ಆ್ಯಪ್ನಗರ

ಪೊಲೀಸ್‌ಗೆ ಮುತ್ತಿಕ್ಕಿ ಜೈಲು ಪಾಲಾದ; ವೀಡಿಯೋ ವೈರಲ್

ಪೊಲೀಸಪ್ಪನಿಗೆ ಮುತ್ತಿಕ್ಕಿದ ಬ್ಯಾಂಕ್ ಉದ್ಯೋಗಿ ಜೈಲಿನಲ್ಲೀಗ ಕಂಬಿ ಎಣಿಸುತ್ತಿದ್ದಾನೆ.

Times Now 30 Jul 2019, 11:04 am
ಹೈದರಾಬಾದ್: ಕರ್ತವ್ಯ ನಿರತ ಪೊಲೀಸರೊಬ್ಬರಿಗೆ ಮುತ್ತಿಕ್ಕಿದ ಕಾರಣಕ್ಕೆ ವ್ಯಕ್ತಿಯೊಬ್ಬ ಜೈಲು ಪಾಲಾಗಿದ್ದಾನೆ.
Vijaya Karnataka Web man_kissed_police


ಮುತ್ತಿನ ನಗರಿ ಹೈದಾರಾಬಾದಿನಲ್ಲಿ ಈ ಸ್ವಾರಸ್ಯಕರ ಘಟನೆ ನಡೆದಿದ್ದು, ಬೋನಾಲು ಉತ್ಸವದಲ್ಲಿ ಜುಲೈ 28, ರವಿವಾರ ಈ ಘಟನೆ ನಡೆದಿದ್ದು, ಆ ಸಂದರ್ಭದಲ್ಲಿ ಮುತ್ತಿಕ್ಕಿದ ವ್ಯಕ್ತಿ ಕುಡಿದ ನಶೆಯಲ್ಲಿದ್ದ ಎಂದು ತಿಳಿದುಬಂದಿದೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



ವೀಡಿಯೋದಲ್ಲೇನಿದೆ:
ಜನರ ಗುಂಪೊಂದು ರಸ್ತೆಯಲ್ಲಿ ನೃತ್ಯ ಮಾಡುತ್ತಿದ್ದು, ಅದರಲ್ಲೊಬ್ಬ ಏಕಾಏಕಿ ಪೊಲೀಸ್ ಅಧಿಕಾರಿ ಬಳಿ ಹೋಗಿ ತಬ್ಬಿಕೊಂಡು ಮುತ್ತಿಕ್ಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪೊಲೀಸ್ ಆತನನ್ನು ದೂಡಿದ್ದಾನೆ ಮತ್ತು ಕೆನ್ನೆಗೆ ಬಾರಿಸಿದ್ದಾನೆ.

ಆ ವ್ಯಕ್ತಿ ಬ್ಯಾಂಕ್ ನೌಕರನೆಂದು ತಿಳಿದು ಬಂದಿದ್ದು, ಆತನೀಗ ಪೊಲೀಸ್ ಠಾಣೆಯಲ್ಲಿದ್ದಾನೆ.

ಏನಿದು ಬೋನಾಲು?

ತೆಲಂಗಾಣದಲ್ಲಿ ವಾರ್ಷಿಕವಾಗಿ ಆಯೋಜನೆಯಾಗುವ ಹಿಂದೂ ಉತ್ಸವವಾಗಿದ್ದು, ದೇವಿ ಮೀನಾಕ್ಷಿಯ ಆರಾಧನೆ ಮಾಡಲು ತೆಲಂಗಾಣ ಮತ್ತು ಆಂಧ್ರದಿಂದ ಸಾವಿರಾರು ಭಕ್ತರು ಒಂದೆಡೆ ಸೇರುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ