‌ ಟ್ರೆಂಚ್‌ಗಳ ನಿರ್ಮಾಣಕ್ಕೂ ತಯಾರಿ ನಡೆಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ