ಆ್ಯಪ್ನಗರ

EBC Revervation Bill: ಮೇಲ್ಜಾತಿಗೆ ಮೀಸಲು ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ

ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ ಆದೇಶದ ಅನ್ವಯ ಮೀಸಲು ಪ್ರಮಾಣ ಶೇ.50ಕ್ಕಿಂತ ಹೆಚ್ಚು ಇರುವಂತಿಲ್ಲ. ಆದರೆ ಮೇಲ್ಜಾತಿ ಮೀಸಲು ವಿಧೇಯಕ ಜಾರಿಯಾದರೆ ಸುಪ್ರೀಂ ಆದೇಶ ಉಲ್ಲಂಘನೆಯಾಗಲಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

Vijaya Karnataka Web 10 Jan 2019, 5:04 pm
ಹೊಸದಿಲ್ಲಿ: ಮೇಲ್ಜಾತಿಯವ ಬಡವರಿಗೆ ಶೇಕಡ 10ರಷ್ಟು ಮೀಸಲು ಕಲ್ಪಿಸುವ ಐತಿಹಾಸಿಕ ವಿಧೇಯಕಕ್ಕೆ ಸಂಸತ್ತಿನ ಉಭಯ ಸದನದಲ್ಲೂ ಅಂಗೀಕಾರ ದೊರೆತ ಬೆನ್ನಲ್ಲೇ ವಿಧೇಯಕ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಮೇಲ್ಜಾತಿ ಮೀಸಲು ವಿಧೇಯಕ ಪ್ರಶ್ನಿಸಿ ಯೂತ್‌ ಫಾರ್‌ ಈಕ್ವಾಲಿಟಿ ಸಂಸ್ಥೆ ಮತ್ತು ಕೌಶಲ್‌ ಕಾಂತ್‌ ಮಿಶ್ರಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ ಆದೇಶದ ಅನ್ವಯ ಮೀಸಲು ಪ್ರಮಾಣ ಶೇ.50ಕ್ಕಿಂತ ಹೆಚ್ಚು ಇರುವಂತಿಲ್ಲ. ಆದರೆ ಮೇಲ್ಜಾತಿ ಮೀಸಲು ವಿಧೇಯಕ ಜಾರಿಯಾದರೆ ಸುಪ್ರೀಂ ಆದೇಶ ಉಲ್ಲಂಘನೆಯಾಗಲಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಮೇಲ್ಜಾತಿಯ ಬಡವರಿಗೆ ಶೇಕಡ 10ರಷ್ಟು ಮೀಸಲು ನೀಡುವ ವಿಧೇಯಕಕ್ಕೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ. ಈಗ ಇದು ರಾಷ್ಟ್ರಪತಿ ಅಂಗಳಕ್ಕೆ ತಲುಪಿದೆ.

ಒಮ್ಮೆ ರಾಷ್ಟ್ರಪತಿ ಅಂಕಿತ ನಂತರ ಈ ವಿಧೇಯಕ ಕಾನೂನಾಗಿ ಪರಿವರ್ತನೆಗೊಳ್ಳಲಿದೆ.

ಶಿಕ್ಷಣ, ಕೇಂದ್ರ, ರಾಜ್ಯ ಸರಕಾರಿ ಉದ್ಯೋಗ ಸೇರಿ ಅನೇಕ ಕಡೆ ಸಾಮಾನ್ಯ ವರ್ಗದ ಬಡವರಿಗೆ ಶೇ.10ರಷ್ಟು ಮೀಸಲು ನೀಡಲು ಈ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇದೊಂದು ಐತಿಹಾಸಿಕ ವಿಧೇಯಕ ಎಂದು ಬಿಜೆಪಿ ಬಣ್ಣಿಸಿದರೆ, ಇದು ರಾಜಕೀಯ ಗಿಮಿಕ್‌ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ