ಆ್ಯಪ್ನಗರ

‘ಬೇಡಿಕೆ ಈಡೇರೋವರೆಗೆ ಜಿಎಸ್‌ಟಿ ಪಾವತಿಸ್ಬೇಡಿ’; ವ್ಯಾಪಾರಿಗಳಿಗೆ ನರೇಂದ್ರ ಮೋದಿ ಸಹೋದರ ಕರೆ

ಕೊರೊನಾ ಬಿಕ್ಕಟ್ಟು ಹಾಗೂ ಲಾಕ್‌ಡೌನ್‌ನಿಂದಾಗಿ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ನಮ್ಮ ಬೇಡಿಕೆಗಳನ್ನು ಅವರು ಈಡೇರಿಸಲೇಬೇಕು. ನಾವು ಪ್ರಜಾಪ್ರಭುತ್ವದಲ್ಲಿದ್ದೇವೆಯೇ ಹೊರತು, ಗುಲಾಮಗಿರಿ ಪದ್ಧತಿಯಲ್ಲಿ ಇಲ್ಲ. ನ್ಯಾಯ ಸಿಗುವವರೆಗೆ ವಿರಮಿಸುವುದು ಬೇಡ. ಮೊದಲು, ಬೇಡಿಕೆ ಈಡೇರಿಸದಿದ್ದರೆ ನಾವು ಜಿಎಸ್‌ಟಿ ಪಾವತಿಸುವುದಿಲ್ಲ ಎಂಬುದಾಗಿ ಪ್ರಧಾನಿ ಮೋದಿ ಮತ್ತು ಸಿಎಂ ಉದ್ಧವ್‌ ಠಾಕ್ರೆಗೆ ಪತ್ರ ಬರೆಯಿರಿ ಎಂದು ಪಹ್ಲಾದ್ ಮೋದಿ ಹೇಳಿದ್ದಾರೆ.

Vijaya Karnataka 1 Aug 2021, 7:02 am
ಮುಂಬಯಿ: ಬೇಡಿಕೆ ಈಡೇರಿಸದಿದ್ದರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ, ಅಖಿಲ ಭಾರತ ನ್ಯಾಯಬೆಲೆ ಅಂಗಡಿ ಅಸೋಸಿಯೇಷನ್‌ ಉಪಾಧ್ಯಕ್ಷ ಪ್ರಹ್ಲಾದ್‌ ಮೋದಿ ಅವರೇ ವ್ಯಾಪಾರಿಗಳಿಗೆ ಕರೆ ನೀಡಿದ್ದಾರೆ.
Vijaya Karnataka Web PM-MODI-Brother-Prahlad-Modi-GST


ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ್‌ ಮೋದಿ ಅವರು, ನರೇಂದ್ರ ಮೋದಿ ಅವರೇ ಇರಲಿ, ಯಾರೇ ಇರಲಿ. ಅವರು ನಮ್ಮ ಮಾತು ಕೇಳಬೇಕು, ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮನೆಬಾಗಿಲಿಗೆ ಬರಬೇಕು. ಆ ರೀತಿ ಹೋರಾಟ ಮಾಡಿ. ಬೇಡಿಕೆ ಈಡೇರಿಸುವವರೆಗೆ ಜಿಎಸ್‌ಟಿ ಪಾವತಿಸದಿರಿ ಎಂದು ಹೇಳಿದ್ದಾರೆ.

ಕೊರೊನಾ ಬಿಕ್ಕಟ್ಟು ಹಾಗೂ ಲಾಕ್‌ಡೌನ್‌ನಿಂದಾಗಿ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ನಮ್ಮ ಬೇಡಿಕೆಗಳನ್ನು ಅವರು ಈಡೇರಿಸಲೇಬೇಕು. ನಾವು ಪ್ರಜಾಪ್ರಭುತ್ವದಲ್ಲಿದ್ದೇವೆಯೇ ಹೊರತು, ಗುಲಾಮಗಿರಿ ಪದ್ಧತಿಯಲ್ಲಿ ಇಲ್ಲ. ನ್ಯಾಯ ಸಿಗುವವರೆಗೆ ವಿರಮಿಸುವುದು ಬೇಡ. ಮೊದಲು, ಬೇಡಿಕೆ ಈಡೇರಿಸದಿದ್ದರೆ ನಾವು ಜಿಎಸ್‌ಟಿ ಪಾವತಿಸುವುದಿಲ್ಲ ಎಂಬುದಾಗಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಪತ್ರ ಬರೆಯಿರಿ. ಸಕಾರಾತ್ಮಕ ಸ್ಪಂದನೆ ದೊರೆಯದಿದ್ದರೆ ಪ್ರತಿಭಟನೆ ತೀವ್ರಗೊಳಿಸಿ. ಆದರೆ ನಿಮ್ಮ ಹೋರಾಟ ಸರಿಯಾದ ಮಾರ್ಗದಲ್ಲಿರಲಿ ಎಂದು ಹೇಳಿದ್ದಾರೆ.
ಮುಂದಿನ ಕಾರ್ತಿಕ ಮಾಸದವರೆಗೆ ಜಲಗಂಡಾಂತರ ಇದೆ; ಕೋಡಿಮಠ ಶ್ರೀ ಎಚ್ಚರಿಕೆ
ಇನ್ನು ನಾನು ಸುಮಾರು 6.5 ಲಕ್ಷ ನ್ಯಾಯ ಬೆಲೆ ಅಂಗಡಿಗಳ ಪ್ರತಿನಿಧಿಯಾಗಿದ್ದೇನೆ. ಸರಿಯಾದ ಮಾರ್ಗದಲ್ಲಿ ಪ್ರತಿಭಟನೆ ನಡೆಸಿ. ಆಗ ಸರಕಾರಗಳು ನಮ್ಮ ಮಾತು ಕೇಳಲೇಬೇಕು. ಒಂದು ವೇಳೆ ಕೇಳದಿದ್ದರೆ ಜಿಎಸ್‌ಟಿ ಪಾವತಿ ಮಾಡದಿರಿ. ಆಗ ನೋಡಿ ಸರಕಾರ ನಮ್ಮ ಬೇಡಿಕೆಗಳಿಗೆ ಕಿವಿಯಾಗುತ್ತದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ