ಆ್ಯಪ್ನಗರ

ಜೆಇಇ ಅರ್ಹತೆ ಗಳಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಜೆಇಇ ಅಡ್ವಾನ್ಸ್‌ಡ್‌ ಫಲಿತಾಂಶದಲ್ಲಿ ಅರ್ಹತೆ ಗಳಿಸಿದವರ ಸಂಖ್ಯೆಯಲ್ಲಿ ಭಾರಿ ಇಳಿಕೆ ದಾಖಲಾಗಿದೆ.

Vijaya Karnataka Web 11 Jun 2018, 4:17 pm
ಮುಂಬಯಿ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಜೆಇಇ ಅಡ್ವಾನ್ಸ್‌ಡ್‌ ಫಲಿತಾಂಶದಲ್ಲಿ ಅರ್ಹತೆ ಗಳಿಸಿದವರ ಸಂಖ್ಯೆಯಲ್ಲಿ ಭಾರಿ ಇಳಿಕೆ ದಾಖಲಾಗಿದೆ.
Vijaya Karnataka Web JEE Topper


ಭಾನುವಾರ ಜೆಇಇ ಎ ಮೆರಿಟ್ ಲಿಸ್ಟ್‌ನಲ್ಲಿ ಅರ್ಹತೆ ಗಳಿಸಿದವರ ಪಟ್ಟಿ ಪ್ರಕಟವಾಗಿದ್ದು, ಈ ಬಾರಿ 18,138 ವಿದ್ಯಾರ್ಥಿಗಳು ಮಾತ್ರ ಅರ್ಹತೆ ಪಡೆದುಕೊಂಡಿದ್ದಾರೆ. ಕಳೆದ ವರ್ಷ 50,455 ಮಂದಿ ಅರ್ಹತೆ ಗಳಿಸಿದ್ದರು.

ಹರಿಯಾಣದ ಪಂಚಕುಲ ಜಿಲ್ಲೆಯ ಪ್ರಣವ್ ಗೋಯಲ್ ಎಂಬಾತ 337/360 ಅಂಕ ಗಳಿಸಿ ಟಾಪರ್ ಆಗಿದ್ದಾನೆ. ಉಳಿದಂತೆ ಟಾಪ್ 10 ಲಿಸ್ಟ್ ಪೈಕಿ ಐವರು ಕೋಟಾ ಅಡಿ ಅರ್ಹತೆ ಪಡೆದುಕೊಂಡವರಾಗಿದ್ದಾರೆ. ಜತೆಗೆ ಇದೇ ಮೊದಲ ಬಾರಿಗೆ ವಿಕಲಾಂಗತೆ ಕೋಟಾದಡಿ ಲೇ ಜೈನ್‌ ಮತ್ತು ನೀಲ್ ಗುಪ್ತಾ ಎಂಬವರು ಅರ್ಹತೆ ಗಳಿಸಿದ್ದಾರೆ.

10.44 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಐಐಟಿ ಜೆಇಇ (ಮೇನ್ಸ್) ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ 1.55 ಲಕ್ಷ ಮಂದಿ ಜೆಇಇ ಅಡ್ವಾನ್ಸ್ಡ್‌ ಬರೆದಿದ್ದು, ಅವರ ಪೈಕಿ 18,138 ಮಂದಿ ಅರ್ಹತೆ ಗಳಿಸಿದ್ದಾರೆ. ಆದರೆ ಪ್ರಸಕ್ತ ಸಾಲಿನಲ್ಲಿ ಐಐಟಿಯಲ್ಲಿ 11,279 ಸೀಟುಗಳು ಮಾತ್ರ ಲಭ್ಯವಿದೆ.

ಅರ್ಹತೆ ಗಳಿಸಬೇಕಾದರೆ ಕನಿಷ್ಟ ಅಗ್ರಿಗೇಟ್‌ ಅಂಕ ಜನರಲ್ ಕೆಟಗರಿಗೆ 126 ಮತ್ತು ಕೆಲವೊಂದು ಮೀಸಲಾತಿ ಹೊಂದಿದ ಸಮುದಾಯಗಳಿಗೆ 32 ಆಗಿದೆ. ಆದರೆ ಈ ಬಾರಿ ಕನಿಷ್ಠ ಸರಾಸರಿ ಅಂಕ ಗಳಿಸಲು ಹಲವು ವಿದ್ಯಾರ್ಥಿಗಳು ವಿಫಲರಾಗಿರುವುದು ಫಲಿತಾಂಶ ಇಳಿಕೆಗೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ