ಆ್ಯಪ್ನಗರ

ಚೀನಾದ ಮೇಲೆ ಕೇಸ್‌ ಹಾಕಿ, 22 ಬಿಲಿಯನ್‌ ಡಾಲರ್‌ ಪರಿಹಾರ ಕೇಳಿ: ಕೇಂದ್ರಕ್ಕೆ ಶಾಸಕನ ಪತ್ರ

ಕೊರೊನಾ ವೈರಸ್‌ ಜಗತ್ತಿನಾದ್ಯಂತ ಹರಡಲು ಚೀನಾದ ನಿರ್ಲಕ್ಷವೇ ಕಾರಣ ಎಂಬುದು ಎಲ್ಲ ದೇಶಗಳ ವಾದ. ಇದರ ಜೊತೆ ಚೀನಾ ಇತರೆ ರಾಷ್ಟ್ರಗಳ ಮೇಲೆ ಕೊರೊನಾದಿಂದ ಜೈವಿಕ ಯುದ್ಧ ಸಾರಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆ ಅರುಣಾಚಲ ಪ್ರದೇಶ ಶಾಸಕರೊಬ್ಬರು ಚೀನಾದ ಮೇಲೆ ಕೇಸ್‌ ದಾಖಲಿಸಿ ಪರಿಹಾರ ವಸೂಲಿ ಮಾಡಿ ಎಂದು ಕೇಂದ್ರಕ್ಕೆ ಆಗ್ರಹಿಸಿದ್ದಾರೆ.

Agencies 31 Mar 2020, 9:32 pm
Vijaya Karnataka Web CHINA CORONAVIRUS
ಹೊಸದಿಲ್ಲಿ: ಕೊರೊನಾ ವೈರಸ್‌ ಮೊದಲು ಹುಟ್ಡಿದ ಚೀನಾದ ಮೇಲೆ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಜೈವಿಕ ಯುದ್ಧ ಪ್ರಕರಣವನ್ನು ದಾಖಲಿಸಿ ಪರಿಹಾರಕ್ಕಾಗಿ ಆಘ್ರಹಿಸಿ ಎಂದು ಅರುಣಾಚಲ ಪ್ರದೇಶದ ಶಾಸಕ ನಿನೋಂಗ್‌ ಎರಿಂಗ್‌ ಕೇಂದ್ರ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ಗೆ ಪತ್ರ ಬರೆದಿದ್ದಾರೆ.

ಚೀನಾದಿಂದ 22 ಬಿಲಿಯನ್‌ ಶತಕೋಟಿ ಡಾಲರ್‌ ಪರಿಹಾರಕ್ಕಾಗಿ ಚೀನಾವನ್ನು ಆಗ್ರಹಿಸುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ. ಕೆಲವೊಂದು ಮಾಧ್ಯಮಗಳ ಪ್ರಕಾರ ಚೀನಾ ವುಹಾನ್‌ನ ಕೊರೊನಾ ವೈರಸ್‌ ಮೂಲಕ ಜೈವಿಕ ಯುದ್ಧವನ್ನು ಸಂಘಟಿಸಿದೆ ಎಂದು ಹೇಳಿವೆ. ಇದರಿಂದ ವಿಶ್ವದ ಶಾಂತಿ ಮತ್ತು ಭದ್ರತೆಗೆ ಭಾರಿ ಅಪಾಯ ಎದುರಾಗಿದೆ ಎಂದು ಶಾಸಕ ಹೇಳಿದ್ದಾರೆ.


ಚೀನಾದ ಮೂರ್ಖತನದಿಂದ ಇಡೀ ವಿಶ್ವ ಈಗ ಲಾಕ್‌ಡೌನ್‌ ಎದುರಿಸುತ್ತಿದ್ದು, ಭಾರತ ಸೇರಿ ಜಗತ್ತು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಅದಕ್ಕಾಗಿ ಚೀನಾದ ಮೇಲೆ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಜೈವಿಕ ಯುದ್ಧದ ಪ್ರಕರಣ ದಾಖಲಿಸಿ ಪರಿಹಾರ ಕೇಳುವಂತೆ ಒತ್ತಾಯಿಸಿದ್ದಾರೆ.

ಲಾಕ್‌ಡೌನ್‌ನಿಂದ ಮೋದಿ ಏನು ಸಾಧಿಸಲ್ಲ, ನಾನು ದೇಶ ಬಂದ್‌ ಮಾಡಲ್ಲ: ಪಾಕ್‌ ಪ್ರಧಾನಿ ಮೊಂಡುತನ

ಕೊರೊನಾ ವೈರಸ್‌ನಿಂದ ಹೊಡೆತ ಅನುಭವಿಸಿರುವ ಇತರ ರಾಷ್ಟ್ರಗಳನ್ನು ಒಗ್ಗೂಡಿಸಿ ಚೀನಾದ ಮೇಲೆ ಅಂತರಾಷ್ಟ್ರೀಯ ತನಿಖೆಗೆ ಆಗ್ರಹಿಸಬೇಕು. ಇದರಿಂದ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ನಡೆಸುವುದನ್ನು ತಪ್ಪಿಸಬಹುದು ಎಂದು ಶಾಸಕ ನಿನೊಂಗ್‌ ಎರಿಂಗ್‌ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 227 ಪಾಸಿಟಿವ್‌ ಕೇಸ್‌, ಸೋಂಕಿತರ ಸಂಖ್ತೆ 1251ಕ್ಕೆ ಏರಿಕೆ

ಇನ್ನು, ಭಾರತದ ವಿದೇಶಾಂಗ ನೀತಿ ಪಂಚಶೀಲ ತತ್ವಗಳನ್ನು ಅವಲಂಭಿಸಿದೆ. ಆದ್ದರಿಂದ ಅಂತರಾಷ್ಟ್ರೀಯ ವೇದಿಕೆಗಳ ಮುಂದೆ ಮೇಲಿನ ಸಮಸ್ಯೆಗಳನ್ನು ತೆಗೆದುಕೊಂಡು ಹೋಗಿ ಪರಿಹಾರ ಪಡೆಯಿರಿ. ಇದರಿಂದ ಜಾಗತಿಕ ಮತ್ತು ಪ್ರಾದೇಶಿಕ ಸುರಕ್ಷತೆಯನ್ನು ಮರಳಿ ಪಡೆಯಬಹುದು. ಹಾಗೂ ಅರುಣಾಚಲ ಪ್ರದೇಶದ ಜನತೆಗೂ ಸುರಕ್ಷತೆಯನ್ನು ನೀಡಿದಂತಾಗುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.

ಕೊರೊನಾ ವೈರಸ್‌: ಚೀನಾ ಹಿಂದಿಕ್ಕಿದ ಅಮೆರಿಕಾಗೆ ಚೀನಾದ 'ಸಂಖ್ಯೆ' ಬಗ್ಗೆಯೇ ಡೌಟು..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ