ಆ್ಯಪ್ನಗರ

ರಸ್ತೆ ನಿರ್ಮಾಣ ಕೈ ಬಿಟ್ಟ ಚೀನಾ: ಡೋಕ್ಲಾಂ ಬಿಕ್ಕಟ್ಟು ಅಂತ್ಯ

ಡೋಕ್ಲಾಂ ಬಿಕ್ಕಟ್ಟು ಕೊನೆಗೂ ಪರಿಹಾರವಾಗುವ ಲಕ್ಷಣ ಕಾಣಿಸಿದೆ. ಡೋಕ್ಲಾಂನಲ್ಲಿ ಮುಖಾಮುಖಿ ಸ್ಥಳದಿಂದ ಭಾರತ ಮತ್ತು ಚೀನಾ ತಮ್ಮ ಯೋಧರನ್ನು ವಾಪಸ್‌ ಕರೆಸಿಕೊಳ್ಳಲಿವೆ ಎಂದು ವಿದೇಶಾಂಗ ಸಚಿವಾಲಯ ಸುಳಿವು ನೀಡಿದೆ.

TNN 28 Aug 2017, 6:51 pm
ಹೊಸದಿಲ್ಲಿ: ಡೋಕ್ಲಾಂ ಬಿಕ್ಕಟ್ಟು ಕೊನೆಗೂ ಅಂತ್ಯ ಕಂಡಿದೆ. ವಿವಾದಿತ ಸ್ಥಳದಲ್ಲಿ ರಸ್ತೆ ನಿರ್ಮಾಣ ನಿರ್ಧಾರದಿಂದ ಹಿಂದೆ ಸರಿದಿದೆ. ಇದರಿಂದ ಉಭಯ ದೇಶಗಳ ನಡುವಿನ ಬಿಕಟ್ಟು ಕೊನೆಗೊಂಡಿದೆ.
Vijaya Karnataka Web doklam standoff end in sight india china begin to pull troops out from site says mea
ರಸ್ತೆ ನಿರ್ಮಾಣ ಕೈ ಬಿಟ್ಟ ಚೀನಾ: ಡೋಕ್ಲಾಂ ಬಿಕ್ಕಟ್ಟು ಅಂತ್ಯ


ಡೋಕ್ಲಾಂನಲ್ಲಿ ಮುಖಾಮುಖಿ ಸ್ಥಳದಿಂದ ಭಾರತ ಮತ್ತು ಚೀನಾ ತಮ್ಮ ಯೋಧರನ್ನು ವಾಪಸ್‌ ಕರೆಸಿಕೊಂಡಿವೆ.

'ಡೋಕ್ಲಾಂನಲ್ಲಿ ಎದುರು ಬದುರಾಗಿ ನಿಂತಿರುವ ಯೋಧರನ್ನು ಹಿಂದೆ ಕರೆಸಿಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಗಡಿ ಬಿಕ್ಕಟ್ಟು ಶಮನಗೊಳ್ಳುವ ಕಾಲ ಸನ್ನಿಹಿತವಾಗಿದೆ...' ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.

ಈ ಪ್ರಕ್ರಿಯೆಯನ್ನು'ಡೋಕ್ಲಾಂ ಬಿಡುಗಡೆ ತಿಳುವಳಿಕೆ' ಎಂದು ವಿದೇಶಾಂಗ ಸಚಿವಾಲಯ ಕರೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರವೇ ಚೀನಾಗೆ ಭೇಟಿ ನೀಡಲಿದ್ದು, ಅದಕ್ಕೆ ಮುನ್ನವೇ ಬಿಕ್ಕಟ್ಟು ಶಮನ ಪ್ರಯತ್ನ ಎರಡೂ ಕಡೆಯಿಂದ ಆರಂಭವಾಗಿದೆ.

ಜೂನ್‌ 16ರಂದು ಭೂತಾನ್‌ಗೆ ಸೇರಿದ ಡೋಕ್ಲಾಂ ತ್ರಿಸಂಧಿ ಸ್ಥಳದಲ್ಲಿ ಚೀನಾ ಗಡಿ ಅತಿಕ್ರಮಣ ಆರಂಭಿಸಿದಾಗಿನಿಂದಾಗಲೂ ಭಾರತ ಮತ್ತು ಚೀನಾ ರಾಜತಾಂತ್ರಿಕ ಮಾರ್ಗಗಳನ್ನುತೆರೆದಿಟ್ಟಿವೆ. ಚೀನಾದ ಪ್ರಚೋದನಕಾರಿ, ಯುದ್ಧೋನ್ಮಾದ ಹೇಳಿಕೆಗಳ ನಡುವೆಯೂ ರಾಜತಾಂತ್ರಿಕ ಮಾರ್ಗಗಳನ್ನು ಎರಡೂ ದೇಶಗಳು ಮುಕ್ತವಾಗಿಯೇ ಇಟ್ಟಿದ್ದವು. ಈ ಅವಧಿಯಲ್ಲಿ ಹೊಸದಿಲ್ಲಿ ತನ್ನ ನಿಲುವುಗಳನ್ನು ಬೀಜಿಂಗ್‌ಗೆ ಸ್ಪಷ್ಟಪಡಿಸಿತ್ತು.

'ಇತ್ತೀಚಿನ ವಾರಗಳಲ್ಲಿ ಡೋಕ್ಲಾಂಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ರಾಜತಾಂತ್ರಿಕ ಪ್ರಯತ್ನಗಳನ್ನು ಹೆಚ್ಚಿಸಿದ್ದವು. ಈ ಸಂವಹನಗಳ ಅವಧಿಯಲ್ಲಿ, ನಾವು ನಮ್ಮ ನಿಲುವು, ಆತಂಕ ಹಾಗೂ ಆಸಕ್ತಿಗಳನ್ನು ಸ್ಪಷ್ಟವಾಗಿ ಅಭಿವ್ಯಕ್ತಿಸಲು ಸಾಧ್ಯವಾಯಿತು' ಎಮದು ಸಚಿವಾಲಯ ತಿಳಿಸಿದೆ.

Doklam standoff end in sight: India, China begin to pull troops out from site, says MEA

NEW DELHI: There may be an end in sight to the Doklam standoff indicated the external affairs ministry (MEA) on Monday as it announced that both Indian and Chinese troops are slowly being pulled out from the face-off site.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ