ಆ್ಯಪ್ನಗರ

ಪೈರಸಿ ಸಿನಿಮಾ ಡೌನ್‌ಲೋಡ್ ಮಾಡಿದರೆ 10 ಲಕ್ಷ ರೂ. ದಂಡ, 3 ವರ್ಷ ಜೈಲು!

10 ಲಕ್ಷ ರೂ. ದಂಡದ ಜತೆಗೆ 3 ವರ್ಷ ಜೈಲು ಶಿಕ್ಷೆ ನೀಡುವ ಕುರಿತು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಆನ್‌ಲೈನ್ ಪೈರಸಿ ತಡೆಗಟ್ಟಲು ಸರಕಾರ ಕ್ರಮಕ್ಕೆ ಮುಂದಾಗಿದ್ದು, ತಿದ್ದುಪಡಿಗೆ ಅನುಮೋದನೆ ದೊರೆಯಲಿದೆ.

Vijaya Karnataka Web 7 Feb 2019, 3:15 pm
ಹೊಸದಿಲ್ಲಿ: ಸಿನಿಮಾ ಮತ್ತು ಮನರಂಜನೆ ಕ್ಷೇತ್ರಕ್ಕೆ ಪೈರಸಿ ದೊಡ್ಡ ಕಂಟಕವಾಗಿದೆ. ಹೊಸ ಸಿನಿಮಾ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಆನ್‌ಲೈನ್‌ನ ವಿವಿಧ ಪೈರಸಿ ತಾಣಗಳಲ್ಲಿ ಸಿನಿಮಾ ಪ್ರತಿ ಲಭ್ಯವಾಗುತ್ತದೆ. ಇದರಿಂದ ಉದ್ಯಮಕ್ಕೆ ದೊಡ್ಡ ಮಟ್ಟಿನ ಹೊಡೆತವಿದೆ.
Vijaya Karnataka Web pirated_movies_1549521189_725x725


ಸಿನಿಮಾ ಬಿಡುಗಡೆಯಾದ ಕೆಲಹೊತ್ತಿನಲ್ಲೇ ಜನರು ಪೈರಸಿ ಮೂಲಕ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಆದರೆ ಪೈರಸಿ ಕಾಪಿಗಳನ್ನು ಡೌನ್‌ಲೋಡ್ ಮಾಡುವುದು ಅಪರಾಧ ಎನ್ನುವುದು ಜನರಿಗೆ ಗೊತ್ತಿದ್ದರೂ, ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಹೀಗಾಗಿ ಸಿನಿಮಾಟೋಗ್ರಫಿ ಕಾಯ್ದೆ, 1952ಕ್ಕೆ ತಿದ್ದುಪಡಿ ತಂದು ಅದರ ಮೂಲಕ ಪೈರಸಿ ಸಿನಿಮಾ ಡೌನ್‌ಲೋಡ್ ಅನ್ನು ಅಪರಾಧ ಎಂದು, ಅದಕ್ಕೆ 10 ಲಕ್ಷ ರೂ. ದಂಡದ ಜತೆಗೆ 3 ವರ್ಷ ಜೈಲು ಶಿಕ್ಷೆ ನೀಡುವ ಕುರಿತು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಆನ್‌ಲೈನ್ ಪೈರಸಿ ತಡೆಗಟ್ಟಲು ಸರಕಾರ ಕ್ರಮಕ್ಕೆ ಮುಂದಾಗಿದ್ದು, ತಿದ್ದುಪಡಿಗೆ ಅನುಮೋದನೆ ದೊರೆಯಲಿದೆ.

ಪ್ರಸ್ತಾವಿತ ತಿದ್ದುಪಡಿ ಪ್ರಕಾರ, ಯಾವುದೇ ರೀತಿಯ ಅನುಮತಿಯಿಲ್ಲದೆ ಕಾಪಿರೈಟ್ ಮತ್ತು ಪೈರಸಿ ಕಾಯ್ದೆ ತಿದ್ದುಪಡಿ ಪ್ರಕಾರ ನಡೆಸಿದ ಅಪರಾಧಕ್ಕೆ ಸೂಕ್ತ ಶಿಕ್ಷೆ ದೊರೆಯಲಿದೆ.

ತಂತ್ರಜ್ಞಾನ ದುರುಪಯೋಗ ಮಾಡಿಕೊಂಡು, ಅದರ ಮೂಲಕ ಉದ್ಯಮಕ್ಕೆ ನಷ್ಟಉಂಟುಮಾಡುವವರಿಗೆ ತಕ್ಕ ಶಾಸ್ತಿಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ