ಆ್ಯಪ್ನಗರ

ಡ್ರಗ್ಸ್ ಮಾರುತ್ತಿದ್ದ ತರಕಾರಿ ವ್ಯಾಪಾರಿ ಅರೆಸ್ಟ್

ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ತರಕಾರಿ ವ್ಯಾಪಾರಿಯನ್ನು ಮುಂಬೈನ ಪಶ್ಚಿಮ ಉಪನಗರ ಗೋರೆಗಾಂವ್‌ನ ಆ್ಯಂಟಿ ನಾರ್ಕೋಟಿಕ್ ಸೆಲ್ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.

Maharashtra Times 22 May 2017, 5:46 pm
ಮುಂಬಯಿ: ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ತರಕಾರಿ ವ್ಯಾಪಾರಿಯನ್ನು ಮುಂಬೈನ ಪಶ್ಚಿಮ ಉಪನಗರ ಗೋರೆಗಾಂವ್‌ನ ಆ್ಯಂಟಿ ನಾರ್ಕೋಟಿಕ್ ಸೆಲ್ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.
Vijaya Karnataka Web drugs supplier arrested in mumbai
ಡ್ರಗ್ಸ್ ಮಾರುತ್ತಿದ್ದ ತರಕಾರಿ ವ್ಯಾಪಾರಿ ಅರೆಸ್ಟ್


ಬಂಧಿತ ಆರೋಪಿಯನ್ನು ಸೂರಜ್ ಗುಪ್ತಾ (25) ಎಂದು ಗುರುತಿಸಲಾಗಿದೆ. ಈತ ಕಳೆದ ಒಂದು ವರ್ಷದಿಂದ ಮಾದಕ ದ್ರವ್ಯ (ಮೆಪೆಡ್ರೋನ್) ಮಾರಾಟ ಮಾಡುವ ಮೂಲಕ ಪ್ರತಿ ತಂಗಳು ಏಳು ಲಕ್ಷ ರೂ. ಸಂಪಾದಿಸುತ್ತಿದ್ದ ಎಂದು ಹೇಳಲಾಗುತ್ತಿದೆ.

ಕಳೆದ ತಿಂಗಳು ಚರಸ್ ಮತ್ತು ಮಿಯಾವ್ ಮಿಯಾವ್ ಹೆಸರಿನ ಮಾದಕ ದ್ರವ್ಯ ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರು. ಅಂದಿನಿಂದಲೇ ತರಕಾರಿ ವ್ಯಾಪಾರಿ ಸೂರಜ್ ಬಂಧನಕ್ಕೆ ಬಲೆ ಬೀಸಿದ್ದರು.

ಸೂರಜ್ ಗೊರಗಾಂವ್ ಚೆಕ್ ನಾಕ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ಮಾದಕ ದ್ರವ್ಯ ಮಾರಾಟದ ಕುರಿತು ಖಚಿತ ಮಾಹಿತ ಪಡೆದ ಮಾದಕ ವಸ್ತುಗಳ ನಿಷೇಧ ದಳ ವಿಭಾಗದ ಅಧಿಕಾರಿಗಳು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ 7.4 ಲಕ್ಷ ಬೆಲೆಯ 370 ಗ್ರಾಂ ಮಾದಕ ದ್ರವ್ಯ (ಮೆಪೆಡ್ರೋನ್) ಹಾಗೂ 7,92,500 ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಮೂಲ ಸುದ್ದಿ: ಮಹಾರಾಷ್ಟ್ರ ಟೈಮ್ಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ