ಆ್ಯಪ್ನಗರ

ದೀಪಕ್‌ ತಲ್ವಾರ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

ದಿಲ್ಲಿ ಕೋರ್ಟ್‌ನ ವಿಶೇಷ ನ್ಯಾ.ಸಂತೋಷ್‌ ಸ್ನೇಹಿ ಮಾನ್‌ ಅವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಏಪ್ರಿಲ್‌ 15ರ ವಿಚಾರಣೆ ವೇಳೆ ಆರೋಪ ಪಟ್ಟಿಯನ್ನು ಪರಿಗಣಿಸಲಿದ್ದಾರೆ.

Vijaya Karnataka 31 Mar 2019, 5:00 am
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಮಧ್ಯವರ್ತಿ ದೀಪಕ್‌ ತಲ್ವಾರ್‌ ಮತ್ತು ಆತನ ಪುತ್ರ ಆದಿತ್ಯ ತಲ್ವಾರ್‌ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ) ಶನಿವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.
Vijaya Karnataka Web talwar


ದಿಲ್ಲಿ ಕೋರ್ಟ್‌ನ ವಿಶೇಷ ನ್ಯಾ.ಸಂತೋಷ್‌ ಸ್ನೇಹಿ ಮಾನ್‌ ಅವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಏಪ್ರಿಲ್‌ 15ರ ವಿಚಾರಣೆ ವೇಳೆ ಆರೋಪ ಪಟ್ಟಿಯನ್ನು ಪರಿಗಣಿಸಲಿದ್ದಾರೆ.

ಜ.30ರಂದು ತಲ್ವಾರ್‌ನನ್ನು ಇ.ಡಿ ಅಧಿಕಾರಿಗಳು ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ವಿದೇಶಿ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ ಆರೋಪ ತಲ್ವಾರ್‌ ಮೇಲಿದೆ. ಇದರಿಂದ ಏರ್‌ ಇಂಡಿಯಾ ಸಂಸ್ಥೆಗೆ ಭಾರಿ ನಷ್ಟ ಉಂಟಾಗಿದೆ.

''ತಲ್ವಾರ್‌ ಹೆಚ್ಚಿನ ವಿಚಾರಣೆ ಬಾಕಿ ಇದೆ. ಕತಾರ್‌ ಏರ್‌ಲೈನ್ಸ್‌, ಎಮಿರೇಟ್ಸ್‌, ಏರ್‌ ಅರೇಬಿಯಾ ಸೇರಿದಂತೆ ವಿದೇಶಿ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಲಾಭವಾಗುವಂತೆ ಸಹಾಯ ಮಾಡಿರುವ ವಿಮಾನಯಾನ ಸಚಿವಾಲಯ, ನ್ಯಾಷನಲ್‌ ಏವಿಯೇಷನ್‌ ಕಂಪನಿ ಆಫ್‌ ಇಂಡಿಯಾ ಲಿಮಿಟೆಡ್‌ ಮತ್ತು ಏರ್‌ ಇಂಡಿಯಾ ಅಧಿಕಾರಿಗಳ ಹೆಸರುಗಳು ಬಹಿರಂಗಗೊಳ್ಳಬೇಕಿದೆ. ತನಿಖೆ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲಿ ಪೂರಕ ಆರೋಪ ಪಟ್ಟಿ ಸಲ್ಲಿಸಲಾಗುವುದು,'' ಎಂದು ವಿಚಾರಣೆ ವೇಳೆ ಇ.ಡಿ. ವಿಶೇಷ ಸಾರ್ವಜನಿಕ ಅಭಿಯೋಜಕರು ತಿಳಿಸಿದ್ದಾರೆ.

2008ರ ಏ.23ರಿಂದ 2009ರ ಫೆ.6ರ ನಡುವೆ ಕಮಿಷನ್‌ ರೂಪದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತಲ್ವಾರ್‌ ಒಡೆತನದ ಸಂಸ್ಥೆಗಳಿಗೆ ವಿದೇಶಿ ಖಾಸಗಿ ವಿಮಾನಯಾನ ಸಂಸ್ಥೆಗಳಿಂದ 60.54 ದಶಲಕ್ಷ ಡಾಲರ್‌ ಹರಿದು ಬಂದಿದೆ ಎಂದು ಇ.ಡಿ ಆರೋಪಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ