ಆ್ಯಪ್ನಗರ

ಗಾಯಾಳು ಯೋಧರ ಪ್ರಾಣ ರಕ್ಷಣೆಗೆ ಡಿಆರ್‌ಡಿಒ ‘ಸಂಜೀವಿನಿ

ರಕ್ತಸ್ರಾವವನ್ನು ತಡೆಯುವ ಹಲವು ಪ್ರಥಮ ಚಿಕಿತ್ಸಾ ಔಷಧಗಳು ಮತ್ತು ಸಲಕರಣೆಗಳನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ.

Vijaya Karnataka 12 Mar 2019, 5:00 am
ಹೊಸದಿಲ್ಲಿ: ಪುಲ್ವಾಮಾ ದಾಳಿಯಂತಹ ಉಗ್ರ ಕೃತ್ಯಗಳು ಮತ್ತು ಯುದ್ಧದಂತಹ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಳ್ಳುವ ಯೋಧರ ಪ್ರಾಣ ಉಳಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಶಿಷ್ಟ ಔಷಧಗಳನ್ನು ಸಿದ್ಧಪಡಿಸಿದೆ.
Vijaya Karnataka Web download


ಸ್ಫೋಟದಂತಹ ಸಂದರ್ಭದಲ್ಲಿ ರಕ್ತಸ್ರಾವದಿಂದಾಗಿಯೇ ಹೆಚ್ಚು ಮಂದಿ ಯೋಧರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕೊನೆಯುಸಿರೆಳೆಯುತ್ತಾರೆ. ಆಸ್ಪತ್ರೆಗೆ ಸಾಗಿಸಿದರೂ ಅಧಿಕ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಹೀಗಾಗಿ ರಕ್ತಸ್ರಾವವನ್ನು ತಡೆಯುವ ಹಲವು ಪ್ರಥಮ ಚಿಕಿತ್ಸಾ ಔಷಧಗಳು ಮತ್ತು ಸಲಕರಣೆಗಳನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ.

'ಕಾಂಬ್ಯಾಟ್‌ ಕ್ಯಾಷುಯಲ್ಟಿ ಡ್ರಗ್ಸ್‌' ಹೆಸರಿನ ಈ ಕಿಟ್‌ ಗಾಯದಿಂದ ರಕ್ತಸ್ರಾವ ತಡೆಯುವ ಸೀಲೆಂಟ್‌, ವಿಶಿಷ್ಟ ಡ್ರೆಸ್ಸಿಂಗ್‌ ಬ್ಯಾಂಡೇಜ್‌ ಮತ್ತು ಗ್ಲಿಸರೇಟೆಡ್‌ ಸಲೈನ್‌ಗಳನ್ನು ಒಳಗೊಂಡಿರುತ್ತದೆ. ಇವುಗಳನ್ನು ಬಳಸುವುದರಿಂದ ಆಸ್ಪತ್ರೆಗೆ ಸಾಗಿಸುವವರೆಗೂ ಯೋಧರ ಜೀವ ಉಳಿಸಬಹುದು ಎಂದು ಡಿಆರ್‌ಡಿಒ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ