ಆ್ಯಪ್ನಗರ

INX Media Case: ಚಿದಂಬರಂಗೆ ಇಡಿ ಕೇಳಲಿರುವ ಪ್ರಶ್ನೆಗಳೇನು ಗೊತ್ತೇ?

ಸ್ಪೇನ್‌ನಲ್ಲಿನ ಟೆನ್ನಿಸ್‌ ಕ್ಲಬ್‌, ಯುಕೆಯಲ್ಲಿ ಖರೀದಿಸಿದ ಕಾಟೇಜ್‌ ಹಾಗೂ ದೇಶದ ವಿವಿಧ ಭಾಗದಲ್ಲಿ ಕಾರ್ತಿ ಚಿದಂಬಂರಂ ಖರೀಸಿದಿಸಿದ ಆಸ್ತಿಗಳಿಗೆ ಹಣದ ಮೂಲದ ಬಗ್ಗೆ ಇಡಿ ಚಿದಂಬರಂ ಅವರನ್ನು ವಿಚಾರಣೆ ನಡೆಸಲಿದೆ ಎಂದು ತಿಳಿದು ಬಂದಿದೆ.

TIMESOFINDIA.COM 21 Aug 2019, 2:55 pm
ಹೊಸದಿಲ್ಲಿ: ಭಾರತ ಹಾಗೂ ವಿದೇಶಗಳಲ್ಲಿ ಕಾರ್ತಿ ಚಿದಂಬರಂ ಖರೀದಿಸಿದ ಆಸ್ತಿಗಳ ಬಗ್ಗೆ ಕೇಂದ್ರ ಮಾಜಿ ಸಚಿವ ಚಿದಂಬರಂ ಅವರಲ್ಲಿ ಜಾರಿ ನಿರ್ದೇಶನಾಲಯ ವಿವರಣೆ ಕೇಳಲಿದೆ ಎಂದು ತಿಳಿದು ಬಂದಿದೆ.
Vijaya Karnataka Web chidu2


ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿಗೊಳಿಸಿರುವ ಜಾರಿ ನಿರ್ದೇಶನಾಲಯ, ಕಾರ್ತಿ ಚಿದಂಬರಂ ಸ್ಪೇನ್‌ನಲ್ಲಿನ ಟೆನ್ನಿಸ್‌ ಕ್ಲಬ್‌, ಯುಕೆನಲ್ಲಿ ಕಾಟೇಜ್ ಹಾಗೂ ದೇಶದ ವಿವಿಧೆಡೆ ಖರೀದಿಸಿದ ಆಸ್ತಿಗಳಿಗೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಕಾರ್ತಿ ಚಿದಂಬರಂ ಒಟ್ಟಾರೆ 54 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ್ದರು ಎಂದು ತಿಳಿದು ಬಂದಿದೆ.

ಐಎನ್‌ಎಕ್ಸ್‌ ಮೀಡಿಯಾ ಹಗರಣ: ಚಿದಂಬರಂ ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದು ಹೇಗೆ?

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಪಡೆದ ಲಂಚದಿಂದ ಕಾರ್ತಿ ಚಿದಂಬರಂ ಈ ಎಲ್ಲ ಆಸ್ತಿಗಳನ್ನು ಖರೀಸಿದಿಸಿದ್ದಾರೆ ಎಂದು 2018ರಲ್ಲಿ ಇಡಿ ತಿಳಿಸಿತ್ತು. ಏರ್‌ಸೆಲ್‌ ಮ್ಯಾಕ್ಸಿಸ್‌ 2G ಹಗರಣ ಹಾಗೂ ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಚಿದಂಬರಂ ಸಹ ಆರೋಪಿಯಾಗಿದ್ದಾರೆ ಎಂದು ಇಡಿ ಹೇಳಿತ್ತು.

ಸ್ಪೇನ್‌ನಲ್ಲಿ 15 ಕೋಟಿ ಮೌಲ್ಯದ ಟೆನ್ನಿಸ್‌ ಕ್ಲಬ್‌, ದಿಲ್ಲಿಯ ಚಿದಂಬರಂ ಪ್ರಸ್ತುತ ವಾಸವಿರುವ 16 ಕೋಟೆ ಮೌಲ್ಯದ ಬಂಗಲೆ ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅವ್ಯವಹಾರದಿಂದ ಪಡೆದುಕೊಂಡಿದ್ದು ಎಂದು ಇಡಿ ಆರೋಪಿಸಿದೆ.

ಚೆನ್ನೈನ ನುಂಗಂಪಾಕ್ಕಂನ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ ಕಾರ್ತಿ ಚಿದಂಬರಂ ಅವರ ಹೆಸರಲ್ಲಿ 9.23 ಕೋಟಿ ರೂ., ಡಿಸಿಬಿ ಬ್ಯಾಂಕ್‌ನ ಎಎಸ್‌ಪಿಎಲ್‌(ಅಡ್ವಾಂಟೇಜ್‌ ಸ್ಟ್ರಾಟೆಜಿಕ್‌ ಕನ್‌ಸಲ್ಟಿಂಗ್‌ ಪ್ರೈ.ಲಿ.)ನಲ್ಲಿ 90 ಲಕ್ಷ ರೂ. ಎಫ್‌ಡಿಯನ್ನು ಇಡಿ ವಶಕ್ಕೆ ಪಡೆದಿತ್ತು.
ಕಾರ್ತಿ ಚಿದಂಬರಂ ಅವರ ಸೂಚನೆಯಂತೆ ಪೀಟರ್‌ ಮುಖರ್ಜಿಯಾ ಎಂಬವರಿಂದ ಎಎಸ್‌ಸಿಪಿಎಲ್‌ ಸಂಸ್ಥೆಗೆ ಅವ್ಯವಹಾರದ ಮೂಲಕ 3.09 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಈ ವ್ಯವಹಾರ ಸತ್ಯಾಂಶವನ್ನು ಮುಚ್ಚಿಡಲು ಮಾಡಲಾಗಿದೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಎಎಸ್‌ಪಿಸಿಎಲ್‌ ಈ ಹಣದಿಂದ ವಾಸನ್‌ ಹೆಲ್ತ್‌ ಕೇರ್‌ನ ಕೆಲವು ಶೇರ್‌ಗಳನ್ನು ಖರೀದಿಸಿದೆ. ಅಲ್ಲದೆ ಇದೇ ಶೇರ್‌ಗಳನ್ನು 41 ಕೋಟಿ ರೂ. ಲಾಭದಲ್ಲಿ ಮಾರಾಟ ಮಾಡಲಾಗಿದೆ ಎಂದು ಇಡಿ ಹೇಳಿದೆ.

ಈ ಸುದ್ದಿಯನ್ನೂ ಓದಿರಿ: ವಿತ್ತ ಸಚಿವರಾಗಿದ್ದ ಚಿದಂಬರಂ ಬಂಧನದ ಭೀತಿ ಎದುರಿಸುತ್ತಿರುವುದೇಕೆ? ಏನಿದು ಪ್ರಕರಣ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ